ಭಾನುವಾರ, ಜೂನ್ 7, 2020
24 °C

ಲಿಬಿಯಾದ ಪದಚ್ಯುತ ಸರ್ವಾಧಿಕಾರಿ ಗಡ್ಡಾಫಿ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಬಿಯಾದ ಪದಚ್ಯುತ ಸರ್ವಾಧಿಕಾರಿ ಗಡ್ಡಾಫಿ ಹತ್ಯೆ

ಟ್ರಿಪೋಲಿ (ಪಿಟಿಐ): ಲಿಬಿಯಾದ ಪದಚ್ಯುತ ಸರ್ವಾಧಿಕಾರಿ ಮುಅಮ್ಮರ್ ಗಡ್ಡಾಫಿಯನ್ನು ಬಂಡುಕೋರರು ಗುರುವಾರ ಸಿರ್ಟೆ ಪಟ್ಟಣದಲ್ಲಿ ನಡೆದ ಭೀಕರ ಹೋರಾಟದಲ್ಲಿ ಗುಂಡಿಟ್ಟು ಕೊಲೆಗೈದಿದ್ದಾರೆ.ಲಿಬಿಯಾವನ್ನು ನಾಲ್ಕು ದಶಕಗಳ ಕಾಲ ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ಆಡಳಿತ ನಡೆಸಿದ್ದ ಗಡ್ಡಾಫಿಯನ್ನು ಸುರಂಗದಲ್ಲಿ ಅವಿತಿದ್ದಾಗ ಹೊರಬರುವಂತೆ ಮಾಡಲಾಯಿತು. ಕದನದಲ್ಲಿ ತೀವ್ರವಾಗಿ ಗಾಯಗೊಂಡ ಗಡ್ಡಾಫಿ ನಂತರ ಮೃತನಾದ ಎಂದು ವರದಿಗಳು ಹೇಳಿವೆ.ಗಾಯಗೊಂಡಿದ್ದ ಗಡ್ಡಾಫಿಯನ್ನು ಬೇರೆ ಕಡೆಗೆ ಸಾಗಿಸುತ್ತಿದ್ದಾಗಲೇ ಆತ ಮೃತನಾದ ಎಂದು ವರದಿಗಳು ಹೇಳಿವೆ.

ಗಡ್ಡಾಫಿಯ ಪುತ್ರ ಮುತಾಸ್ಸಿಮ್ ಕೂಡಾ ಸಿರ್ಟೆಯಲ್ಲಿ ಸತ್ತು ಬಿದ್ದಿರುವುದು ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.