ಬೇಸಿಗೆಯ ಸೂರ್ಯ ಅದಾಗಲೇ ಉದಯಿಸಿದ್ದ. ಮೊಮ್ಮಗನನ್ನು ಕೂರಿಸಿಕೊಂಡು ಸೈಕಲಿನಲ್ಲಿ ಬಂದ ಅರವತ್ತರ ಆಸುಪಾಸಿನ ಆ ವ್ಯಕ್ತಿ ಸೀದಾ ಮಾಂಸದ ಅಂಗಡಿ ಎದುರು ನಿಂತರು. ಸಾಲಾಗಿ ನೇತುಹಾಕಿದ್ದ ಕುರಿ ಮಾಂಸದಲ್ಲಿ ತೊಡೆ ಮಾಂಸವನ್ನು ಕೊಡುವಂತೆ ಅಂಗಡಿಯವರನ್ನು ಕೇಳಿದರು. ಕಪ್ಪು ಪ್ಲಾಸ್ಟಿಕ್ ಚೀಲದಲ್ಲಿ ಮಾಂಸವನ್ನು ಹಾಕಿಸಿಕೊಂಡರು.

ಅಂಗಡಿ ಪಕ್ಕದಲ್ಲೇ ಇದ್ದ ಗುಡಾರದಲ್ಲಿ ಖಾರದಪುಡಿ, ಮಸಾಲೆ ಹಾಗೂ ಹಸಿ ಶುಂಠಿಯನ್ನು ಖರೀದಿಸಿದರು. ನಂತರ ಅವರ ಚಿತ್ತ ಪುದೀನಾ ಸೊಪ್ಪಿನ ವ್ಯಾಪಾರಿಯತ್ತ ನೆಟ್ಟಿತು. ಹೀಗೆ ಮಾಂಸವನ್ನು ಖರೀದಿಸಿ, ತರಕಾರಿಯನ್ನು ಕೊಳ್ಳುತ್ತಿದ್ದ ಗ್ರಾಹಕರು ಬಹಳಷ್ಟು ಮಂದಿ ಕಂಡುಬಂದದ್ದು ವರ್ತೂರು ಸಂತೆಯಲ್ಲಿ. ಮೆಜೆಸ್ಟಿಕ್ನಿಂದ 23 ಕಿ.ಮೀ ದೂರದಲ್ಲಿರುವ ವರ್ತೂರಿನಲ್ಲಿ ಪ್ರತಿ ಭಾನುವಾರ ಸಂತೆ ನಡೆಯುತ್ತದೆ.

ಸಂತೆ ಮೈದಾನದಲ್ಲಿ ಸುಮಾರು 70 ವರ್ಷಗಳಿಂದ ನಡೆಯುತ್ತಿರುವ ಈ ಸಂತೆಗೆ ತಾಜಾ ತರಕಾರಿ, ಕುರಿ ಮಾಂಸ ಹಾಗೂ ನಾಟಿ ಕೋಳಿಗಾಗಿ ಹತ್ತಾರು ಕಿಲೋ ಮೀಟರ್ ದೂರದಿಂದ ಜನ ಬರುತ್ತಾರೆ. ವರ್ತೂರು ಸುತ್ತಮುತ್ತ ಇರುವ ಗುಂಜೂರು, ತೊಬರಹಳ್ಳಿ, ಸೊರಹುಣಸೆ, ನೆಕ್ಕುಂದಿ, ಜಂತಗೊಂಡನಹಳ್ಳಿಯ ರೈತರು ಟೊಮೆಟೊ, ಕ್ಯಾರೆಟ್, ಹೀರೆಕಾಯಿ ಹಾಗೂ ಮೂಲಂಗಿಯನ್ನು ಭಾನುವಾರ ಬೆಳಿಗ್ಗೆ ಹೊಲದಿಂದ ನೇರವಾಗಿ ಸಂತೆಗೆ ತಂದು ಹಾಕುತ್ತಾರೆ. ಈ ತಾಜಾ ತರಕಾರಿಗೆ ಎಲ್ಲಿಲ್ಲದ ಬೇಡಿಕೆ.

ಈ ಸಂತೆಯಲ್ಲಿ 250ರಿಂದ 300 ಬಿಡಾರಗಳಿವೆ. ಅದರಲ್ಲಿ 10 ಮಾಂಸದ ಅಂಗಡಿಗಳು. ಕಳೆದ ಇಪ್ಪತ್ತೈದು ವರ್ಷಗಳಿಂದ ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ ಒಂದು ಕುಟುಂಬದ ಹತ್ತು ಮಂದಿಯೂ ಬಿಡಾರ ಹಾಕಿಕೊಂಡು ವಾರದ ವ್ಯಾಪಾರಕ್ಕೆ ಸಜ್ಜಾಗುತ್ತಾರೆ.

‘ಅಪ್ಪನ ಕಾಲದಿಂದಲೂ ತರಕಾರಿ ಮಾರುತ್ತಿದ್ದೇವೆ. ಅಣ್ಣ, ತಮ್ಮ, ಮಕ್ಕಳು ಸೇರಿದಂತೆ 10 ಮಂದಿಯದ್ದು ಇದೇ ಉದ್ಯೋಗ. ಸುತ್ತಮುತ್ತಲಿನ ಹಳ್ಳಿಗಳ ರೈತರು ತರುವ ತರಕಾರಿ ಖರೀದಿಸಿ ಮಾರುತ್ತೇವೆ. ಹಾಗಾಗಿ ವೈಟ್ಫೀಲ್ಡ್, ಮಾರತ್ಹಳ್ಳಿ, ಹೊಸಕೋಟೆಯಿಂದಲೂ ಜನ ಸಂತೆಗೆ ಬರುತ್ತಾರೆ, ವಾರಕ್ಕಾಗುವಷ್ಟು ಖರೀದಿಸುತ್ತಾರೆ’ ಎಂದು ಮಾಹಿತಿ ನೀಡುತ್ತಾರೆ ವ್ಯಾಪಾರಿ ಚಂದ್ರಪ್ಪ.

ಗ್ರಾಹಕರು ಹೀಗೆನ್ನುತ್ತಾರೆ...
‘ಹದಿನೈದು ವರ್ಷಗಳಿಂದ ತೂಬರಹಳ್ಳಿಯಿಂದ ವರ್ತೂರು ಸಂತೆಗೆ ಬರುತ್ತಿದ್ದೇನೆ. ತೂಬರಹಳ್ಳಿ ಸುತ್ತಮುತ್ತ ಹತ್ತಾರು ಮಾಲ್ಗಳಿವೆ. ಅಲ್ಲಿ ಸಿಗುವುದು ಬತ್ತಿದ ತರಕಾರಿ ಹಾಗೂ ಹಣ್ಣು. ಆದ್ದರಿಂದ ನಾನು ಪ್ರತಿ ಭಾನುವಾರ ಇಲ್ಲಿಗೆ ಬಂದು ಕಾಯಿಪಲ್ಲೆ ಖರೀದಿಸುತ್ತೇನೆ’ ಎನ್ನುತ್ತಾರೆ ನಾರಾಯಣಸ್ವಾಮಿ.

‘ಹತ್ತು ವರ್ಷಗಳಿಂದ ಸಂತೆಗೆ ಬರುತ್ತಿದ್ದೇನೆ. ಬೀನ್ಸ್, ಕ್ಯಾರೆಟ್, ಟೊಮೆಟೊ ಸೇರಿದಂತೆ ಎಲ್ಲಾ ತರಕಾರಿಗಳೂ ತಾಜಾ ಆಗಿ ಇರುತ್ತವೆ. ಸಂತೆಯೊಳಗೆ ಪ್ರವೇಶಿಸಿದರೆ ಸಾಕು ಬೇಳೆ, ಬೆಲ್ಲ, ಸೊಪ್ಪು, ತರಕಾರಿ ಸೇರಿದಂತೆ ವಾರಕ್ಕಾಗುವಷ್ಟು ದಿನಸಿ ಖರೀದಿಸಬಹುದು. ಒಂದಿಷ್ಟು ಚೌಕಾಸಿ ಮಾಡಲೂಬಹುದು’ ಎಂಬುದು ವರ್ತೂರು ನಿವಾಸಿ ಪ್ರಕೃತಿ ಅವರ ಅಭಿಪ್ರಾಯ.

