ಗುರುವಾರ , ಮೇ 13, 2021
24 °C

ವರ್ಷಾಂತ್ಯದಲ್ಲಿ ಪೂರ್ವ ಏಷ್ಯಾ ಶೃಂಗಸಭೆ:ಪ್ರಧಾನಿ ಸಿಂಗ್, ಒಬಾಮ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್, (ಪಿಟಿಐ): ಈ ವರ್ಷಾಂತ್ಯದ ವೇಳೆಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರು ಬೇರೆ ಬೇರೆ ವೇದಿಕೆಯಲ್ಲಿ ಭೇಟಿಯಾಗಬಹುದು ಎಂದು ಶ್ವೇತಭವನ ನಿರೀಕ್ಷೆ ಮಾಡಿದೆ.ಮುಂದಿನ ವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಾಗ ಈ ಇಬ್ಬರು ಧುರೀಣರು ಭೇಟಿಯಾದರೂ ದ್ವಿಪಕ್ಷೀಯ ಮಾತುಕತೆ ನಡೆಸುವುದಿಲ್ಲ ಎಂದು ಅಮೆರಿಕದ ರಾಷ್ಟ್ರೀಯ ಉಪ ಭದ್ರತಾ ಸಲಹೆಗಾರ ಬೆನ್ ರೋಡ್ಸ್ ತಿಳಿಸಿದ್ದಾರೆ.ಈ ವರ್ಷಾಂತ್ಯದ ವೇಳೆಗೆ ನಡೆಯಲಿರುವ ಪೂರ್ವ ಏಷ್ಯಾ ಶೃಂಗಸಭೆ ಮತ್ತು ಇನ್ನಿತರ ಸಭೆಗಳಲ್ಲಿ ಸಿಂಗ್ ಮತ್ತು ಒಬಾಮ ಅವರು ಭೇಟಿಯಾಗುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ಒಬಾಮ ಅವರು ಸೋಮವಾರದಿಂದ ಮೂರು ದಿನಗಳ ಕಾಲ ನ್ಯೂಯಾರ್ಕ್‌ನಲ್ಲಿ ಇರುತ್ತಾರೆ.ಈ ಸಂದರ್ಭದಲ್ಲಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾರೆ ಮತ್ತು ಕೆಲವು ದೇಶಗಳ ಮುಖಂಡರನ್ನು ಭೇಟಿ ಮಾಡಲಿದ್ದಾರೆ. ಒಬಾಮ ಭೇಟಿ ಮಾಡಲಿರುವ ಪ್ರಮುಖ ನಾಯಕರಲ್ಲಿ ಲಿಬಿಯಾದ ಮುಸ್ತಫಾ ಅಬ್ದುಲ್ ಜಲ್ೀ, ಆಫ್ಘಾನಿಸ್ತಾನದ ಅಧ್ಯಕ್ಷ ಹಮಿದ್ ಕರ್ಜೈ, ಬ್ರೆಜಿಲ್ ಅಧ್ಯಕ್ಷ ದಿಲ್ಮಾ ರೊಸೆಫ್, ಟರ್ಕಿಯ ಪ್ರಧಾನಿ ರೆಸೆಪ್ ತಯಿಪ್ ಎರ್ಡೊಗನ್ ಮತ್ತು ಜಪಾನ್ ಪ್ರಧಾನಿ ಯೊಶಿಹಿಕೊ ನೊಡಾ, ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರಾನ್, ಫ್ರಾನ್ಸ್ ಅಧ್ಯಕ್ಷ ನಿಕೊಲಸ್ ಸರ್ಕೋಜಿ ಮತ್ತು ದಕ್ಷಿಣ ಸುಡಾನ್ ಅಧ್ಯಕ್ಷ ಸಲ್ವಾ ಕಿರ್ ಸೇರಿದ್ದಾರೆ.ಒಬಾಮ ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಲಿಯ ಸುಧಾರಣೆಗೆ ಒತ್ತು ನೀಡುವುದರ ಜತೆಗೆ ಭದ್ರತಾ ಮಂಡಲಿಯ ಕಾಯಂ ಸದಸ್ಯತ್ವಕ್ಕೆ ಪ್ರಯತ್ನಿಸುತ್ತಿರುವ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.