ಭಾನುವಾರ, ಜನವರಿ 19, 2020
23 °C

ವಾರ್ಡ್ 14: ಮತದಾನ ಶಾಂತಿಯುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಸದಸ್ಯರ ರಾಜೀನಾಮೆಯಿಂದ ತೆರವಾಗಿರುವ ನಗರಸಭೆಯ ವಾರ್ಡ್ ಸಂಖ್ಯೆ 14ಕ್ಕೆ ಮಂಗಳವಾರ ಉಪಚುನಾವಣೆ ನಡೆಯಿತು.

ವಾರ್ಡ್‌ನ ವಿವಿಧೆಡೆಗಳಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಗಳಲ್ಲಿ ಜನ ಉತ್ಸಾಹದಿಂದ ಮತ ಚಲಾಯಿಸಿದರು. ಮಹಿಳೆಯರು ಸೇರಿದಂತೆ ಜನ ಮತಗಟ್ಟೆಗಳ ಎದುರು ಸರದಿ ಸಾಲಿನಲ್ಲಿ ನಿಂತು ಮತ ಹಾಕಿದರು.ಅಂಗವಿಕಲರು ಹಾಗೂ ವೃದ್ಧರನ್ನು ಆಯಾ ಪಕ್ಷಗಳ ಕಾರ್ಯಕರ್ತರು ಮತಗಟ್ಟೆಗೆ ಕರೆ ತರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ವಿವಿಧೆಡೆ ಸಂಚರಿಸಿ ಮತದಾನ ಪ್ರಕ್ರಿಯೆ ವೀಕ್ಷಿಸಿದರು.ಹಿಂದೆ ವಾರ್ಡ್‌ನ ಸದಸ್ಯರಾಗಿದ್ದ ಸುಭಾಷ ಮನೋಹರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯುತ್ತಿದೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಫರ್ನಾಂಡಿಸ್ ಹಿಪ್ಪಳಗಾಂವ್, ಬಿಜೆಪಿಯಿಂದ ನವೀನಕುಮಾರ ಶಿವಕುಮಾರ ಹಾಗೂ ಜಾತ್ಯತೀತ ಜನತಾ ದಳದಿಂದ ರಮೇಶ ಸ್ಯಾಮಸನ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.ಇದೀಗ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದ್ದು, ಈ ಎಲ್ಲರಲ್ಲಿ ಅದೃಷ್ಟ ಯಾರಿಗೆ ಒಲಿಯಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.ಅಯಾಜ್‌ಖಾನ್‌ಗೆ ಪ್ರಶಸ್ತಿ: ಇಂಡೋ ಗಲ್ಫ್ ಫ್ರೈಂಡ್‌ಶಿಪ್ ಆ್ಯಂಡ್ ಎಕಾನಮಿಕ್ ಕೋ ಆಪರೇಷನ್ ಗ್ಲೋಬಲ್ ಅಚೀವರ್ಸ್ ಅವಾರ್ಡ್‌ಗೆ ಪಾತ್ರರಾಗಿರುವ ನೂರ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಅಯಾಜ್‌ಖಾನ್ ಅವರನ್ನು ನಗರದ ನೂರ್ ಕಾಲೇಜಿನಲ್ಲಿ ಸೋಮವಾರ ಸನ್ಮಾನಿಸಲಾಯಿತು.ಅಯಾಜ್‌ಖಾನ್ ಅವರಿಗೆ ಅಂತರರಾಷ್ಟ್ರೀಯ ಪ್ರಶಸ್ತಿ ದೊರೆತಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಪ್ರಾಚಾರ್ಯ ಮಹಮ್ಮದ್ ಇಮ್ರಾನ್ ಸಯೀದ್ ಈ ಸಂದರ್ಭದಲ್ಲಿ ತಿಳಿಸಿದರು. ನೂರ್ ಕಾಲೇಜು ಸಂಸ್ಥೆಯ ಸಿಬ್ಬಂದಿ ಅವರಿಗೆ ಹೂಮಾಲೆ ಹಾಕಿ ಅಭಿನಂದಿಸಿದರು.ಎಂ.ಎಡ್. ಪ್ರಾಚಾರ್ಯ ಡಾ. ವೆಂಕಟರಾವ ಪಲಾಟೆ, ನರ್ಸಿಂಗ್ ಕಾಲೇಜು ಪ್ರಾಚಾರ್ಯರಾದ ಕ್ರಿಸ್ಟಿನಾ ಮೇಡಂ, ಪ್ರಮುಖರಾದ ಶರಣಪ್ಪ ಶರ್ಮಾ, ಪ್ರಭು ಕೆ.ಎಸ್.ಆರ್.ಟಿ.ಸಿ., ಮಹಮ್ಮ ಹಾಜಿ, ಯುಸೂಫ್‌ಖಾನ್, ಸಮೀರ್‌ಖಾನ್, ರಾಜಕುಮಾರ, ಪ್ರಭಾಕರ, ವಿಠಲರಾವ, ಸುವರ್ಣ, ಜಾನಕಿ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)