ವಾಡಿ: ನೀರು ಶುದ್ಧೀಕರಣ ಘಟಕ ಸಜ್ಜು

ವಾಡಿ: ಪುರಸಭೆ ವತಿಯಿಂದ ಹಮ್ಮಿಕೊಂಡ ಸಮಗ್ರ ನೀರು ಸರಬರಾಜು ಯೋಜನೆಯಡಿ ಸುಮಾರು ₨12ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಜಲ ಶುದ್ಧೀಕರಣ ಘಟಕ ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಲು ಫೆ.28ರಂದು ಪಟ್ಟಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡುತ್ತಿದ್ದಾರೆ ಎಂದು ಅಧ್ಯಕ್ಷೆ ಹಸೀನಬೇಗಂ ಖುರೇಷಿ ತಿಳಿಸಿದರು.
ಎಸ್ಎಫ್ಪಿ ಯೋಜನೆಯಡಿ ಸುಮಾರು ₨ 5ಲಕ್ಷ ವೆಚ್ಚದಲ್ಲಿ ಸಮುದಾಯ ಭವನ, ₨12ಲಕ್ಷದಲ್ಲಿ 7, 11 ನೇ ವಾರ್ಡ್ನಲ್ಲಿ ಮಹಿಳಾ ಸಮುದಾಯ ಶೌಚಾಲಯ ಕಟ್ಟಡವನ್ನು ಮುಖ್ಯಮಂತ್ರಿ ಉದ್ಘಾಟಿಸಿ ಮಹಿಳೆಯರಿಗೆ ಅನುಕೂಲ ಮಾಡಿಕೊಡಲಿದ್ದಾರೆ ಎಂದು ಬುಧವಾರ ಪುರ-ಸಭೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
5,7,10,19,ವಾರ್ಡ್ನಲ್ಲಿ ಸುಮಾರು ₨69ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಸಿಮೆಂಟ್ ರಸ್ತೆ ಮತ್ತು ಒಳಚರಂಡಿ ಕಾಮಗಾರಿಗಳಿಗೆ ಗೂದ್ದಲಿ ಪೂಜೆ ಮತ್ತು ಉನ್ನತ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ₨ 3ಲಕ್ಷ ಸಹಾಯಧನ ಮತ್ತು ₨ 6ಲಕ್ಷ ಆರೋಗ್ಯ ಪರಿಹಾರಧನ ಹಾಗೂ ಪುರಸಭೆ 23ಪೌರ ಕಾರ್ಮಿಕರರಿಗೆ ₨7ಲಕ್ಷದ ಅನಿಲ ಸಿಲಿಂಡರ್ ಉಚಿತವಾಗಿ ಫಲಾನುಭವಿಗಳಿಗೆ ಮುಖ್ಯಮಂತ್ರಿಗಳು ವಿತರಿಸಲಿದ್ದಾರೆ ಎಂದು ಮುಖ್ಯಾಧಿಕಾರಿ ರಮೇಶ ಪಟ್ಟೆದಾರ್ ಸಮಾರಂಭದ ವಿವರ ನೀಡಿದರು.
ಸ್ವಯಂ ಉದ್ಯೋಗ ಮಾಡುತ್ತಿರುವ ಯುವಕರಿಗೆ ₨ 23ಲಕ್ಷ ಸಹಾಯಧನ ಹಾಗೂ ಅಂಗವಿಕಲರಿಗೆ ಮೂರು ಸೈಕಲ್ ವಿತರಣೆ, ಮಹಿಳಾ ಸ್ವಸಹಾಯ ಗುಂಪುಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದರು. ಫೆ.28ರ ಸಮಾರಂಭಕ್ಕೆ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಚಿವ ಖಮರುಲ್ ಇಸ್ಲಾಂ ಭಾಗವಹಿಸುವರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.