ಬ್ರಿಸ್ಬೇನ್ (ಪಿಟಿಐ/ಐಎಎನ್ಎಸ್): ಲೀಗ್ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಆಸ್ಟ್ರೇಲಿಯದ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದರು. ಈ ಪರಿಣಾಮ ಪ್ರವಾಸಿ ತಂಡಕ್ಕೆ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಫೈನಲ್ ಪಂದ್ಯದಲ್ಲಿ 15 ರನ್ಗಳ ಸೋಲಿನ ಸಂಕಷ್ಟ!

ಸೋಲು ಎದುರಾದರೂ, ಮಾಹೇಲ ಜಯವರ್ಧನೆ ಪಡೆ ತೋರಿದ ಹೋರಾಟ ಮಾತ್ರ ಮೆಚ್ಚುವಂಥದ್ದು. ಭಾನುವಾರ ನಡೆದ ಈ ಪಂದ್ಯದಲ್ಲಿ ಎರಡೂ ತಂಡಗಳಿಂದ ರನ್ ಹೊಳೆಯೇ ಹರಿಯಿತು. ಈ ಪಂದ್ಯದಲ್ಲಿ ಒಟ್ಟು 627 ರನ್ಗಳು ಬಂದವು. ಆದರೆ, ಗೆಲುವಿನ ಸಂಭ್ರಮ ಅನುಭವಿಸಿದ್ದು ಮಾತ್ರ ಕಾಂಗರೂ ಪಡೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸೀಸ್ 50 ಓವರ್ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 321 ರನ್ಗಳ ಬೃಹತ್ ಮೊತ್ತವನ್ನು ಲಂಕಾ ಪಡೆಯ ಮುಂದಿಟ್ಟಿತು. ಈ ಗುರಿ ಮುಟ್ಟುವ ಹಾದಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಪ್ರವಾಸಿ ತಂಡ ಕೊನೆಯ ಓವರ್ವರೆಗೂ ಹೋರಾಟ ನಡೆಸಿ 306 ರನ್ ಗಳಿಸಿತು. ಉಫುಲ್ ತರಂಗ (60, 67ಎಸೆತ, 3ಬೌಂಡರಿ) ಹಾಗೂ ನುವಾನ್ ಕುಲಶೇಖರ (73, 43ಎಸೆತ, 7 ಬೌಂಡರಿ, 3ಸಿಕ್ಸರ್) ಅವರ ವೇಗದ ಬ್ಯಾಟಿಂಗ್ ಇದಕ್ಕೆ ಕಾರಣವಾಯಿತು.

ಕುಲಶೇಖರ 42ನೇ ಓವರ್ನಲ್ಲಿ ಡೇವಿಡ್ ಹಸ್ಸಿ ಎಸೆತದಲ್ಲಿ ಕ್ಸೇವಿಯರ್ ಡೋಹರ್ತಿಗೆ ಕ್ಯಾಚ್ ನೀಡಿ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು. ಈ ವಿಕೆಟ್ ಪತನವಾಗಿದ್ದು ಸಿಂಹಳೀಯರ ತಂಡದ ಹೋರಾಟದ ಅಂತ್ಯಕ್ಕೆ ಮುನ್ನುಡಿಯೂ ಆಯಿತು. ಏಕೆಂದರೆ, ನಂತರ ಬಂದ ರಂಗನಾ ಹೇರತ್ (5) ಹಾಗೂ ಲಸಿತ್ ಮಾಲಿಂಗ (1) ಎರಡಂಕಿಯ ಮೊತ್ತವನ್ನು ಮುಟ್ಟದೇ ಔಟಾದರು.

ವಾರ್ನರ್ ಅಬ್ಬರ: ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಆಸೀಸ್ ಸವಾಲಿನ ಮೊತ್ತ ಗಳಿಸಿತು. ಇದಕ್ಕೆ ವಾರ್ನರ್ ಅಬ್ಬರದ ಬ್ಯಾಟಿಂಗ್ ಕಾರಣವಾಯಿತು.

