ಭಾನುವಾರ, ಜನವರಿ 19, 2020
29 °C

ವಸ್ತುಸಂಗ್ರಹಾಲಯವಾಗಿ ಎಸ್.ಡಿ.ಬರ್ಮನ್ ಮನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಗರ್ತಲ, (ಐಎಎನ್‌ಎಸ್):  ಬಾಲಿವುಡ್ ಸಂಗೀತ ಕ್ಷೇತ್ರದ ದಂತಕಥೆ ಎಂದೇ ಖ್ಯಾತರಾಗಿರುವ ಎಸ್. ಡಿ. ಬರ್ಮನ್ (ಸಚಿನ್ ದೇವ್ ಬರ್ಮನ್) ಅವರ ಬಾಂಗ್ಲಾದೇಶದಲ್ಲಿನ ಪೂರ್ವಜರ ಮನೆಯನ್ನು  ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸುವುದಾಗಿ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಭರವಸೆ ನೀಡಿದ್ದಾರೆ.`ಬಾಂಗ್ಲಾ ದೇಶದ ಪೂರ್ವ ಭಾಗದ ಕೊಮಿಲ್ಲಾದಲ್ಲಿರುವ ಬರ್ಮನ್ ಅವರ ಪೂರ್ವಜರ ಮನೆಯನ್ನು ಜಾನಪದ  ಕಲಾ ಸಂಸ್ಥೆ ಹಾಗೂ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಬೇಕೆನ್ನುವ ನಮ್ಮ ಪ್ರಸ್ತಾಪಕ್ಕೆ ಬಾಂಗ್ಲಾ ಸರ್ಕಾರ ಒಪ್ಪಿಗೆ ನೀಡಿದೆ~ ಎಂದು ಹಸೀನಾ ಅವರನ್ನು ಭೇಟಿಯಾದ ಸಾಂಸ್ಕೃತಿಕ ಪ್ರತಿನಿಧಿಗಳ ತಂಡದ ಸದಸ್ಯರಲ್ಲೊಬ್ಬರಾದ ಗೌತಮ್ ದಾಸ್ ಸ್ಪಷ್ಟಪಡಿಸಿದ್ದಾರೆ.`ಮನೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಸ್ಥಳೀಯರಲ್ಲಿ ಕೆಲವರು ಅದನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದಲ್ಲದೆ ಅದನ್ನು ಕೋಳಿ ಸಾಕಣೆ ಕೇಂದ್ರವನ್ನಾಗಿ ಬದಲಾಯಿಸಿದ್ದಾರೆ. ಆದರೆ ಶೇಖ್ ಹಸೀನಾ ಪ್ರಧಾನಿಯಾದಾಗ ನಾವು ಈ ಕುರಿತು ಅವರ ಗಮನಕ್ಕೆ ತಂದಾಗ, ಮನೆಯ ರಕ್ಷಣೆಯ  ಬಗ್ಗೆ ಅವರು ಕ್ರಮ ಕೈಗೊಂಡಿದ್ದರು~ ಎಂದರು.ಬಾಂಗ್ಲಾ ದೇಶದ ವಿದೇಶಾಂಗ ಸಚಿವ ದೀಪು ಮೋನಿ ಸೇರಿದಂತೆ 100 ಮಂದಿ ಪ್ರತಿನಿಧಿಗಳ ತಂಡದೊಂದಿಗೆ ಹಸೀನಾ ಅವರು ಕಳೆದ ವಾರ ತ್ರಿಪುರಾಕ್ಕೆ ಭೇಟಿ ನೀಡಿದ್ದರು. 1971ರ ಭಾರತ-ಪಾಕ್ ಯುದ್ಧದ ವೇಳೆ ಬಾಂಗ್ಲಾ ತ್ರಿಪುರಾವನ್ನೇ ನೆಲೆಯಾಗಿಟ್ಟುಕೊಂಡು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿತ್ತು. ಎಸ್. ಡಿ. ಬರ್ಮನ್ ಢಾಕಾದಿಂದ 85 ಕಿ.ಮೀ. ದೂರದ ಕೊಮಿಲ್ಲಾದ ಚೋರ್ತಾ ನಗರದಲ್ಲಿ 1906ಅಕ್ಟೋಬರ್ 1ರಂದು ಜನಿಸಿದ್ದರು.

ಪ್ರತಿಕ್ರಿಯಿಸಿ (+)