ಬೆಂಗಳೂರು: ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಬೆಂಗಳೂರಿನಲ್ಲಿ ಶನಿವಾರ `ಸೋಲೋತ್ಸವ' (ವಿಜಯೋತ್ಸವದ ವಿರುದ್ಧ ಪ್ರಕ್ರಿಯೆ) ಆಚರಿಸಿದರು.

ವೇದಿಕೆಯ ಮೇಲೆ ಕುರಿಯನ್ನು ಕರೆತಂದು, ಅದಕ್ಕೆ ಶಾಲು ಹಾಕಿ ಸನ್ಮಾನಿಸಿದರು. ಮೈಸೂರು ಪೇಟ ತೊಡಿಸಿದರು.

`ತತ್ವ ಸಿದ್ಧಾಂತಗಳನ್ನು ತ್ಯಜಿಸಿದ್ದರೆ ನಾನು ಮಂತ್ರಿ, ಮುಖ್ಯಮಂತ್ರಿ ಹುದ್ದೆ ಅನುಭವಿಸಬಹುದಿತ್ತು. ಆದರೆ ಜಾತಿ ಎಂಬ ಮಹಾಮಾರಿಗೆ ನಾನು ಬಲಿಯಾದೆ. ನನಗೆ ಎದುರಾಗಿರುವುದು ಸೋಲಲ್ಲ, ಇದು ಸಾವು. ಇನ್ನು ಮುಂದೆ ಜಾತಿ ಎಂಬ ಮಾರಿಯ ವಿರುದ್ಧ ನಾನು ರಾಜ್ಯದ ಎಲ್ಲೆಡೆ ಹೋರಾಟ ನಡೆಸುತ್ತೇನೆ' ಎಂದು ವಾಟಾಳ್ ಹೇಳಿದರು. `ಕನ್ನಡಕ್ಕಾಗಿ ಹೋರಾಟ ಮಾಡಿದ ನನ್ನನ್ನು, ಜನ ಹರಕೆಯ ಕುರಿ ಮಾಡಿದರು' ಎಂದು ಬೇಸರ ವ್ಯಕ್ತಪಡಿಸಿದರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.