‘ಬೆಳಿಗ್ಗೆ 5 ಗಂಟೆಗೇ ಆರಂಭವಾಗುವ ಸಂತೆ ರಾತ್ರಿ 8ರವರೆಗೂ ನಡೆಯುತ್ತದೆ. ಮಾರತ್ಹಳ್ಳಿ, ಕಾಡುಗೋಡಿ, ರಾಮಗೊಂಡನಹಳ್ಳಿಯಿಂದ ಜನ ಬರುತ್ತಾರೆ. ತಾಜಾ ಹೀರೆಕಾಯಿ, ಮೆಣಸಿನಕಾಯಿ, ಟೊಮೊಟೊ, ಮೂಲಂಗಿ ಕೊಳ್ಳುತ್ತಾರೆ. 40 ವರ್ಷಗಳಿಂದ ನಮ್ಮದು ಇದೇ ಕಸುಬು. ವರ್ತೂರು ಅಲ್ಲದೇ ಸುತ್ತಮುತ್ತ ನಡೆಯುವ ಸಂತೆಗಳಿಗೂ ಹೋಗುತ್ತೇವೆ’ ಎನ್ನುತ್ತಾರೆ ಕೃಷ್ಣಪ್ಪ.

50 ಕುರಿಗಳ ಮಾರಾಟ
ಕಳೆದ 12 ವರ್ಷಗಳಿಂದ ಮಾಂಸದ ವ್ಯಾಪಾರ ಮಾಡುತ್ತಿದ್ದೇವೆ. ಪ್ರತಿ ಭಾನುವಾರ 50ಕ್ಕೂ ಹೆಚ್ಚು ಕುರಿಗಳ ಮಾಂಸ ಬಿಕರಿಯಾಗುತ್ತದೆ. ಬಿಜಾಪುರ, ತುಮಕೂರು ಜಿಲ್ಲೆಗಳಿಂದ ಕುರಿಗಳನ್ನು ತರಿಸುತ್ತೇವೆ. ಸಂತೆಯ ದಿನ ಉಳಿದ ದಿನಗಳಿಗಿಂತ 20 ಕುರಿಗಳು ಹೆಚ್ಚು ಬೇಕಾಗುತ್ತವೆ. ಕೊಬ್ಬಿದ ಕುರಿಗಳನ್ನು ತರಿಸುವುದರಿಂದ ಗ್ರಾಹಕರು ಸಂತೆಗೆ ಬಂದು ಮಾಂಸ ಕೊಳ್ಳುತ್ತಾರೆ’ ಎಂದು ತಮ್ಮ ವ್ಯಾಪಾರದ ಗುಟ್ಟನ್ನು ಬಿಚ್ಚಿಡುತ್ತಾರೆ ಮಹಮ್ಮದ್ ಸೈಫ್ ಅಲಿ.

ನಾಟಿ ಕೋಳಿಗೂ ಬೇಡಿಕೆ
ಹೊಸಕೋಟೆ, ಕುಂಟೂರಿನಿಂದ ನಾಟಿ ಕೋಳಿಗಳನ್ನು ತಂದು ಇಲ್ಲಿನ ಸಂತೆಯಲ್ಲಿ ಮಾರಾಟ ಮಾಡುವ ಅಫ್ರೋಜ್ಗೆ ಪಾಲಿಗೆ ಅತಿ ಹೆಚ್ಚು ವ್ಯಾಪಾರವಾಗುವ ಸಂತೆ ಇದೇ. ತೂಕದ ಲೆಕ್ಕದಲ್ಲಿ ಅಥವಾ ಇಡೀ ಕೋಳಿಯನ್ನು ಇಲ್ಲಿ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಮಾರಾಟ ಮಾಡುತ್ತಾರೆ. ನಾಟಿಕೋಳಿಗಾಗಿ ದೂರದ ಬಡಾವಣೆಗಳಿಂದಲೂ ಗ್ರಾಹಕರು ವರ್ತೂರು ಸಂತೆಗೆ ಬರುತ್ತಾರೆ.

