ಇಸ್ಲಾಮಾಬಾದ್ (ಪಿಟಿಐ): ಲಾಡೆನ್ ಪಾಕಿಸ್ತಾನದಲ್ಲಿ ಯಾವತ್ತೂ ನೆಲೆಯೂರಿರಲೇ ಇಲ್ಲ ಎಂದು ಐಎಸ್ಐನ ಮಾಜಿ ಮುಖ್ಯಸ್ಥ ಹಮೀದ್ ಗುಲ್ ಪ್ರತಿಪಾದಿಸಿದ್ದಾರೆ. ದೇಶದ ಗಡಿ ಭಾಗವಾದ ಅಬೋಟಾಬಾದ್ನಲ್ಲಿ ಲಾಡೆನ್ ಇಷ್ಟು ದಿನಗಳ ಕಾಲ ಅಡಗಿಕೊಂಡಿದ್ದನು ಎಂಬ ವರದಿಗಳ ಬಗ್ಗೆ ಅವರು ಸಖೇದಾಶ್ಚರ್ಯ ವ್ಯಕ್ತಪಡಿಸಿದ್ದಾರೆ. ಲಾಡೆನ್ ಬಹುಶಃ ಚಿಕಿತ್ಸೆ ಪಡೆಯಲು ಬಂದಿರಬೇಕು ಎಂದು ಗುಲ್ ಅಂದಾಜಿಸಿದ್ದಾರೆ.
ಲಾಡೆನ್ ಸಾವು ನಿಸ್ಸಂದೇಹ

ಬಾಸ್ಟನ್ (ಪಿಟಿಐ): ಅಮೆರಿಕದ ಸಿಐಎ ಕಾರ್ಯಾಚರಣೆಯಲ್ಲಿ ಸತ್ತಿರುವವನು ಲಾಡೆನ್ ಎಂಬುದು ನಿಸ್ಸಂದೇಹ ಎಂದು ಅಮೆರಿಕ ಹೇಳಿದೆ. ಲಾಡೆನ್ನ ಮೃತದೇಹದ ಜೀವಕೋಶಗಳನ್ನು ಆತನ ಮತ್ತೊಬ್ಬ ಸಹೋದರಿಯ ವಂಶವಾಹಿಯೊಂದಿಗೆ ಪರೀಕ್ಷಿಸಲಾಗಿದೆ ಮತ್ತು ಇವು ಲಾಡೆನ್ದೇ ಎಂದು ದೃಢಪಡಿಸಿಕೊಳ್ಳಲಾಗಿದೆ.

ಬಾಸ್ಟನ್ನಲ್ಲಿ ಕೆಲ ವರ್ಷಗಳ ಹಿಂದೆ ಲಾಡೆನ್ನ ಸಹೋದರಿ ಮಿದುಳು ಕ್ಯಾನ್ಸರ್ನಿಂದ ತೀರಿಕೊಂಡಿದ್ದರು. ಆಗ ಈಕೆಯ ವಂಶವಾಹಿಯನ್ನು ಕೋರ್ಟ್ ಆದೇಶದ ಮೂಲಕ ರಕ್ಷಿಸಿಡಲಾಗಿತ್ತು. ಒಂದೊಮ್ಮೆ ಲಾಡೆನ್ ಸೆರೆ ಸಿಕ್ಕರೆ ಆಗ ಪರಿಶೀಲನೆಗೆ ಅನುಕೂಲವಾಗುತ್ತದೆ ಎಂದು ಮುಂದಾಲೋಚನ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.