ಲೋಕಪಾಲ ಮಸೂದೆ: ಸಿವಿಸಿ, ಸಿಬಿಐ ಅಭಿಪ್ರಾಯ...

7

ಲೋಕಪಾಲ ಮಸೂದೆ: ಸಿವಿಸಿ, ಸಿಬಿಐ ಅಭಿಪ್ರಾಯ...

Published:
Updated:

ನವದೆಹಲಿ, (ಪಿಟಿಐ):  ಅಣ್ಣಾ ಹಜಾರೆ ತಂಡದ ಸಲಹೆಗಳನ್ನು ಮಾನ್ಯ ಮಾಡಿ ತಮ್ಮ ಸಂಸ್ಥೆಗಳ ದಿನನಿತ್ಯದ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಸಿಬಿಐ ನಿರ್ದೇಶಕ ಎ.ಪಿ. ಸಿಂಗ್ ಮತ್ತು ಕೇಂದ್ರ ಜಾಗೃತ ಆಯೋಗದ ಆಯುಕ್ತ ಪ್ರದೀಪ್ ಕುಮಾರ್ ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿದ್ದಾರೆ.ಸಿಬಿಐ ನಿರ್ದೇಶಕ ಮತ್ತು ಸಿವಿಸಿ ಆಯುಕ್ತರನ್ನು ಲೋಕಪಾಲ ವ್ಯವಸ್ಥೆಯ ಅಧಿಕಾರೇತರ ಸದಸ್ಯರನ್ನಾಗಿ ಮಾಡಬೇಕು. ತನಿಖಾ ಸಂಸ್ಥೆಗಳ ಮುಖ್ಯಸ್ಥರನ್ನು ಅಧಿಕಾರೇತರ ಸದಸ್ಯರನ್ನಾಗಿ ಮಾಡುವುದರಿಂದ ಭ್ರಷ್ಟಾಚಾರ ತನಿಖೆಯ ವಿಚಾರದಲ್ಲಿ ಸಮನ್ವಯತೆ ಸಾಧಿಸಬಹುದು ಎಂದು ಎಂದು ಇವರು ಸಲಹೆ ನೀಡಿದರು.ಸಿಬಿಐನ ಭ್ರಷ್ಟಾಚಾರ ವಿರೋಧಿ ವಿಭಾಗವನ್ನು ಲೋಕಪಾಲ ವ್ಯವಸ್ಥೆಯಡಿ ತಂದರೆ ತನಿಖೆಯನ್ನು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಸಿಂಗ್ ಹೇಳಿದರು.ಭ್ರಷ್ಟಾಚಾರ ಪ್ರಕರಣಗಳ ತನಿಖೆಯ ಒಟ್ಟಾರೆ ಮೇಲ್ವಿಚಾರಣೆ ಅಧಿಕಾರ ಲೋಕಪಾಲ ವ್ಯವಸ್ಥೆಗೆ ಇರಲಿ. ಇದಲ್ಲದೆ ತಮ್ಮ ಸಂಸ್ಥೆಯ ಹಣಕಾಸು, ಕಾನೂನು ಮತ್ತು ಆಡಳಿತಕ್ಕೆ ಸಂಬಂಧಿಸಿದ ಅಗತ್ಯ ಪೂರೈಸುವ ಅಧಿಕಾರ ಲೋಕಪಾಲರಿಗೆ ಇರಲಿ ಎಂದು ಸಿಬಿಐ ನಿರ್ದೇಶಕ ಸಿಂಗ್ ಸಲಹೆ ಮಾಡಿದ್ದಾರೆ.ಸಿಬಿಐ ನಿರ್ದೇಶಕರ ಅಧಿಕಾರಾವಧಿ ಐದು ವರ್ಷಗಳದ್ದಾಗಿರಬೇಕು ಅಥವಾ 65 ವರ್ಷದವರೆಗೆ ಅಧಿಕಾರದಲ್ಲಿರಲು ಅವಕಾಶವಿರಬೇಕು. ಈ ಎರಡರಲ್ಲಿ ಯಾವುದು ಮೊದಲೋ ಅದನ್ನು ಜಾರಿ ಮಾಡಬೇಕು. ಲೋಕಪಾಲ ಸಂಸ್ಥೆಯಲ್ಲಿ ಪ್ರತ್ಯೇಕ ತನಿಖಾ ವಿಭಾಗ ರಚಿಸಿದರೆ ಸಿಬಿಐನ ಈಗಿನ ಕೆಲಸಕ್ಕೆ ಧಕ್ಕೆ ಉಂಟಾಗುತ್ತದೆ ಎಂಬುದು ಅವರ ಅಭಿಪ್ರಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry