ಮಂಗಳವಾರ, ಮೇ 11, 2021
19 °C

ವರ್ಗಾವಣೆ ನೀತಿ ಬದಲಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 1764 ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಕರೆದಿರುವುದು ಶ್ಲಾಘನೀಯ. ಆದರೆ 2009 ರಲ್ಲಿ ನೇಮಕಗೊಂಡ ಉಪನ್ಯಾಸಕರ ಪ್ರೊಬೆಷನರಿ ಅವಧಿ ಮುಗಿದ ಬಗ್ಗೆ ಸರ್ಕಾರ ಇನ್ನೂ  ಘೋಷಣೆ ಮಾಡಿಲ್ಲ. ಈ ಉಪನ್ಯಾಸಕರಿಗೆ ವರ್ಗಾವಣೆಗೆ ಅವಕಾಶ ಇಲ್ಲ.ಹೊಸದಾಗಿ ನೇಮಕಗೊಳ್ಳುವ ಉಪನ್ಯಾಸಕರು ಹಾಗೂ ಹೈಸ್ಕೂಲಿನಿಂದ ಬಡ್ತಿ ಹೊಂದುವ ಶಿಕ್ಷಕರು ಖಾಲಿ ಇರುವ ಸ್ಥಾನಗಳಿಗೆ ನೇಮಕವಾದರೆ 2009ರಲ್ಲಿ ಆಯ್ಕೆಯಾದ ಉಪನ್ಯಾಸಕರಿಗೆ ವರ್ಗಾವಣೆ ಆದರೂ ಖಾಲಿ ಸ್ಥಾನಗಳು  ಇಲ್ಲವಾಗುತ್ತವೆ.ಆದ್ದರಿಂದ ಸರ್ಕಾರ ಈ ವರ್ಷದಿಂದಲೇ ವರ್ಗಾವಣೆ ನೀತಿ ಬದಲಾಯಿಸಿ, 2009 ರಲ್ಲಿ ನೇಮಕಗೊಂಡ ಉಪನ್ಯಾಸಕರಿಗೆ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಬೇಕು.ದೂರದ ಊರುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರಿಗೆ ಹಾಗೂ ಇತರ ಸಮಸ್ಯೆಗಳಿರುವ ಉಪನ್ಯಾಸಕರಿಗೆ  ಅವರಿಗೆ ಅನುಕೂಲವಾಗುವ ಸ್ಥಳದಲ್ಲಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಬೇಕು. ಒಂದೇ ಸ್ಥಳದಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚು ಕಾಲ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರನ್ನು ಕಡ್ಡಾಯವಾಗಿ ಬೇರೆ ಸ್ಥಳಗಳಿಗೆ ವರ್ಗಾವಣೆ ಮಾಡಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.