ಶುಕ್ರವಾರ, ಮೇ 14, 2021
31 °C

ವಲಯ ಕಚೇರಿ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾರ್ಪೊರೇಷನ್ ಬ್ಯಾಂಕ್‌ನ ನೂತನ ವಲಯ ಕಚೇರಿಯನ್ನು ಕೇಂದ್ರ ಕಂಪೆನಿ ವ್ಯವಹಾರಗಳ ಸಚಿವ ಎಂ. ವೀರಪ್ಪ ಮೊಯ್ಲಿ ಅವರು ಶುಕ್ರವಾರ ಇಲ್ಲಿ ಉದ್ಘಾಟಿಸಿದರು. ಬೆಂಗಳೂರಿನ ಸುಮಾರು 50 ಶಾಖೆಗಳು ಈ ವಲಯ ಕಚೇರಿಯ ವ್ಯಾಪ್ತಿಗೆ ಬರುತ್ತವೆ. ಈ ಮೂಲಕ ಸುಮಾರು ರೂ4,400 ಕೋಟಿ ವಹಿವಾಟು ಅಂದಾಜಿಸಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ರಾಮನಾಥ್ ಪ್ರದೀಪ್ ಹೇಳಿದರು. ದೇಶದಾದ್ಯಂತ ಇತ್ತೀಚೆಗೆ 12 ಹೊಸ ವಲಯ ಕಚೇರಿಗಳನ್ನು ಪ್ರಾರಂಭಿಸಲಾಗಿದ್ದು, ಒಟ್ಟು ಸಂಖ್ಯೆ 31ಕ್ಕೆ ಏರಿದೆ ಎಂದರು. ಭಾರತೀಯ ರಿಸರ್ವ್ ಬ್ಯಾಂಕ್ ಸೂಚನೆಯನ್ವಯ ಗ್ರಾಮೀಣ ವಿತ್ತೀಯ ಸೇರ್ಪಡೆಗೆ ಆದ್ಯತೆ ನೀಡಲಾಗಿದ್ದು, ಇತ್ತೀಚೆಗೆ ಬೆಂಗಳೂರಿನ ಲಗ್ಗರೆ ಸಮೀಪ `ಗ್ರಾಮೀಣ ವಿತ್ತೀಯ ಸೇರ್ಪಡೆ ಘಟಕ~ವನ್ನೂ ಪ್ರಾರಂಭಿಸಲಾಗಿದೆ. ಇದು ವಲಸೆ ಕಾರ್ಮಿಕರಿಗೆ ಶಾಖೆ  ರಹಿತ ಬ್ಯಾಂಕಿಂಗ್ ಸೇವೆಯನ್ನು ಒದಗಿಸಲಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.