ಸೋಮವಾರ, ಮೇ 16, 2022
30 °C

ವಾಣಿಜ್ಯ ಮಳಿಗೆ ಟೆಂಡರ್ ಮುಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರಗೂರು: ಪರಿಶಿಷ್ಟರಿಗೆ ಮೀಸಲಾತಿ ಇಡದಿರುವ ಬಗ್ಗೆ ಫಲಾನುಭವಿಗಳು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಇಲ್ಲಿನ ಪಟ್ಟಣ ಪಂಚಾಯಿತಿ 5  ವಾಣಿಜ್ಯ ಮಳಿಗೆಗಳ ಟೆಂಡರ್‌ನ್ನು ಮುಂದೂಡಲಾಗಿದೆ. 5 ಮಳಿಗೆಯಲ್ಲಿ ಪರಿಶಿಷ್ಟರಿಗೂ ಮೀಸಲಾತಿ ನೀಡಬೇಕು. ವಾಣಿಜ್ಯ ಸಂಕೀರ್ಣದಲ್ಲಿರುವ ಮೊದಲ ಅಂಗಡಿ ಮಳಿಗೆಯನ್ನು ನಮಗೆ  ಕೊಡಬೇಕು ಎಂದು ಎಸ್‌ಸಿ ಮತ್ತು ಎಸ್‌ಟಿ ಫಲಾನುಭವಿಗಳು ಮುಖ್ಯಾಧಿಕಾರಿ ಗಳಿಗೆ ಕೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಾಧಿಕಾರಿ ನಂಜುಂಡ ಸ್ವಾಮಿ ಕಾನೂನು ಪ್ರಕಾರ ಒಂದು ಅಂಗಡಿ ಮಳಿಗೆ ಮೀಸಲು ಇಡಲಾಗಿದೆ. ಟೆಂಡರ್ ನಡೆಸಲು ಸಹಕರಿಸಿ ಎಂದು ಕೇಳಿದರು.ಪ.ಪಂ.ಗೆ ಶಾಸಕ ಚಿಕ್ಕಣ್ಣ ಆಗಮಿಸಿ ಟೆಂಡರ್ ಸಂಬಂಧ ಪಟ್ಟಂತೆ ಸಂಪೂರ್ಣ ವಿವರ ಪಡೆದು ಮಾತನಾಡಿ ಇದರಲ್ಲಿ ಮೀಸಲು 22.5 ಎಸ್‌ಸಿ ಮತ್ತು ಎಸ್‌ಟಿಯಲ್ಲಿ ಮೀಸಲಿದೆ.ಇವರಿಗೆ ಈ ಸವಲತ್ತು ಸಿಗಬೇಕು. ಈ ದಿನ ಇರುವ ಟೆಂಡರ್ ಮುಂದೂಡಿ. ಈ ವಿಷಯಕ್ಕೆ  ಸಂಬಂಧ ಪಟ್ಟಂತೆ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮತ್ತೆ ಟೆಂಡರ್ ಕರೆಯಿರಿ ಎಂದು ಮುಖ್ಯಾಧಿಕಾರಿ ನಂಜುಂಡ ಸ್ವಾಮಿ ಯವರಿಗೆ ತಿಳಿಸಿದರು. ಟೆಂಡರ್‌ಗೆ ಬಂದಿದ್ದ ಸಾರ್ವಜನಿಕರನ್ನು ಶಾಸಕರು ಸಮಾಧಾನ ಪಡಿಸಿದರು.ಕರವೇ ಗೌರವಾಧ್ಯಕ್ಷ ಎಸ್.ಎಲ್. ರಾಜಣ್ಣ ಮಾತನಾಡಿ ಇರುವ 5 ಅಂಗಡಿ ಮಳಿಗೆಗಳಲ್ಲಿ 2 ಮತ್ತು 4ನೇ ಮಳಿಗೆಗಳನ್ನು ಎಸ್‌ಸಿ ಮತ್ತು ಎಸ್‌ಟಿಯವರಿಗೆ ಮೀಸಲು ಮಾಡಿ ಟೆಂಡರ್ ನಡೆಸಿ. ಸುಮಾರು 26 ಮಂದಿ ಟೆಂಡರ್‌ಗೆ ಹಣ ಪಾವತಿ ಮಾಡಿದ್ದಾರೆ ಎಂದರು. ಟೆಂಡರ್‌ಗೆ ಒಂದು ಅಂಗಡಿಗೆ 20 ಸಾವಿರ ನಗದು ಹಣವನ್ನು ಪ.ಪಂ.ಗೆ ಪಾವತಿ ಮಾಡಿದ್ದರು. ನಂತರ ಹಣವನ್ನು ವಾಪಸ್ಸು  ನೀಡಲಾ ಯಿತು. 5 ವಾಣಿಜ್ಯ ಮಳಿಗೆಗಳಲ್ಲಿ ಅಂಗಡಿ ಸಂಖ್ಯೆ 1 ಕ್ಕೆ ಮಾಸಿಕ ಬಾಡಿಗೆ 15 ಸಾವಿರದಿಂದ 18 ಸಾವಿರ ತನಕ ಬಿಡ್ ಆಗುವ ಲಕ್ಷಣವು ಕಾಣುತ್ತಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.