19 ಏಕದಿನ ಪಂದ್ಯಗಳನ್ನು ಆಡಿದರೂ, ಈ ಎಡಗೈ ಬ್ಯಾಟ್ಸ್ಮನ್ಗೆ ಒಂದೂ ಶತಕ ಗಳಿಸಲು ಸಾಧ್ಯವಾಗಿರಲಿಲ್ಲ. ಆದರೆ, ಲಂಕಾ ವಿರುದ್ಧದ ಈ ಪಂದ್ಯದಲ್ಲಿ 111 ಎಸೆತಗಳಲ್ಲಿ ಚೊಚ್ಚಲ ಶತಕ ಗಳಿಸಿ ಸಂಭ್ರಮಿಸಿದರು. ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 74 ರನ್ ಗಳಿಸಿದ್ದರು. ಇದು ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು.
ಅಷ್ಟೇ ಅಲ್ಲ ತವರು ನೆಲದಲ್ಲಿ ದಾಖಲಾದ ಮೂರನೇ ವೈಯಕ್ತಿಕ ಗರಿಷ್ಠ ಮೊತ್ತವೂ ಇದಾಯಿತು. 2001ರಲ್ಲಿ ಮಾರ್ಕ್ ವಾ ವೆಸ್ಟ್ ಇಂಡೀಸ್ ವಿರುದ್ಧ ಮೆಲ್ಬರ್ನ್ನಲ್ಲಿ ನಡೆದ ಪಂದ್ಯದಲ್ಲಿ 173 ರನ್ ಗಳಿಸಿದ್ದರು. 2004ರಲ್ಲಿ ಜಿಂಬಾಬ್ವೆ ವಿರುದ್ಧ ಹೋಬರ್ಟ್ನಲ್ಲಿ ಆ್ಯಡಂ ಗಿಲ್ಕ್ರಿಸ್ಟ್ 172 ರನ್ ಗಳಿಸಿದ್ದರು. ಇದಾದ ನಂತರ ಈ ಪಂದ್ಯದಲ್ಲಿ ವಾರ್ನರ್ 163 ರನ್ ಗಳಿಸಿದರು.

ಈ ಆರಂಭಿಕ ಬ್ಯಾಟ್ಸ್ಮನ್ ಜೊತೆಗೂಡಿದ ಮ್ಯಾಥೂ ವೇಡ್ (64, 72 ಎಸೆತ, 4ಬೌಂ, 1ಸಿಕ್ಸರ್) ಮೊದಲ ವಿಕೆಟ್ಗೆ 136 ರನ್ ಕಲೆ ಹಾಕಿ ಬುನಾದಿಯನ್ನು ಗಟ್ಟಿ ಮಾಡಿದರು. ನಂತರ ಬಂದ ಬ್ಯಾಟ್ಸ್ಮನ್ಗಳು ಹೆಚ್ಚು ರನ್ ಗಳಿಸದಿದ್ದರೂ, ವಾರ್ನರ್ಗೆ ಉತ್ತಮ ಬೆಂಬಲ ನೀಡಿದರು.

ತ್ರಿಕೋನ ಏಕದಿನ ಸರಣಿಯ ಹಿಂದಿನ ಎಂಟು ಪಂದ್ಯಗಳಲ್ಲಿ ವಾರ್ನರ್ ಗಳಿಸಿದ್ದು ಕೇವಲ 195. ಆದರೆ, ಒಂದೇ ಪಂದ್ಯದಲ್ಲಿ 150ರ ಗಡಿ ದಾಟಿ ಲಂಕಾ ಬೌಲರ್ಗಳ ಬೆವರಿಳಿಸಿದರು.

ಸ್ಕೋರ್ ವಿವರ :

