ಭಾನುವಾರ, ಜನವರಿ 26, 2020
18 °C
ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ

ವಸ್ತುನಿಷ್ಠ ವರದಿ ಸಲ್ಲಿಕೆ: ಜಯಕೃಷ್ಣನ್‌ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಸ್ತುನಿಷ್ಠ ವರದಿ ಸಲ್ಲಿಕೆ: ಜಯಕೃಷ್ಣನ್‌ ಭರವಸೆ

ಕಾರವಾರ: ‘ಉದ್ದೇಶಿತ ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಮಿತಿಯು ಪಾರದರ್ಶಕ ರೀತಿಯಲ್ಲಿ ಕಾರ್ಯನಿರ್ವ ಹಿಸುತ್ತಿದ್ದು, ಎಲ್ಲ ಆಯಾಮಗಳನ್ನು ಪರಿಶೀಲಿಸಿದ ಬಳಿಕ ವಸ್ತುನಿಷ್ಠ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗುವುದು’ ಎಂದು ಕೇಂದ್ರ ಉನ್ನತಾಧಿಕಾರ ಸಮಿತಿ ಅಧ್ಯಕ್ಷ ಪಿ.ವಿ. ಜಯಕೃಷ್ಣನ್‌ ಹೇಳಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಸಂಘ–ಸಂಸ್ಥೆಗಳಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.‘ಸಮಿತಿಯು ಪರಿಸರ, ಆರ್ಥಿಕ ವಿಷಯಗಳು ಸೇರಿದಂತೆ ಎಲ್ಲಾ ಆಯಾ ಮಗಳನ್ನು ಪರಿಶೀಲಿಸಲಿದೆ. ಈಗಾಗಲೇ ಉದ್ದೇಶಿತ ರೈಲ್ವೆ ಮಾರ್ಗ ಹಾದು ಹೋಗುವ ಸ್ಥಳಗಳ ಪರಿಶೀಲನೆ ನಡೆಸಲಾಗಿದೆ’ ಎಂದರು.ಯೋಜನೆಪರ ದೇಶಪಾಂಡೆ ಒಲವು: ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ, ‘ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಮೊದಲು ಪರಿಸರ ಸಂರಕ್ಷಣೆಗೆ ಗಮನದಲ್ಲಿ ಹರಿಸಬೇಕು. ಅಭಿವೃದ್ಧಿ ಹಾಗೂ ಪರಿಸರದ ನಡುವೆ ಸಮತೋಲನ ಕಾಪಾ ಡಬೇಕು. -ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ ನಿರ್ಮಾಣದಿಂದ ಉತ್ತರ ಕನ್ನಡ ಜಿಲ್ಲೆ ಮಾತ್ರವಲ್ಲ ಇಡೀ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಆಗಲಿದೆ’ ಎಂದರು.‘ಗಣಿಗಾರಿಕೆ ತೀವ್ರವಾಗಿದ್ದ ಸಂದರ್ಭದಲ್ಲಿ ದಿನನಿತ್ಯ ಸಾವಿರಾರು ಲಾರಿಗಳ ಸಂಚಾರದಿಂದ ರಸ್ತೆ, ಪರಿಸರ ಸಂಪೂರ್ಣ ಹಾಳಾಗಿತ್ತು. ಇದರಿಂದ ಆರ್ಥಿಕವಾಗಿಯೂ ಬಹಳಷ್ಟು ಹಾನಿಯಾಗಿತ್ತು, ರೈಲು ಮಾರ್ಗದಿಂದ ಪರಿಸರ ಸಂರಕ್ಷಣೆ ಮಾತ್ರವಲ್ಲ, ಆರ್ಥಿಕವಾಗಿಯೂ ಬಹಳ ಲಾಭವಾಗಿದೆ. ತದಡಿ, ಬೇಲೆಕೇರಿ ಮೊದಲಾದ ಬಂದರುಗಳ ಅಭಿವೃದ್ಧಿ ಸಹ ಇದರಿಂದ ಸಾಧ್ಯವಾಗಲಿದೆ. ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯಲಿದೆ’ ಎಂದರು.

ಪ್ರತಿಕ್ರಿಯಿಸಿ (+)