ಶನಿವಾರ, ಮೇ 15, 2021
24 °C

ವಾಲಿಬಾಲ್: ಕೆ.ಆರ್.ಪೇಟೆ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಸೋಮವಾರದಿಂದ ಎರಡು ದಿನಗಳ ಕಾಲ ನಡೆದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯ ಹಿರಿಯ ಬಾಲಕರ ವಿಭಾಗದಲ್ಲಿ ಕೆ.ಆರ್.ಪೇಟೆ ಉತ್ತರ ವಲಯ ಹಾಗೂ ಬಾಲಕಿಯರ ವಿಭಾಗದಲ್ಲಿ ಮಂಡ್ಯ ಉತ್ತರ ವಲಯ ಪ್ರಥಮ ಸ್ಥಾನ ಪಡೆದವು.ಬಾಲಕರ ವಿಭಾಗದಲ್ಲಿ ನಾಗಮಂಗಲಕ್ಕೆ ದ್ವಿತೀಯ ಹಾಗೂ ಬಾಲಕಿಯರ ವಿಭಾಗದಲ್ಲಿ ಮದ್ದೂರು ದಕ್ಷಿಣ ವಲಯ ದ್ವಿತೀಯ ಸ್ಥಾನ ಗಳಿಸಿದವು.14 ವಯೋಮಾನದ ಪಂದ್ಯಾ ವಳಿಯ ಬಾಲಕರ ವಿಭಾಗದಲ್ಲಿ ಪಾಂಡವಪುರ ಪ್ರಥಮ ಹಾಗೂ ಮಂಡ್ಯ ಉತ್ತರ ವಲಯ ದ್ವಿತೀಯ ಬಹುಮಾನ ಗಳಿಸಿದವು. ಬಾಲಕಿಯರ ಕಿರಿಯ ವಿಭಾಗದಲ್ಲಿ ಮಂಡ್ಯ ಗ್ರಾಮಂತರ ಪ್ರಥಮ ಹಾಗೂ ಮಂಡ್ಯ ಉತ್ತರ ವಲಯ ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡವು.  ಪಂದ್ಯಾವಳಿಯಲ್ಲಿ ಜಿಲ್ಲೆಯ ವಿವಿಧ ಶಾಲೆಗಳ ಒಟ್ಟು 54 ತಂಡಗಳು ಪಾಲ್ಗೊಂಡಿದ್ದವು. ಮಂಗಳವಾರ ನಡೆದ ಸಮಾರೋಪ ಸಮಾರಂಭದಲ್ಲಿ ತಾ.ಪಂ. ಅಧ್ಯಕ್ಷ ಟಿ.ಶ್ರೀಧರ್ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ ನಂದೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಡಾ.ಭಾನುಪ್ರಕಾಶ್ ಶರ್ಮಾ, ದೈಹಿಕ ಶಿಕ್ಷಣ ಪರಿವೀಕ್ಷಕ ವೀರೇಶ್ ಲಿಂಬಿಕಾಯಿ, ಆರ್.ಪಿ.ಮಹೇಶ್, ಸಿ.ಜೆ.ಶ್ರೀನಿವಾಸ್, ಪಿ.ಎಂ.ಎಸ್. ಗೌಡ, ಗಣೇಶಕುಮಾರ್ ಇದ್ದರು.ಪ್ರತಿಭಾ ಕಾರಂಜಿ: ತಾಲ್ಲೂಕಿನ ಉರ್ದು ಶಾಲೆಗಳ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಸ್ಪರ್ಧೆ ತಾಲ್ಲೂಕಿನ ಬಾಬುರಾಯನಕೊಪ್ಪಲು ಉರ್ದು ಶಾಲೆಯಲ್ಲಿ ಮಂಗಳವಾರ ನಡೆಯಿತು. ಮುಸ್ಲಿಂ ವಸತಿ ಶಾಲೆ ಸೇರಿ 12 ಉರ್ದು ಶಾಲೆಗಳ ವಿದ್ಯಾರ್ಥಿ ಭಾಗವಹಿಸಿದ್ದರು. ಅರೇಬಿಕ್ ಹಾಗೂ ಉರ್ದು ಕಂಠಪಾಠ, ಪ್ರಬಂಧ, ಏಕಪಾತ್ರಾಭಿನಯ, ಚಿತ್ರಕಲಾ ಸ್ಪರ್ಧೆಗಳು ನಡೆದವು. ಬಿಇಓ ಕೆ.ಜಗದೀಶ್, ಉರ್ದು ಸಿಆರ್‌ಪಿ ಎನ್.ಉನ್ನೀಸಾ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.