ಮೇಲುಕೋಟೆ: ಮಾರ್ಚ್ 13 ರಂದು ನಡೆಯುವ ವಿಶ್ವವಿಖ್ಯಾತ ವೈರಮುಡಿ ಉತ್ಸವ ಸಂಬಂಧ ವಿವಿಧ ಇಲಾಖೆಗಳಿಗೆ ವಹಿಸಿದ ಕೆಲಸಗಳಲ್ಲಿ ಲೋಪ ಕಂಡುಬಂದರೆ ಆಯಾ ಇಲಾಖಾ ಅಧಿಕಾರಿಗಳನ್ನೇ ನೇರ ಹೊಣೆ ಮಾಡಿ ಕ್ರಮ ಜರುಗಿಸಲಾಗುತ್ತದೆ ಎಂದು ಪಾಂಡವಪುರ ಉಪವಿಭಾಗಾಧಿಕಾರಿ ವಾಣಿ ಎಚ್ಚರಿಸಿದರು.

ಮೇಲುಕೋಟೆ ಪ್ರವಾಸಿ ಮಂದಿರದಲ್ಲಿ ವೈರಮುಡಿ ಜಾತ್ರಾಮಹೋತ್ಸವ ಪೂರ್ವಸಿದ್ಧತೆ ಸಂಬಂಧ ಕರೆದಿದ್ದ ಅಧಿಕಾರಿಗಳ ತುರ್ತು ಸಭೆಯಲ್ಲಿ ಮಾತನಾಡಿದರು.

ಕಳೆದ ಪೆಬ್ರವರಿಯಲ್ಲೇ ಜಿಲ್ಲಾಧಿಕಾರಿಗಳು ಮತ್ತು ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಉತ್ಸವಕ್ಕೆ ವಿವಿಧ ಇಲಾಖೆವತಿಯಿಂದ ಮಾಡಬೇಕಾದ ಸಿದ್ಧತೆಯ ಬಗ್ಗೆ ನಿರ್ಣಯ ಮಾಡಲಾ ಗಿದೆ. ಈ ಎಲ್ಲಾ ಕಾರ್ಯಗಳು ಇದೇ 10 ರೊಳಗೆ ಪೂರ್ಣಗೊಂಡಿರಬೇಕು. ಜಿಲ್ಲಾಧಿಕಾರಿ ಡಾ.ಅಜಯ್ ನಾಗಭೂಷಣ್ ಅಂತಿಮ ಸಿದ್ಧತೆ ವೀಕ್ಷಿಸಲಿದ್ದು, ಈ ವೇಳೆ ವ್ಯತ್ಯಾಸವಾಗಿದ್ದರೆ ಸಂಬಂಧಪಟ್ಟ ಅಧಿಕಾರಿಗಳೇ ಜವಾಬ್ದಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸ್ವಚ್ಛತೆಗೆ ಆದ್ಯತೆ ನೀಡಿ: ಮೇಲುಕೋಟೆಯ ಸ್ವಚ್ಛತೆ, ಶೌಚಾಲಯ ವ್ಯವಸ್ಥೆ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ, ಬೀದಿದೀಪಗಳ ಅಳವಡಿಕೆ, ಹೈಮಾಸ್ಟ್ ದೀಪಗಳ ದುರಸ್ತಿ ಕುರಿತು ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ತಕ್ಷಣ ದಿಂದಲೇ ನಿಗಾವ ಹಿಸಬೇಕು. ಇಲ್ಲಿನ ಪರಿಸರ ಅಶುಚಿತ್ವದಿಂದ ಕೂಡಿದ್ದು, ಇಂದಿನಿಂದಲೇ ಸ್ವಚ್ಛಗೊ ಳಿಸುವ ಕಾರ್ಯ ಆರಂಭವಾಗಬೇಕು. ಅಶುಚಿತ್ವ ಇದೇ ರೀತಿ ಮುಂದುವರೆದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನೇ ಹೊಣೆಗಾರರನ್ನಾಗಿಸಲಾಗುತ್ತದೆ ಎಂದರು.

ಸಭೆಯ ನಂತರ ಕೆ.ಎಸ್ಆರ್ಟಿಸಿ ತಾತ್ಕಾಲಿಕ ಬಸ್ ನಿಲ್ದಾಣ, ಖಾಸಗಿ ವಾಹನ ನಿಲುಗಡೆ ಸ್ಥಳ ಮತ್ತು ಬ್ಯಾರಿಕೇಟ್ ನಿರ್ಮಾಣ, ಪೊಲೀಸ್ ಸಿಬ್ಬಂದಿ ನಿಯೋಜನೆ, ಕುಡಿಯುವ ನೀರಿನ ಟ್ಯಾಂಕರ್ ವ್ಯವಸ್ಥೆ ಮತ್ತು ತಾತ್ಕಾಲಿಕ ಶೌಚಾಲಯ ನಿರ್ಮಾಣ ಮಾಡುವ ಸ್ಥಳ ಪರಿಶೀಲಿಸಿದರು.