‘ನಾಟಿ ಕೋಳಿ ಸಾರು, ರಾಗಿಮುದ್ದೆ ಉಂಡವನೇ ಬಲ್ಲ ಅದರ ರುಚಿ. ನಾನು ಕೆ.ಆರ್.ಪುರ, ಕಾಡುಗೋಡಿ, ವರ್ತೂರು ಸಂತೆಯಲ್ಲಿ ಕೋಳಿಗಳನ್ನು ಮಾರುತ್ತೇನೆ. ಇಲ್ಲಿಗೆ 20 ವರ್ಷಗಳಿಂದ ಬರುತ್ತಿದ್ದೇನೆ. ಎರಡು ಕೆ.ಜಿ. ತೂಗುವ ಕೋಳಿಗೆ ₨300ರಿಂದ ₨350 ಬೆಲೆ ಇದೆ. ₨350 ಹೇಳಿದರೆ ಕೆಲವರು ₨150, ₨200ಕ್ಕೆ ಕೇಳುತ್ತಾರೆ. ಚೌಕಾಸಿ ಮಾಡಿ ಸಾಕಾಗುತ್ತದೆ. ದಿನಕ್ಕೆ 30ರಿಂದ 40 ಕೋಳಿಗಳನ್ನು ಮಾರುತ್ತೇನೆ. ಜೀವನ ಸಾಗಿಸುವುದಕ್ಕೆ ಇಷ್ಟು ಸಾಕು’ ಎನ್ನುತ್ತಾರೆ ಅಫ್ರೋಜ್.

ಕೆ.ಜಿ.ಗಟ್ಟಲೆ ತರಕಾರಿ ಕೊಳ್ಳಲು ಆಗದವರು ಸುಮಾರು ಕಾಲು ಕೆ.ಜಿ. ತೂಗುವ ಬೆಂಡೆಕಾಯಿ, ಟೊಮೆಟೊ, ಮೆಣಸಿನಕಾಯಿ ಗುಡ್ಡೆ ಕೊಳ್ಳುತ್ತಾರೆ. ಕೂಲಿ ಕಾರ್ಮಿಕರು, ಬಡವರು ಹೆಚ್ಚಾಗಿ ಈ ಗುಡ್ಡೆ ತರಕಾರಿ ತೆಗೆದುಕೊಳ್ಳುತ್ತಾರೆ. ಒಂದು ಗುಡ್ಡೆಗೆ ₨10. ಎಲ್ಲಾ ತರಕಾರಿಗಳನ್ನು ಒಂದೊಂದು ಗುಡ್ಡೆ ಕೊಂಡರೂ ಬೆಲೆ ₨100 ದಾಟುವುದಿಲ್ಲ’ ಎಂದು ಹೇಳುತ್ತಾರೆ ಅತ್ತಿಬೆಲೆಯಿಂದ ಬಂದಿದ್ದ ವ್ಯಾಪಾರಿ ರಾಜು.

ಮಾಲ್ ಸಂಸ್ಕೃತಿ ನಗರದಲ್ಲಿ ಬೇರೂರಿರುವ ಇಂದಿನ ದಿನದಲ್ಲಿ ಸಂತೆಗೆ ಬರುವವರ ಸಂಖ್ಯೆ ಕಡಿಮೆಯಾಗಿಲ್ಲ. ಇಲ್ಲಿಗೆ ಬಂದರೆ ಸಾಕು ಸಿದ್ಧ ಉಡುಪು, ದಿನಸಿ, ಕೃಷಿ ಉತ್ಪನ್ನಗಳು, ಮಡಕೆ, ಒಣಮೀನು, ತೆಂಗಿನಕಾಯಿ, ಹಣ್ಣು... ಹೀಗೆ ಎಲ್ಲವನ್ನೂ ಒಂದೇ ಸ್ಥಳದಲ್ಲಿ ಖರೀದಿಸುವ ಸೌಕರ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.