ಶನಿವಾರ, ಮೇ 15, 2021
28 °C

ವರ್ಷ ಗತಿಸಿದರೂ ಮುಗಿಯದ ಕಾಮಗಾರಿ: ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಇಲ್ಲಿಯ ಲಕ್ಷ್ಮಿನಗರದಲ್ಲಿ ನಗರಸಭೆಯ ಬಿ.ಆರ್.ಜಿ.ಎಫ್ ಯೋಜನೆಯಡಿ ಟೆಂಡರ್ ಕರೆದಿರುವ ಕಾಮಗಾರಿಯನ್ನು ಒಂದು ವರ್ಷ ಗತಿಸಿದರೂ ಪೂರ್ಣಗೊಳಿಸುತ್ತಿಲ್ಲ ಎಂದು ಜೈ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ದೂರಿದ್ದಾರೆ.ಈ ಯೋಜನೆಯಡಿ ಟೆಂಡರ್ ಆಗಿದ್ದರೂ, ಕಾಮಗಾರಿಗಳನ್ನು ಕೈಗೆತ್ತಿಕೊಂಡಿಲ್ಲ. ಈ ಬಗ್ಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಮೌಖಿಕವಾಗಿ ತಿಳಿಸಿದರೂ, ಯಾವುದೇ ಕೆಲಸ ಮಾಡುತ್ತಿಲ್ಲ. ಇದೀಗ ಮಳೆಗಾಲ ಆರಂಭವಾಗುತ್ತಿದ್ದು, ಈ ವಾರ್ಡ್‌ನಲ್ಲಿ ಸಾರ್ವಜನಿಕರಿಗೆ ಹಾಗೂ ವಾಹನಗಳಿಗೆ ತಿರುಗಾಡಲು ಅನಾನುಕೂಲವಾಗುತ್ತಿದೆ ಎಂದು ತಿಳಿಸಿದ್ದಾರೆ.ಕಾಮಗಾರಿಗಳು ಪೂರ್ಣಗೊಳ್ಳದೇ ಇರುವುದರಿಂದ ಶಾಲಾ ಮಕ್ಕಳಿಗೆ ಅಪಾಯ ಎದುರಾಗುವ ಸಾಧ್ಯತೆಗಳಿವೆ. ಒಂದು ವಾರದ ಹಿಂದೆ ಕಟ್ಟಿ ಬಸವಣ್ಣ ಸೇವಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.ಆರ್.ವಿ. ಶಾಲೆ ಹತ್ತಿರ ಸಿ.ಸಿ ಚರಂಡಿ ನಿರ್ಮಾಣ, ವೀರಣ್ಣ ಮನೆಯ ಹತ್ತಿರ ಸಿ.ಸಿ ಚರಂಡಿ ಮತ್ತು ರಸ್ತೆ ನಿರ್ಮಾಣ, ಶರಣಪ್ಪ ಮನೆಯಿಂದ ರೋಹಿಣಿ ಪೋಟೋ ಸ್ಟುಡಿಯೋ ಮನೆಯವರೆಗೆ ಸಿ.ಸಿ. ಚರಂಡಿ, ಡಾ. ಅನವರ ಮನೆ ಹತ್ತಿರ ಸಿ.ಸಿ. ಚರಂಡಿ, ಲಕ್ಷ್ಮಿ ಗುಡಿ ಹತ್ತಿರ ಅರ್ಧಕ್ಕೆ ನಿಂತ ಸಿ.ಸಿ. ಕಲ್ವರ್ಟ್ ಕಾಮಗಾರಿಗಳು ಪೂರ್ಣವಾಗುತ್ತಿಲ್ಲ ಎಂದು ಹೇಳಿದ್ದಾರೆ.ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜೈ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಜಿಲ್ಲಾ ಘಟಕದ ಅಧ್ಯಕ್ಷ ಬಾಪುಗೌಡ ಮುಸ್ಟೂರ್, ಚೇತನ ಮಿಲ್ಟ್ರಿ, ಧನರಾಜ ತಂಗಡಗಿ, ಶ್ರೀಕಾಂತ ಭೀಮನಳ್ಳಿ, ಶಿವು ಕುಮಾರ, ರಾಘು ಗುತ್ತೇದಾರ, ಧರ್ಮಣ್ಣ ಗಿರೆಪ್ಪನೋರ್, ಬಸವರಾಜ ಮುಧೋಳ ಇತರರು ಎಚ್ಚರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.