ಭಾನುವಾರ, ಜನವರಿ 19, 2020
26 °C

ವಂಚನೆ ಯತ್ನ; ವಿಗ್ರಹಗಳು ವಶಕ್ಕೆ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ‘ಪ್ರಾಚೀನ ಅರಸರ ಕಾಲದ ಅತ್ಯಮೂಲ್ಯ ವಿಗ್ರಹಗಳು ಇವೆ’ ಎಂದು ನಂಬಿಸಿ, ಹಿತ್ತಾಳೆಯ ವಿಗ್ರಹಗಳನ್ನು ಮಾರಾಟ ಮಾಡಿ, ವ್ಯಕ್ತಿಯೊಬ್ಬರನ್ನು ವಂಚಿಸಲು ಯತ್ನಿಸುತ್ತಿದ್ದ ಅನಂತಪುರ ಮೂಲದ ವ್ಯಾಪಾರಿಯೊಬ್ಬನನ್ನು ಪೊಲೀಸರು ಸೋಮವಾರ ಸಂಜೆ ಬಂಧಿಸಿದ್ದಾರೆ.ಆಂಧ್ರಪ್ರದೇಶದ ಅನಂತಪುರ ನಗರದಲ್ಲಿ ಸೀರೆ ವ್ಯಾಪಾರ ಮಾಡುವ ಎಂ.ಮಹಮ್ಮದ್‌ ರಫಿಕ್‌ ಬಂಧಿತ. ಈತನಿಂದ ಆನೆ, ಕುದುರೆ, ಗೋವು, ಸಿಂಹ  ಹಾಗೂ ಇತರ ಸ್ವರೂಪದ 12 ಹಿತ್ತಾಳೆಯ ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗಿದೆ.ಪ್ರಾಚೀನ ಕಾಲದ ಅತ್ಯಮೂಲ್ಯ­ವಾದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಪಂಚಲೋಹದ ವಿಗ್ರಹ­ಗಳೆಂದು ನಂಬಿಸಿ, ನಗರದಲ್ಲಿರುವ ವ್ಯಕ್ತಿಯೊಬ್ಬರಿಗೆ ₨ 5 ಲಕ್ಷಕ್ಕೆ ಮಾರಾಟ ಮಾಡುವುದಾಗಿ ಹಿತ್ತಾಳೆಯ ಆಧುನಿಕ ವಿಗ್ರಹಗಳನ್ನು ತಂದು ಈತ ವಂಚಿಸಲು ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ದಾಳಿ ನಡೆಸಿದ   ಪೊಲೀಸರು, ಆತನನ್ನು ಬಂಧಿಸಿ, ವಿಗ್ರಹಗಳನ್ನು ವಶಪಡಿಸಿಕೊಂಡಿದ್ದಾರೆ.ಗಾಂಧಿನಗರ ಠಾಣೆಯ ಪಿಎಸ್‌ಐ ನಜೀರ್‌ ಅಹಮದ್‌, ಎಎಸ್‌ಐ ಬಸವರಾಜ್‌, ಹೆಡ್‌ ಕಾನ್‌ಸ್ಟೇಬಲ್‌ ಜಟ್ಟಿಂಗಪ್ಪ, ಕಾನ್‌ಸ್ಟೇಬಲ್‌ಗಳಾದ ನಾಗರಾಜ, ಸಿದ್ದಯ್ಯ, ಅನ್ವರ್‌ ಮತ್ತಿತರರು ದಾಳಿ ನಡೆಸಿದ್ದರು ಎಂದು ಡಿವೈಎಸ್‌ಪಿ ಟಿ.ಎಸ್‌. ಮುರುಗಣ್ಣನವರ್‌ ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.ಮೋಕಾ; ಬಣವೆಗಳು ಭಸ್ಮ: ಬೆಂಕಿ ಆಕಸ್ಮಿಕದಿಂದಾಗಿ ಎರಡು ಮೇವಿನ ಬಣವೆಗಳು ಸುಟ್ಟು ಭಸ್ಮವಾಗಿರುವ ಘಟನೆ ಹೊಸ ಮೋಕಾ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.ಗ್ರಾಮದ ಎನ್‌.ರಾಜಣ್ಣ ಹಾಗೂ ಬಸವರಾಜ ಎಂಬುವವರ ಬಣವೆಗಳೇ ಸುಟ್ಟ ಭಸ್ಮವಾಗಿದ್ದು, ಅಂದಾಜು ರೂ 30000 ದಷ್ಟು ನಷ್ಟ ಸಂಭವಿಸಿದೆ. ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ, ಇತರ ಬಣವೆಗಳಿಗೆ ವ್ಯಾಪಿಸದಂತೆ ತಡೆದರು. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖ­ಲಾ­ಗಿದ್ದು, ತನಿಖೆ ಮುಂದುವರಿದಿದೆ.

ಪ್ರತಿಕ್ರಿಯಿಸಿ (+)