ಸೋಮವಾರ, ಮೇ 17, 2021
31 °C
ಬ್ಯಾಡ್ಮಿಂಟನ್ ಸೂಪರ್ ಸರಣಿ

ಲೀ ಚೊಂಗ್‌ಗೆ ಸಿಂಗಲ್ಸ್ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಕಾರ್ತ (ಐಎಎನ್‌ಎಸ್): ಮಲೇಷ್ಯಾದ ಲೀ ಚೊಂಗ್ ವಿ ಹಾಗೂ ಚೀನಾದ ಲಿ ಕ್ಸುಯೆರುಯ್ ಇಲ್ಲಿ ಕೊನೆಗೊಂಡ ಇಂಡೊನೇಷ್ಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು.ಅಗ್ರಶ್ರೇಯಾಂಕದ ಆಟಗಾರ ಚೊಂಗ್ ವಿ ಫೈನಲ್‌ನಲ್ಲಿ 21-15, 21-14 ರಲ್ಲಿ ಶ್ರೇಯಾಂಕ ರಹಿತ ಆಟಗಾರ ಜರ್ಮನಿಯ ಮಾರ್ಕ್ ವೆಬ್ಲೆರ್ ವಿರುದ್ಧ ಗೆದ್ದರು. ಈ ಮೂಲಕ ಇಲ್ಲಿ ಐದನೇ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು.ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಕ್ಸುಯೆರುಯ್ 21-16, 18-21, 21-17 ರಲ್ಲಿ ಜರ್ಮನಿಯ ಜೂಲಿಯಾನ್ ಶೆಂಕ್ ವಿರುದ್ಧ ಗೆದ್ದು ಪ್ರಶಸ್ತಿ ತಮ್ಮದಾಗಿಸಿಕೊಂಡರು. ಸೆಮಿಫೈನಲ್‌ನಲ್ಲಿ ಭಾರತದ ಸೈನಾ ಅವರನ್ನು ಮಣಿಸಿದ್ದ ಶೆಂಕ್ `ರನ್ನರ್‌ಅಪ್' ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.