ಬೆಂಗಳೂರು: ವಕ್ಫ್ ಬೋರ್ಡ್ ಅಧ್ಯಕ್ಷ ಅಬ್ದುಲ್ ರಿಯಾಜ್ ಖಾನ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಐದು ಜನರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.
ಖಾನ್ ಈ ಸಂಬಂಧ ದೂರು ನೀಡಿದ್ದು, ಶನಿವಾರ ನಡೆದ ವಕ್ಫ್ ಬೋರ್ಡ್ನ ಮಾಸಿಕ ಸಭೆಗೆ ಹಾಜರಾದ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.

ವಕ್ಫ್ ಆಸ್ತಿಯನ್ನು ಖಾಸಗಿಯವರಿಗೆ ಮಾರಾಟ ಮಾಡಿರುವ ಆರೋಪವಿರುವ ಅವರು, ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಆರೋಪ ಮುಕ್ತರಾಗುವ ವರೆಗೆ ರಿಯಾಜ್ ಖಾನ್ ಅವರು ಸಭೆಗೆ ಹಾಜರಾಗಬಾರದು ಎಂದು ಕೆಲವು ಸದಸ್ಯರು ಗಲಭೆ ಸೃಷ್ಟಿಸಿದ್ದಾರೆ.

ಸಭೆಯಿಂದ ಹೊರ ಬರುತ್ತಿದ್ದ ರಿಯಾಜ್ ಖಾನ್ ಅವರ ಮೇಲೆ ಗುಂಪೊಂದು ಹಲ್ಲೆ ನಡೆಸಿತು ಎಂದು ಪೊಲೀಸರು ಹೇಳಿದರು. ಘಟನೆ ಸಂಬಂಧ ಮಹಮ್ಮದ್ ಇಲಿಯಾಸ್, ಸಯೀದ್ ಅಲಿ, ಜಾಯ್ಅಲಿ, ಖಾನ್ ಅಲಿ ಹಾಗೂ ಅಲ್ಲಾಭಕ್ಷ್ ಅಶ್ರಫ್ ಎಂಬುವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಹೈಗ್ರೌಂಡ್ಸ್ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.