ಬೀದರ್: ವಾಯು ಸೇನಾ ಕೇಂದ್ರದ ಮುಖ್ಯಸ್ಥರಾಗಿ ಏರ್ ಕಮಾಂಡರ್ ಮನೀಶ್ ಖನ್ನಾ ಸೋಮವಾರ ಅಧಿಕಾರ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಹಿಂದಿನ ಮುಖ್ಯಸ್ಥರಾದ ಏರ್ ಕಮಾಂಡರ್ ಎಸ್. ಪಿ ಧಾರ್ಕರ್ ಅವರನ್ನು ಬೀಳ್ಕೊಡಲಾಯಿತು.

1986ರಲ್ಲಿ ವಾಯು ಸೇನೆ ಸೇರಿದ ಮನೀಷ್ ಖನ್ನಾ ಅವರು ಎ ದರ್ಜೆಯ ತರಬೇತುದಾರ ಹಾಗೂ ಪರೀಕ್ಷಕರಾಗಿದ್ದಾರೆ. ವಿವಿಧ ಯುದ್ಧ ವಿಮಾನಗಳಲ್ಲಿ ಹಾರಾಟ ನಡೆಸಿದ ಅನುಭವ ಹೊಂದಿದ್ದಾರೆ.

ರಾಷ್ಟ್ರೀಯ ರಕ್ಷಣಾ ಸಂಸ್ಥೆ ಹಾಗೂ ರಕ್ಷಣಾ ಸೇವೆ ಸಿಬ್ಬಂದಿ ಕಾಲೇಜಿನಲ್ಲಿ ಅಧ್ಯಯನ ನಡೆಸಿದ ಅವರು, ಬೋಟ್ಸವಾನಾ ರಕ್ಷಣಾ ಪಡೆಯ ಮುಖ್ಯ ಹಾರಾಟ ಪರೀಕ್ಷಕರಾಗಿ ಕೆಲಸ ಮಾಡಿದ್ದಾರೆ.

ಮನೀಷ್ ಖನ್ನಾ ಅವರ ಪತ್ನಿ ಅನು ಖನ್ನಾ ಅವರು ವಾಯುಸೇನಾ ಸಿಬ್ಬಂದಿಯ ಪತ್ನಿಯರ ಕಲ್ಯಾಣ ಸಂಘದ ಅಧ್ಯಕ್ಷೆಯಾಗಿ ಸ್ಮಿತಾ ಧಾರ್ಕರ್ ಅವರಿಂದ ಅಧಿಕಾರ ವಹಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.