ಇದೇ ವೇಳೆ ಕಲ್ಯಾಣಿ ಸ್ವಚ್ಛತೆ ವೀಕ್ಷಿಸಿದ ವಾಣಿ ಅವರು, ಬೇಸರ ವ್ಯಕ್ತಪಡಿಸಿ ದೇವಾಲಯ ಮತ್ತು ಪಂಚಾಯಿತಿ ಜಂಟಿಯಾಗಿ ಕಲ್ಯಾಣಿ ಪರಿಸರದ ಬಗ್ಗೆ ಕಾಳಜಿವಹಿಸಬೇಕು ಎಂದರು.

ಪೊಲೀಸ್ ಭದ್ರತೆ: ಇದೇ ವೇಳೆ ಮಾತನಾಡಿದ ಶ್ರೀರಂಗಪಟ್ಟಣ ಡಿವೈಎಸ್ಪಿ ಗೀತಾ, ಈ ಬಾರಿ ವೈರಮುಡಿ ಜಾತ್ರಾಮಹೋತ್ಸವಕ್ಕೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದೆ. ದೇವಾಲಯದ ಒಳಭಾಗ ನಡೆಯವ ಧಾರ್ಮಿಕ ವೈಭವಗಳನ್ನು ಭಕ್ತರು ವೀಕ್ಷಿಸಲು ಅನುಕೂಲವಾಗುವಂತೆ ಕಳೆದ ಬಾರಿಗಿಂತ ಹೆಚ್ಚಿನ ಬೃಹತ್ ಪರದೆ ವ್ಯವಸ್ಥೆ ಮಾಡಲಾಗುತ್ತದೆ. ದೇವರ ಮೇಲೆ ನಾಣ್ಯ ಎಸೆಯು ವುದನ್ನು ತಡೆಗಟ್ಟಲು ದ್ವನಿವರ್ಧಕದ ಮೂಲಕ ಭಕ್ತರಿಗೆ ಸೂಚನೆ ನೀಡಲಾಗುತ್ತದೆ ಎಂದರು.

ಸಭೆಯಲ್ಲಿ ವೈರಮುಡಿ ಉತ್ಸವದ ವಿಶೇಷ ಕರ್ತವ್ಯ ಅಧಿಕಾರಿ ಹಾಗೂ ತಹಶೀಲ್ದಾರ್ ಶಿವಕುಮಾರಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯ ಶಾಮಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.

ವೈಭವದ ತೆಪ್ಪೋತ್ಸವ: ಬುಧವಾರ ರಾತ್ರಿ 9 ಗಂಟೆ ವೇಳೆಗೆ ಇಲ್ಲಿನ ಪಂಚಕಲ್ಯಾಣಿಯಲ್ಲಿ ಮೊದಲ ತೆಪ್ಪೋತ್ಸವ ವೈಭವದಿಂದ ನೆರವೇರಿತು.

ಈ ಬಾರಿ ಕಲ್ಯಾಣಿಯಲ್ಲಿ ನೀರಿನ ಸಂಗ್ರಹ ಕಡಿಮೆ ಇದ್ದ ಕಾರಣ ಕೆರೆತೊಣ್ಣೂರು ಪೈಪ್ ಲೈನ್ ಮೂಲಕ ಕಲ್ಯಾಣಿಗೆ ನೀರು ಹರಿಸುವ ಮೂಲಕ ತೆಪ್ಪೋತ್ಸವಕ್ಕೆ ಅನುವು ಮಾಡಲಾಗಿತ್ತು.

ಪಾಂಡವಪುರ ಉಪವಿಭಾಗಾಧಿ ಕಾರಿ ವಾಣಿ ಮೇಲುಕೋಟೆಗೆ ಬೆಳಿಗ್ಗೆಯೇ ಆಗಮಿಸಿ ಕಲ್ಯಾಣಿ ಸ್ವಚ್ಛತಾ ಕಾರ್ಯದ ಉಸ್ತುವಾರಿ ವಹಿಸಿದ್ದರು.

ಜಿಲಾಧಿಕಾರಿ ಡಾ.ಅಜಯ್ನಾಗಭೂಷಣ್ ಬುಧವಾರ ಬೆಳಿಗ್ಗೆ ಮೇಲುಕೋಟೆಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.