ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಬ್ಯಾಟರ್ ಶಿಖರ್ ಧವನ್ ಅವರು ತಮ್ಮ ಗೆಳತಿ ಸೋಫಿ ಶೈನ್ ಅವರನ್ನು ಫೆಬ್ರುವರಿಯಲ್ಲಿ ವಿವಾಹವಾಗಲಿದ್ದಾರೆ ಎಂದು ವರದಿಗಳು ಬಹಿರಂಗಪಡಿಸಿವೆ.

ವರದಿಗಳ ಪ್ರಕಾರ, ಶಿಖರ್ ಧವನ್ ಅವರು ಐರಿಶ್ ಮೂಲದ ಸೋಫಿ ಶೈನ್ ಎಂಬುವವರ ಜೊತೆ ಫೆಬ್ರವರಿ ಮೂರನೇ ವಾರದಲ್ಲಿ ಹಸೆಮಣೆ ಏರಲಿದ್ದು, ಈ ವಿವಾಹ ಕಾರ್ಯಕ್ರಮ ದೆಹಲಿಯಲ್ಲಿ ನಡೆಯಲಿದೆ. ಈ ಸಮಾರಂಭಕ್ಕೆ ಕ್ರಿಕೆಟ್ ಮತ್ತು ಬಾಲಿವುಡ್ ತಾರೆಯರು ಭಾಗವಹಿಸಲಿದ್ದಾರೆ.
.ಗೆಳತಿ ಜೊತೆಗಿನ ಫೋಟೊ ಹಂಚಿಕೊಂಡ ಹಾರ್ದಿಕ್: ಅತ್ಯುತ್ತಮ ಜೋಡಿ ಎಂದ ನೆಟ್ಟಿಗರು.ಅಕ್ರಮ ಬೆಟ್ಟಿಂಗ್ ಆ್ಯಪ್: ಇ.ಡಿ ಎದುರು ಹಾಜರಾದ ಶಿಖರ್ ಧವನ್ .
ಆರಂಭಿಕ ದಿನಗಳಲ್ಲಿ ತಮ್ಮ ಸಂಬಂಧದ ಕುರಿತು ಗೋಪ್ಯತೆ ಕಾಯ್ದುಕೊಂಡಿದ್ದರು. ಆದರೆ, 2025ರಲ್ಲಿ ಅನೇಕ ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಸದ್ಯ, ಸೋಫಿ ಶೈನ್ ಅವರು ಶಿಖರ್ ಧವನ್ ಫೌಂಡೇಶನ್ನ ಮುಖ್ಯಸ್ಥರಾಗಿದ್ದಾರೆ.

ಧವನ್ ಹಾಗೂ ಸೋಫಿ ಶೈನ್, ಕಳೆದ ಕೆಲವು ವರ್ಷಗಳ ಹಿಂದೆ ದುಬೈನಲ್ಲಿ ಭೇಟಿಯಾಗಿದ್ದರು. ಅಲ್ಲಿ ಚಿಗುರಿದ ಸ್ನೇಹ ಸಂಬಂಧವಾಗಿ ಬದಲಾಗಿದೆ. ಇಬ್ಬರೂ ಕಳೆದ ಒಂದು ವರ್ಷದಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಧವನ್ ಅವರಿಗೆ ಇದು ಎರಡನೇ ಮದುವೆ

ಶಿಖರ್ ಧವನ್ ಅವರು ಇದಕ್ಕೂ ಮೊದಲು ಆಸ್ಟ್ರೇಲಿಯಾ ಮೂಲದ ಆಯೇಷಾ ಮುಖರ್ಜಿ ಎಂಬುವವರನ್ನು ವಿವಾಹವಾಗಿದ್ದರು. ದಂಪತಿಗೆ 11 ವರ್ಷದ ಜೋರಾವರ್ ಧವನ್ ಎಂಬ ಮಗನೂ ಇದ್ದಾನೆ. ನಂತರ ಅವರಿಬ್ಬರು 2023 ರ ಅಕ್ಟೋಬರ್ 5 ರಂದು ದೆಹಲಿಯಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.