ಹಾವೇರಿ: ಮಹಾತಪಸ್ವಿ ಮದುಜ್ಜಯಿನಿ ಸಿದ್ಧಲಿಂಗ ಶ್ರೀಗಳ ಅಮೃತಮಹೋತ್ಸವ ಕಾರ್ಯಕ್ರಮದಡಿ ಸ ಕಾರ ಸಂಘಗಳಿಗೆ ವೃತ್ತಿಚೈತನ್ಯರತ್ನ ಪ್ರಶಸ್ತಿ ಪ್ರದಾನ, ಸಹಕಾರಿಗಳಿಗೆ ಪ್ರೇರಣಾ ಶಿಬಿರ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಸೆ.18 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಶಿವಶಕ್ತಿ ಪ್ಯಾಲೇಸ್ನಲ್ಲಿ ಏರ್ಪಡಿಸ ಲಾಗಿದೆ ಎಂದು ಮಾಹೇಶ್ವರ ಸೊಸೈಟಿ ಅಧ್ಯಕ್ಷ ಎಸ್.ಎನ್.ಹಿರೇಮಠ ಹಾಗೂ ಅಂತರರಾಷ್ಟ್ರೀಯ ವೀರಶೈವ ಫೌಂಡೇಶನ್ ಕಾರ್ಯ ನಿರ್ವಾಹಕ ಅಧಿಕಾರಿ ಶಿವಯೋಗಿ ಕಂಬಾಳಿಮಠ ತಿಳಿಸಿದರು.

ಮಂಗಳವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ನಗರದ ಮಾಹೇಶ್ವರ ಕ್ರೆಡಿಟ್ ಕೋ-ಅಪ್ ಸೊಸೈಟಿ ಹಾಗೂ ವೀರಶೈವ ಫೌಂಡೇ ಶನ್ ಆಶ್ರಯದಲ್ಲಿ ನಡೆಯುವ ಈ ಸಮಾರಂಭದ ಸಾನ್ನಿಧ್ಯವನ್ನು ರಂಭಾಪುರಿ ವೀರಸೋಮೇಶ್ವರ ಶ್ರೀಗಳು ವಹಿಸಲಿದ್ದಾರೆ.

ಸಹಕಾರ ಸಚಿವ ಲಕ್ಷ್ಮಣ ಸವದಿ ಉದ್ಘಾಟಿಸಲಿದ್ದಾರೆ. ಸಹಕಾರ ಮಂಡಳದ ಅಧ್ಯಕ್ಷ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ.ಉದಾಸಿ, ಸಿದ್ಧಲಿಂಗ ಶ್ರೀಗಳ ಭಾವಚಿತ್ರ ಬಿಡುಗಡೆ ಮಾಡಲಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ರಾಜ್ಯ ವಸತಿ ಮಹಾ ಮಂಡಳದ ಅಧ್ಯಕ್ಷ ಎಸ್.ಟಿ.ಸೋಮಶೇಖರ, ರಾಜ್ಯ ಪತ್ತಿನ ಸಹಕಾರ ಮಹಾಮಂಡಳದ ಅಧ್ಯಕ್ಷ ಬಿ.ಎಲ್.ಲಕ್ಕೇಗೌಡ, ರಾಜ್ಯ ಗ್ರಾಹಕರ ಮಹಾಮಂಡಳದ ಅಧ್ಯಕ್ಷ ಜಿ.ಪಿ.ಪಾಟೀಲ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಮಬಗೊಂಡ, ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾದ ಬಿ.ಡಿ.ಪಾಟೀಲ, ಎಲ್.ಎಂ.ಪಾಟೀಲ, ಶಿವನಗೌಡ ಬಿರಾದಾರ, ಜಗದೀಶ ಕವಟಗಿಮಠ, ಕುಮಾರಸ್ವಾಮಿ ಸದಾರಾಧ್ಯಮಠ, ಮೋಹನ ದೊಡ್ಡಮನಿ. ಐವಿಎಫ್ ಅಧ್ಯಕ್ಷ ಕೆ.ಎಂ.ಶ್ರೀಶೈಲ, ಹಾವೇರಿ ಯುನಿಯನ್ ಅಧ್ಯಕ್ಷೆ ರತ್ನಾ ಭೀಮಕ್ಕನವರ ಆಗಮಿಸಲಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಚಿವ ಸಿ.ಸಿ.ಪಾಟೀಲ, ಶಾಸಕ ನೆಹರೂ ಓಲೇಕಾರ, ವಿಧಾನ ಪರಿಷತ್ ಸದಸ್ಯರಾದ ಶಿವರಾಜ ಸಜ್ಜನರ, ಮಹಾಂತೇಶ ಕವಟಗಿಮಠ ಅವರು ಗುರುಕಾರಣ್ಯ ಪಡೆಯಲಿದ್ದಾರೆ ಎಂದ ಅವರು, ಸಹಕಾರ ಬಂಧುಗಳಿಗೆ ಡಾ.ನಂದೀಶ ಹಿರೇಮಠ ಮತ್ತು ಧಾರವಾಡದ ಎಸ್.ಎಸ್.ಹಾದಿಮನಿ ಅವರು ಅಭಿವೃದ್ಧಿ ಪ್ರೇರಣಾ ಶಿಬಿರ ನಡೆಸಲಿದ್ದಾರೆ ಎಂದು ತಿಳಿಸಿದರು.

ವೃತ್ತಿಚೈತನ್ಯರತ್ನ ಪ್ರಶಸ್ತಿ ಪ್ರದಾನ: ಸಿದ್ಧಲಿಂಗ ಶ್ರೀಗಳ ಅಮೃತಮಹೋತ್ಸವ ಹಿನ್ನಲೆಯಲ್ಲಿ ರಾಜ್ಯದ 75 ಸಹಕಾರ ಸಂಘಗಳಿಗೆ ವೃತ್ತಿಚೈತನ್ಯರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದ ಅವರು, ದ್ವೇಷ ರಹಿತ ಸಮಾಜ ನಿರ್ಮಾಣ ಮಾಡಬೇಕೆಂಬ ಸದುದ್ದೇಶದಿಂದ 75 ಲಿಂಗಬೆಳಗಿನ ಅಮೃತಮಹೋ ತ್ಸವ ರಾಷ್ಟ್ರೀಯ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಸಂಘದ ಹಿರಿಯ ನಾಗರಿಕರಾದ ಆರ್.ಎಂ.ಹಿರೇಮಠ, ಆರ್.ಬಿ. ಚಿಕ್ಕ ಮಠ ಹಾಗೂ ವರ್ಷದ ಗ್ರಾಹಕರಾಗಿ ಆಯ್ಕೆಯಾದ ಶಿವಬಸಯ್ಯ ಹಿರೇಮಠ ಮತ್ತು ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುವುದು ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಎಸ್.ಸಿ.ಮಳಿಮಠ, ಸಿ.ಎಫ್. ಮರಡೂರು, ಎಸ್.ಜಿ.ಪಾಟೀಲ ಅಲ್ಲದೇ ಅನೇಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.