ಬುಧವಾರ, ಜನವರಿ 29, 2020
25 °C

ಲೋಕಸಭೆಗೆ ಎಎಪಿ ಸಿದ್ಧ

ಅನಿಲ್‌ ಸಿನ್ಹಾ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿ ವಿಧಾನಸಭಾ ಚುನಾ­ವಣೆಯಲ್ಲಿ ಆಮ್‌ ಆದ್ಮಿ ಪಾರ್ಟಿ (ಎಎಪಿ) ಪ್ರಭಾವಶಾಲಿ ಸಾಧನೆ ತೋರಿರುವುದು, ಆ ಪಕ್ಷಕ್ಕೆ  ತನ್ನ ಯೋಜನೆಯೊಂದಿಗೆ  ರಾಷ್ಟ್ರೀಯ ರಾಜ­ಕಾರಣ ಪ್ರವೇಶಿಸಲು ಅನುವು ಮಾಡಿಕೊಟ್ಟಿದೆ.ಎಎಪಿ ಮೂಲಗಳ ಪ್ರಕಾರ, ದೆಹಲಿ­­ಯಿಂದ ಹೊರಗಡೆ ನೋಡು­ತ್ತಿರುವ ಪಕ್ಷದ ತಂಡವು ಈಗಾಗಲೇ ಯೋಜನೆ­ಯೊಂದನ್ನು ಸಿದ್ಧಪಡಿಸಿದೆ. ಇನ್ನೊಂದು ವಾರದಲ್ಲಿ ಇದು ಕಾರ್ಯ­ರೂಪಕ್ಕೂ ಬರ­ಲಿದೆ. ಇದರ ಮೂಲ ಧ್ಯೇಯ, ಭ್ರಷ್ಟಾ­ಚಾರ ರಹಿತ ರಾಜ­ಕೀಯ ಮತ್ತು ಬೆಲೆ ಏರಿಕೆಗೆ ತಡೆ ಹಾಕುವುದಾಗಿದೆ.‘ದೇಶದಾದ್ಯಂತ ನಾವು ಪಕ್ಷದ ಸ್ವರೂಪ­ವನ್ನು ರೂಪಿಸುತ್ತಿದ್ದೇವೆ ಮತ್ತು ಮುಂದಿನ ಲೋಕಸಭಾ ಚುನಾವಣೆ­ಯಲ್ಲಿ ಹೋರಾ­­ಡಲು ಈಗಾಗಲೇ ನಿರ್ಧರಿಸಿ­ದ್ದೇವೆ. ದೆಹಲಿ ವಿಧಾನಸಭಾ ಚುನಾ­ವಣೆ­ಯಲ್ಲಿ ಪ್ರಯೋಗಾತ್ಮಕ ಹೋರಾಟ ನಡೆಸಿದ್ದು, ಇದರಲ್ಲಿ ಯಶಸ್ವಿ­ಯಾಗಿರುವುದು ಸಾಬೀತಾಗಿದೆ’ ಎಂದು ಕೆಲವು ರಾಜ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪಕ್ಷದ ಹಿರಿಯ ನಾಯಕ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರೊಬ್ಬರು ಹೇಳಿದ್ದಾರೆ.‘ಪಕ್ಷವನ್ನು ಸ್ಥಾಪಿಸಿದ ಸಂದರ್ಭದಲ್ಲಿ ಚುನಾವಣಾ ರಾಜಕೀಯ ಪ್ರವೇಶಿಸಲು ದೆಹಲಿ ವಿಧಾನಸಭಾ ಚುನಾ­ವಣೆ ನಮ­ಗೊಂದು ಪರೀಕ್ಷೆ ಎಂದಷ್ಟೇ ನಿರ್ಧರಿಸಿ­ದ್ದೆವು’ ಎಂದು ಅವರು ನುಡಿದಿದ್ದಾರೆ.ಪಕ್ಷವು ಈಗಾಗಲೇ 17 ರಾಜ್ಯಗಳಲ್ಲಿ 300 ಜಿಲ್ಲಾ ಘಟಕಗಳನ್ನು ರಚಿಸಿದೆ.ಪಕ್ಷದ ಮೂಲಗಳು ತಿಳಿಸುವಂತೆ, ಪಕ್ಷವು ಆರ್ಥಿಕ, ಸಾಮಾಜಿಕ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಮಹತ್ವದ ನೀತಿ ದಾಖಲೆ ಹೊಂದಿ­ದ್ದರೂ, ಲೋಕಸಭಾ ಚುನಾವಣಾ ರಾಜ­ಕೀಯ ಪ್ರವೇಶಿಸುವಾಗ, ಇದನ್ನು ಒಂದೆ­ರಡು ವಿಷಯಗಳಿಗೆ ಮಾತ್ರ ಸೀಮಿತ­ಗೊಳಿಸಲಾಗುತ್ತದೆ.  ಇದರಲ್ಲಿ ಮುಖ್ಯವಾಗಿ, ಭ್ರಷ್ಟಾ­ಚಾರ ರಹಿತ ಆಡ­ಳಿತ ಮತ್ತು ರಾಜ­ಕೀಯ ಹಾಗೂ ಬೆಲೆ ಏರಿಕೆ ಪ್ರಮುಖ ಸ್ಥಾನ ಪಡೆಯಲಿವೆ.ಲೋಕಸಭಾ ಚುನಾವಣೆಯಲ್ಲಿ‘ಸ್ವಚ್ಛ ಮತ್ತು ಪಾರದರ್ಶಕ ಆಡಳಿತ’ ನೀಡುವ ಭರವಸೆಯೊಂದಿಗೆ ಎಎಪಿ ಪ್ರಚಾರ ನಡೆ­ಸುತ್ತದೆ ಎಂದು ಪಕ್ಷ ಸ್ಪಷ್ಟಪಡಿಸಿದೆ. ಇದನ್ನು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರೂ ಭಾನು­ವಾರ ತಮ್ಮ ಬೆಂಬ­ಲಿಗರನ್ನುದ್ದೇಶಿಸಿ ಮಾತ­ನಾಡುತ್ತಾ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)