ಸೋಮವಾರ, ಜೂನ್ 21, 2021
30 °C

ವಾಯುಪಡೆ ಯುದ್ಧ ವಿಮಾನ ಅಪಘಾತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್):ಭಾರತೀಯ ವಾಯುಪಡೆಗೆ ಸೇರಿದ ಮಿರಾಜ್-2000 ತರಬೇತಿ ಯುದ್ಧ ವಿಮಾನ ಸೋಮವಾರ ರಾಜಸ್ತಾನದಲ್ಲಿ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.ಎಂದಿನಂತೆ ಮಧ್ಯ ಪ್ರದೇಶದ ಗ್ವಾಲಿಯರ್‌ನಿಂದ ಹಾರಾಟ ನಡೆಸಿದ ವಿಮಾನವು ಮಧ್ಯಾಹ್ನ 12.45ಕ್ಕೆ ಜೈಪುರ ಸಮೀಪದ ಸವಾಯ್ ಮಾಧೋಪುರ್ ಬಳಿ ದುರಂತಕ್ಕೀಡಾಗಿದೆ. ವಿಮಾನದ ಇಬ್ಬರು ಚಾಲಕರು ಸುರಕ್ಷಿತವಾಗಿದ್ದಾರೆ ಎಂದು ವಾಯುಪಡೆಯ ಮೂಲಗಳು ತಿಳಿಸಿವೆ.ಕಳೆದ ಹತ್ತು ದಿನಗಳ ಅವಧಿಯಲ್ಲಿ ಅಪಘಾತಕ್ಕೀಡಾದ ಎರಡನೇ ಮಿರಾಜ್ ವಿಮಾನ ಇದಾಗಿದ್ದು, ಫೆಬ್ರುವರಿ 24ರಂದು ಮಿರಾಜ್-2000 ವಿಮಾನ ನೆಲಕ್ಕಪ್ಪಳಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.