ಬುಧವಾರ, ಮಾರ್ಚ್ 29, 2023
32 °C

ವಾಲಿಬಾಲ್: ಕರ್ನಾಟಕ ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಲಿಬಾಲ್: ಕರ್ನಾಟಕ ಚಾಂಪಿಯನ್

ಬೆಂಗಳೂರು: ಪ್ರಭಾವಿ ಸ್ಮ್ಯಾಷ್ ಹಾಗೂ ಬ್ಲಾಕಿಂಗ್‌ನಿಂದ ಎದುರಾಳಿ ಪಡೆಗೆ ಸವಾಲಾಗಿ ನಿಂತ ಆತಿಥೇಯ ಕರ್ನಾಟಕ ತಂಡದವರು 26ನೇ ಅಖಿಲ ಭಾರತ ಪೋಸ್ಟಲ್ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ತಮಿಳುನಾಡಿಗೆ ಆಘಾತ ನೀಡಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಅಂತಿಮ ಹಣಾಹಣಿಯಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣಿಸಿಕೊಂಡಿದ್ದ ತಮಿಳು ನಾಡು ವಿರುದ್ಧ ಕರ್ನಾಟಕದವರು ಅಚ್ಚರಿಯ ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾದರು.ಮೇಲು ನೋಟಕ್ಕೆ ಪ್ರಬಲ ಎನಿಸಿದರೂ ತಮಿಳುನಾಡು 0-3 ಸೆಟ್‌ಗಳ ಅಂತರದಿಂದ ಕರ್ನಾಟಕಕ್ಕೆ ಶರಣಾಯಿತು. ನಿಕಟ ಪೈಪೋಟಿಯ ನಡುವೆಯೂ ಪಂದ್ಯದ ಮೇಲೆ ಹಿಡಿತ ಬಿಗಿಗೊಳಿಸಿದ ಆತಿಥೇಯರು 25-22, 25-12, 25-23ರಲ್ಲಿ ವಿಜಯ ಸಾಧಿಸಿದರು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಆಂಧ್ರ ಪ್ರದೇಶ ತಂಡವು 3-2 ಸೆಟ್‌ಗಳ ಅಂತರದಿಂದ ಗುಜರಾತ್ ವಿರುದ್ಧ ಗೆಲುವು ಪಡೆಯಿತು. ಅಂಗಳದಲ್ಲಿ ಹೊಂದಾಣಿಕೆ ತೋರಿದ ಆಂಧ್ರ ಪ್ರದೇಶದವರು 25-23, 17-25, 25-21, 21-25, 15-12ರಲ್ಲಿ ಗೆದ್ದರು. ಅಂತರರಾಷ್ಟ್ರೀಯ ವಾಲಿಬಾಲ್ ಆಟಗಾರ ಶ್ರೀಶೇಖರ್ ಹಾಗೂ ಅಥ್ಲೀಟ್ ಪ್ರಮೀಳಾ ಅಯ್ಯಪ್ಪ ಅವರು ವಿಜೇತ ಕ್ರೀಡಾಪಟುಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.