ಆಸ್ಟ್ರೇಲಿಯ 50 ಓವರ್ಗಳಲ್ಲಿ 6 ವಿಕೆಟ್ಗೆ 321
ಡೇವಿಡ್ ವಾರ್ನರ್ ಬಿ ಧಮ್ಮಿಕಾ ಪ್ರಸಾದ್ 163
ಮ್ಯಾಥೂ ವೇಡ್ ಸಿ ರಂಗನಾ ಹೆರತ್ ಬಿ ನುವಾನ್ ಕುಲಶೇಖರ 64
ಶೇನ್ ವ್ಯಾಟ್ಸನ್ ಸಿ ಲಹಿರು ತಿರಿಮಾನೆ ಬಿ ಮಹಾರೂಫ್ 21
ಡೇನಿಯನ್ ಕ್ರಿಸ್ಟಿಯನ್ ಸಿ ಸಂಗಕ್ಕಾರ ಬಿ ಧಮ್ಮಿಕಾ ಪ್ರಸಾದ್ 10
ಡೇವಿಡ್ ಹಸ್ಸಿ ಸಿ ಹಾಗೂ ಬಿ ರಂಗನಾ ಹೇರತ್ 01
ಮೈಕಲ್ ಕ್ಲಾರ್ಕ್ ಸಿ ಮಾಹೇಲ ಜಯವರ್ಧನೆ ಬಿ ಮಾಲಿಂಗ 37
ಮೈಕ್ ಹಸ್ಸಿ ಔಟಾಗದೇ 19
ಇತರೆ: ಲೆಗ್ ಬೈ-1, ವೈಡ್-5 06
ವಿಕೆಟ್ ಪತನ: 1-136 (ವೇಡ್; 23.6), 2-186 (ವ್ಯಾಟ್ಸನ್; 34.2), 3-223 (ಕ್ರಿಸ್ಟಿಯನ್; 38.4), 4-224 (ಡೇವಿಡ್ ಹಸ್ಸಿ; 39.1), 5-288 (ಕ್ಲಾರ್ಕ್; 46.3), 6-321 (ವಾರ್ನರ್; 49.6).
ಬೌಲಿಂಗ್: ಲಸಿತ್ ಮಾಲಿಂಗ 8-0-74-1, ನುವಾನ್ ಕುಲಶೇಖರ 10-0-60-1, ಫರ್ವೀಜ್ ಮಹಾರೂಫ್ 9-0-64-1, ತಿಲಕರತ್ನೆ ದಿಲ್ಯಾನ್ 9-0-35-0, ಧಮ್ಮಿಕಾ ಪ್ರಸಾದ್ 7-0-51-2, ರಂಗನಾ ಹೇರತ್ 7-0-36-1.
ಶ್ರೀಲಂಕಾ 49.2 ಓವರ್ಗಳಲ್ಲಿ 306
ಮಾಹೇಲ ಜಯವರ್ಧನೆ ಸಿ ಮ್ಯಾಥೂ ವೇಡ್ ಬಿ ಬ್ರೆಟ್ ಲೀ 14
ತಿಲಕರತ್ನೆ ದಿಲ್ಯಾನ್ ಬಿ ಬ್ರೆಟ್ ಲೀ 27
ಕುಮಾರ ಸಂಗಕ್ಕಾರ ಸಿ ಶೇನ್ ವ್ಯಾಟ್ಸನ್ ಬಿ ಬ್ರೆಟ್ ಲೀ 42
ದಿನೇಶ್ ಚಂಡಿಮಾಲ್ ಸಿ ಪ್ಯಾಟಿನ್ಸನ್ ಬಿ ಡೇವಿಡ್ ಹಸ್ಸಿ 14
ಲಹಿರು ತಿರಿಮಾನೆ ಸಿ ಮ್ಯಾಥೂ ವೇಡ್ ಬಿ ಬಿ ಡೇವಿಡ್ ಹಸ್ಸಿ 14
ಉಪುಲ್ ತರಂಗ ಸಿ ಡೇವಿಡ್ ಹಸ್ಸಿ ಬಿ ಬಿ ಶೇನ್ ವ್ಯಾಟ್ಸನ್ 60
ಫರ್ವೀಜ್ ಮಹಾರೂಫ್ ಸಿ ಕ್ರಿಸ್ಟಿಯನ್ ಬಿ ಡೇವಿಡ್ ಹಸ್ಸಿ 08
ನುವಾನ್ ಕುಲಶೇಖರ ಸಿ ಡೋಹರ್ತಿ ಬಿ ಡೇವಿಡ್ ಹಸ್ಸಿ 73
ಧಮ್ಮಿಕಾ ಪ್ರಸಾದ್ ಔಟಾಗದೇ 31
ರಂಗನಾ ಹೇರತ್ ಸಿ ಡೋಹರ್ತಿ ಬಿ ಶೇನ್ ವ್ಯಾಟ್ಸನ್ 05
ಲಸಿತ್ ಮಾಲಿಂಗ ಸಿ ಮೈಕ್ ಹಸ್ಸಿ ಬಿ ಶೇನ್ ವ್ಯಾಟ್ಸನ್ 01
ಇತರೆ: ಬೈ-1, ಲೆಗ್ ಬೈ-3, ವೈಡ್-11, ನೋ ಬಾಲ್-2 17
ವಿಕೆಟ್ ಪತನ: 1-39 (ಜಯವರ್ಧನೆ; 4.4), 2-52 (ದಿಲ್ಯಾನ್; 6.6), 3-93 (ಚಂಡಿಮಾಲ್; 16.1), 4-115 (ಸಂಗಕ್ಕಾರ; 21.3), 5-125 (ತಿರುಮಾನೆ; 26.1), 6-144 (ಮಹಾರೂಫ್; 30.1), 7-248 (ಕುಲಶೇಖರ; 41.4), 8-285 (ತರಂಗ; 45.5), 9-301 (ಹೇರತ್; 47.4), 10-306 (ಮಾಲಿಂಗ; 49.2).
ಬೌಲಿಂಗ್ ವಿವರ: ಬ್ರೆಟ್ ಲೀ 9-1-59-3, ಬೆನ್ ಹಿಲ್ಫೆನ್ಹಾಸ್ 4-0-46-0, ಜೇಮ್ಸ ಪ್ಯಾಟಿನ್ಸನ್ 5-0-49-0, ಶೇನ್ ವ್ಯಾಟ್ಸನ್ 9.2-0-33-3, ಕ್ಸೇವಿಯರ್ ಡೋಹರ್ತಿ 10-0-39-0, ಡೇವಿಡ್ ಹಸ್ಸಿ 8-0-43-4, ಡೇನಿಯಲ್ ಕ್ರಿಸ್ಟಿಯನ್ 4-0-33-0.
ಫಲಿತಾಂಶ:ಆಸ್ಟ್ರೇಲಿಯಾಕ್ಕೆ 15 ರನ್ ಜಯ. ಪಂದ್ಯ ಶ್ರೇಷ್ಠ: ಡೇವಿಡ್ ವಾರ್ನರ್. ಎರಡನೇ ಫೈನಲ್ ಪಂದ್ಯ: ಮಂಗಳವಾರ (ಮಾ. 6), ಅಡಿಲೇಡ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.