ಗುರುವಾರ , ಜೂನ್ 24, 2021
29 °C

ವಾರ್ನರ್‌ ಶತಕ; ಆಸೀಸ್‌ ಉತ್ತಮ ಮೊತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಪ್‌ ಟೌನ್‌ (ಎಎಫ್‌ಪಿ): ಡೇವಿಡ್‌ ವಾರ್ನರ್‌ ಶತಕ ಮತ್ತು ಮೈಕಲ್‌ ಕ್ಲಾರ್ಕ್‌ ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಆಸ್ಟ್ರೇಲಿಯಾ ತಂಡ ಶನಿವಾರ ಆರಂಭವಾದ ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ ಉತ್ತಮ ಮೊತ್ತದತ್ತ ಹೆಜ್ಜೆ ಹಾಕಿದೆ.ಟಾಸ್‌ ಗೆದ್ದ ಪ್ರವಾಸಿ ಆಸೀಸ್‌ ತಂಡ ಮೊದಲು ಬ್ಯಾಟ್‌ ಮಾಡಲು ಮುಂದಾಯಿತು. ಕ್ರಿಸ್‌ ರೋಜರ್ಸ್‌ (25) ಬೇಗನೆ ಪೆವಿಲಿಯನ್‌ ಸೇರಿ ದರು. ಐದೂವರೆ ಗಂಟೆ ಕ್ರೀಸ್‌ನಲ್ಲಿದ್ದ ವಾರ್ನರ್‌ 152 ಎಸೆತಗಳಲ್ಲಿ 135 ರನ್‌ ಕಲೆ ಹಾಕಿದರು. ಆರಂಭಿಕ ಬ್ಯಾಟ್ಸ್‌ಮನ್‌ ವಾರ್ನರ್‌ ಟೆಸ್ಟ್‌ನಲ್ಲಿ ಗಳಿಸಿದ ಏಳನೇ ಶತಕ ಇದು. ಇದರಿಂದ ಕಾಂಗರೂ ಬಳಗ ಮೊದಲ ದಿನದಾ ಟದ ಅಂತ್ಯಕ್ಕೆ 88 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 331 ರನ್‌ ಕಲೆ ಹಾಕಿದೆ.ಮೂರನೇ ವಿಕೆಟ್‌ಗೆ ವಾರ್ನರ್‌ ಮತ್ತು ಮೈಕಲ್‌ ಕ್ಲಾರ್ಕ್‌ 79 ರನ್ ಕಲೆ ಹಾಕಿದರು. 92  ರನ್‌ ಗಳಿಸಿರುವ ಕ್ಲಾರ್ಕ್‌ ಶತಕದ ಹಾದಿಯಲ್ಲಿ ಹೆಜ್ಜೆ ಹಾಕಿದ್ದಾರೆ. ನಾಯಕನ ಆಟಕ್ಕೆ ಬೆಂಬಲ ನೀಡಿರುವ ಸ್ಟೀವನ್ ಸ್ಮಿತ್‌ (ಬ್ಯಾಟಿಂಗ್‌ 50) ಅರ್ಧಶತಕ ಗಳಿಸಿದರು. ನಾಲ್ಕನೇ ವಿಕೆಟ್‌ಗೆ ಈ ಜೋಡಿ 114 ರನ್‌ ಕಲೆ ಹಾಕಿದೆ.ಮೊದಲ ಟೆಸ್ಟ್‌ನಲ್ಲಿ ಆಸೀಸ್‌ ತಂಡ 281 ರನ್‌ಗಳ ಗೆಲುವು ಸಾಧಿಸಿತ್ತು. ಎರಡನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ 231 ರನ್‌ಗಳ ಗೆಲುವು ಪಡೆದಿತ್ತು. ಮೂರು ಪಂದ್ಯಗಳ ಸರಣಿ ಈಗ 1–1ರಲ್ಲಿ ಸಮಬಲವಾಗಿದೆ. ಆದ್ದರಿಂದ ಅಂತಿಮ ಟೆಸ್ಟ್‌್ ಉಭಯ ತಂಡಗಳಿಗೂ ಮುಖ್ಯವೆನಿಸಿದೆ.ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ 88 ಓವರ್‌ಗಳಲ್ಲಿ 3 ವಿಕೆಟ್‌ಗೆ 331. (ಕ್ರಿಸ್‌ ರೋಜರ್ಸ್‌ 25, ಡೇವಿಡ್‌ ವಾರ್ನರ್‌ 135, ಮೈಕಲ್‌ ಕ್ಲಾರ್ಕ್‌ ಬ್ಯಾಟಿಂಗ್‌ 92, ಸ್ಟೀವನ್‌ ಸ್ಮಿತ್‌ ಬ್ಯಾಟಿಂಗ್‌ 50; ಡೇಲ್‌ ಸ್ಟೈನ್‌ 44ಕ್ಕೆ1, ಜೆ.ಪಿ. ಡುಮಿನಿ 37ಕ್ಕೆ1.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.