ಗುರುವಾರ , ಮೇ 19, 2022
21 °C

ವಾಗ್ದೇವಿ ಶಾಲೆಯಲ್ಲಿ ನವ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಟಾಣಿ ಮಕ್ಕಳ ಪ್ರಪಂಚವೇ ಬೇರೆ. ಅವರ ಕುತೂಹಲ ಮತ್ತು ಹುಡುಕಾಟಕ್ಕೆ ಕೊನೆಯೇ ಇಲ್ಲ. ಅವರಷ್ಟಕ್ಕೆ ಬಿಟ್ಟರೆ ಏನೆಲ್ಲಾ ಪ್ರಯೋಗಗಳು, ಜಾಣ್ಮೆ ಪ್ರದರ್ಶಿಸುತ್ತಾರೆ.

ಇಂಥ ಪುಟಾಣಿ ಮಕ್ಕಳ ಕಲಾ ಸಿರಿಯನ್ನು ಪ್ರದರ್ಶಿಸುವ ‘ಪುಟಾಣಿ ಪ್ರಪಂಚ-2011’ ಎಂಬ ವಿನೂತನ ಕಾರ್ಯಕ್ರಮವನ್ನು ಮಾರತಹಳ್ಳಿಯ ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆ ಶನಿವಾರ ಆಯೋಜಿಸಿದೆ. ಈ ಸಲದ ವಿಷಯ ‘ನವ ಭಾರತ’. ಇಲ್ಲಿ 1700 ಮಕ್ಕಳು ತಮ್ಮ ನೃತ್ಯ ವೈಭವದಿಂದ ದೇಶದ ಎಲ್ಲಾ ರಾಜ್ಯಗಳ ಸಂಸ್ಕೃತಿ ಬಿಂಬಿಸಲಿದ್ದಾರೆ.

ಪುಟಾಣಿ ಪ್ರಪಂಚ-2011ದಲ್ಲಿ ಒಂದೆಡೆ ಪುಟಾಣಿಗಳ ಪ್ರತಿಭೆ ಅನಾವರಣದ ಜತೆಗೆ ಹೈಸ್ಕೂಲ್ ಮತ್ತು ಪಿಯು ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಆಸಕ್ತಿ ಬೆಳೆಸಲು ಪೂರಕವಾದ ವಿಷಯಗಳ ಮೇಲೆ ವಿಚಾರ ಸಂಕಿರಣ ಕೂಡಾ ನಡೆಯುತ್ತದೆ. ಲಂಡನ್‌ನ ಬೋರೊ ಆಫ್ ಲ್ಯಾಂಬೆಥ್‌ನ ಮೇಯರ್ ಕನ್ನಡಿಗ ಡಾ. ನೀರಜ್ ಪಾಟೀಲ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜಾಗತೀಕರಣದ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದ ಸವಾಲುಗಳು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಎದುರಿರುವ ಆಯ್ಕೆಗಳ ಕುರಿತು ಅವರು ವಿವರಿಸಲಿದ್ದಾರೆ.

ಗುಲ್ಬರ್ಗ ಜಿಲ್ಲೆಯ ಕಮಲಾಪುರದಲ್ಲಿ ಹುಟ್ಟಿ ಬೆಳೆದು ಬ್ರಿಟನ್‌ನಲ್ಲಿ ಮೇಯರ್ ಸ್ಥಾನ ಅಲಂಕರಿಸಿರುವ ಡಾ. ನೀರಜ್ ನಮ್ಮ ವಿದ್ಯಾರ್ಥಿಗಳ ಜತೆ ಸಂವಾದ ನಡೆಸುವುದು ಹೆಮ್ಮೆಯ ಸಂಗತಿ ಎನ್ನುತ್ತಾರೆ ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ. ಹರೀಶ್.  ಸ್ಥಳ: ಮನ್ನೇಕೊಳಲು, ಮಾರತ್‌ಹಳ್ಳಿ. ಮಾಹಿತಿಗೆ: 2849 5850.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.