ಮಂಗಳವಾರ, ಮೇ 11, 2021
25 °C

ವಾಯು ಮಾಲಿನ್ಯ ತಡೆಗಟ್ಟಿ

- ವಿಜಯ್ ಕುಮಾರ್ ಬಿ. Updated:

ಅಕ್ಷರ ಗಾತ್ರ : | |

ನಗರದಲ್ಲಿ ಸಂಚಾರಿಸುವ ಸರಕು ಸಾಗಾಣಿಕೆ ವಾಹನಗಳು ಮತ್ತು ಕೆಲವು ಬಿಎಂಟಿಸಿ ಹಾಗೂ ಖಾಸಗಿ ಬಸ್‌ಗಳು ಕೂಡಾ ತುಂಬ ಹೊಗೆಯನ್ನು ಬಿಡುತ್ತಿರುತ್ತವೆ. ಇದರಿಂದ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ. ಸಾರಿಗೆ ಇಲಾಖೆಯ ವಾಯು ಮಾಲಿನ್ಯ ತಪಾಸಣೆಯನ್ನು ನಿಗದಿತ ಅವಧಿಯಲ್ಲಿ ಮಾಡಿಸುವಂತೆ ಆದೇಶವಿದ್ದರೂ ವಾಹನಗಳು ಹೊಗೆ ಹೊರಬಿಡುತ್ತಿರುವುದು ಸರ್ವೆ ಸಾಮಾನ್ಯವಾಗಿದೆ.ಇದರಿಂದ ಜನತೆಯ ಮೇಲೆ ಅನಾರೋಗ್ಯದ ಪರಿಣಾಮ ಉಂಟಾಗುತ್ತಿದ್ದು ಮಕ್ಕಳು, ಹಿರಿಯ ನಾಗರಿಕರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ತುಂಬಾ ತೊಂದರೆ ಉಂಟು ಮಾಡುತ್ತದೆ. ಸರ್ಕಾರ ಈ ವಿಷಯ ಮನಗಂಡು ನಗರದ ಪ್ರತಿಯೊಂದು ಬಡಾವಣೆಗಳಲ್ಲಿ ವಾಹನ ತಪಾಸಣೆಯನ್ನು ನಿರಂತರವಾಗಿ ನಡೆಸಿ, ನಾಗರಿಕರಿಗೆ ಉಂಟಾಗುತ್ತಿರುವ ಕಿರಿಕಿರಿಯನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು.

- ವಿಜಯ್ ಕುಮಾರ್ ಬಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.