ಸಿಡ್ನಿ: ಇಲ್ಲಿ ನಡೆಯುತ್ತಿರುವ ಆ್ಯಷಸ್ ಟೆಸ್ಟ್ ಸರಣಿಯ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಟೆಸ್ಟ್ ತಂಡದ ಹಂಗಾಮಿ ನಾಯಕ ಸ್ಟೀವ್ ಸ್ಮಿತ್ ಅವರು ಶತಕ ಸಿಡಿಸಿ ಮಿಂಚಿದ್ದಾರೆ. ಆ ಮೂಲಕ ಕನ್ನಡಿಗ ರಾಹುಲ್ ದ್ರಾವಿಡ್ ಅವರ ದಾಖಲೆ ಮುರಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ತನ್ನ ಮೊದಲ ಇನಿಂಗ್ಸ್ನಲ್ಲಿ ಜೋ ರೂಟ್ ಅವರ ಶತಕದ (160 ರನ್) ನೆರವಿನಿಂದ 384 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ತನ್ನ ಮೊದಲ ಇನಿಂಗ್ಸ್ನಲ್ಲಿ ಬೃಹತ್ ಮುನ್ನಡೆಯತ್ತ ಹೆಜ್ಜೆ ಇಟ್ಟಿದೆ.

ಆಸ್ಟ್ರೇಲಿಯಾ ತಂಡ ಮೂರನೇ ದಿನದಾಟದ ಅಂತ್ಯಕ್ಕೆ 518/7 ವಿಕೆಟ್ ಕಳೆದುಕೊಂಡಿದೆ. ಆಸ್ಟ್ರೇಲಿಯಾ ಪರ ಮೊದಲ ಇನಿಂಗ್ಸ್ನಲ್ಲಿ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಶತಕ (163 ರನ್) ಹಾಗೂ ಸ್ಟೀವ್ ಸ್ಮಿತ್ ಅಜೇಯ ಶತಕ ದಾಖಲಿಸಿದ್ದಾರೆ.
.ಆಸ್ಟ್ರೇಲಿಯಾದಲ್ಲಿ ಚೊಚ್ಚಲ ಶತಕ ಸಿಡಿಸಿದ ರೂಟ್: ಸ್ಮಿತ್ ದಾಖಲೆ ಮುರಿದ ಜೋ.Ashes Test: 15 ಸದಸ್ಯರ ಬಲಿಷ್ಠ ತಂಡ ಪ್ರಕಟಿಸಿದ ಆಸೀಸ್: ಸ್ಮಿತ್ ನಾಯಕ.
ಸದ್ಯ, 129 ರನ್ ಗಳಿಸಿರುವ ಸ್ಮಿತ್ ಹಾಗೂ 42 ರನ್ ಗಳಿಸಿರುವ ಬ್ಯೂ ವೆಬ್ಸ್ಟರ್ ನಾಲ್ಕನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಸ್ಟೀವ್ ಸ್ಮಿತ್ ಅವರು, ಈ ಶತಕದ ಮೂಲಕ ರಾಹುಲ್ ದ್ರಾವಿಡ್ ಅವರ ದಾಖಲೆ ಹಿಂದಿಕ್ಕಿದ್ದಾರೆ. ಆ ಮೂಲಕ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ 6ನೇ ಬ್ಯಾಟರ್ ಎನಿಸಿಕೊಂಡರು.

ರಾಹುಲ್ ದ್ರಾವಿಡ್ ಅವರು 164 ಪಂದ್ಯಗಳಲ್ಲಿ 36 ಶತಕ ಸಿಡಿಸಿದ್ದಾರೆ. ಆದರೆ, ಸ್ಟೀವ್ ಸ್ಮಿತ್ ಅವರು ಕೇವಲ 123 ಪಂದ್ಯಗಳಲ್ಲಿ 37 ಶತಕ ಬಾರಿಸುವ ಮೂಲಕ ದ್ರಾವಿಡ್ ದಾಖಲೆ ಮುರಿದಿದ್ದಾರೆ.

ಟೆಸ್ಟ್ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದವರು

51 ಶತಕ ಗಳಿಸಿರುವ ಸಚಿನ್ ತೆಂಡೂಲ್ಕರ್ ಅವರು ಅಗ್ರಸ್ಥಾನದಲ್ಲಿದ್ದು, 45 ಶತಕ ಗಳಿಸಿರುವ ಜಾಕ್ ಕಾಲೀಸ್ 2ನೇ ಸ್ಥಾನದಲ್ಲಿದ್ದಾರೆ. ತಲಾ 41 ಶತಕ ಸಿಡಿಸಿರುವ ಜೋ ರೂಟ್ ಹಾಗೂ ರಿಕಿ ಪಾಂಟಿಂಗ್ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.

38 ಶತಕಗಳೊಂದಿಗೆ ಶ್ರೀಲಂಕಾದ ಕುಮಾರ ಸಂಗಕ್ಕಾರ ಐದು ಹಾಗೂ 37 ಶತಕಗಳೊಂದಿಗೆ ಸ್ಟೀವ್ ಸ್ಮಿತ್ 6ನೇ ಸ್ಥಾನಕ್ಕೇರಿದರು.

ಆ್ಯಷಸ್ ಟೆಸ್ಟ್ನಲ್ಲಿ ಅತೀ ಹೆಚ್ಚು ರನ್

ಇದರ ಜೊತೆಗೆ ಆ್ಯಷಸ್ ಟೆಸ್ಟ್ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟರ್ ಎಂಬ ಸಾಧನೆಯನ್ನು ಸ್ಮಿತ್ ತಮ್ಮದಾಗಿಸಿಕೊಂಡರು. ಈ ಪಟ್ಟಿಯಲ್ಲಿ 5028 ರನ್ ಗಳಿಸಿರುವ ಆಸ್ಟ್ರೇಲಿಯಾದ ದಂತಕತೆ ಡಾನ್ ಬ್ರಾಡ್ಮನ್ ಅಗ್ರಸ್ಥಾನದಲ್ಲಿದ್ದಾರೆ.

ಇಂದಿನ ಪಂದ್ಯದ ಮೂಲಕ ಆ್ಯಷಸ್ ಟೆಸ್ಟ್ನಲ್ಲಿ 3682 ರನ್ ಗಳಿಸುವ ಮೂಲಕ ಇಂಗ್ಲೆಂಡ್ ತಂಡದ ಮಾಜಿ ಬ್ಯಾಟರ್ ಜಾಕ್ ಹಾಬ್ಸ್ ಅವರ ದಾಖಲೆ ಮುರಿದಿದ್ದಾರೆ. ಹಾಬ್ಸ್ ಅವರು ಆ್ಯಷಸ್ ಟೆಸ್ಟ್ನಲ್ಲಿ 3636 ರನ್ ಗಳಿಸಿದ್ದಾರೆ.