ವಾಲೀಬಾಲ್: ಜಿಲ್ಲೆಗೆ ಮೊದಲು

ಶುಕ್ರವಾರ, ಮೇ 24, 2019
29 °C

ವಾಲೀಬಾಲ್: ಜಿಲ್ಲೆಗೆ ಮೊದಲು

Published:
Updated:

ಶಿಡ್ಲಘಟ್ಟ: ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಬಾಲಕರ ವಾಲಿಬಾಲ್ ತಂಡವು ಜಿಲ್ಲಾಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದೆ.ಶಿಡ್ಲಘಟ್ಟ ಸರ್ಕಾರಿ ಪದವಿಪೂರ್ವ ಕಾಲೇಜು ಆಟದ ಮೈದಾನದಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ತಂಡವು ಎದುರಾಳಿ ಪಟ್ಟಣದ ಪ್ಯಾರೇಗಾನ್ ಹಿರಿಯ ಪ್ರಾಥಮಿಕ ಶಾಲೆಯ ತಂಡವನ್ನು ಮಣಿಸಿತು.ಈ ಮೂಲಕ ಗ್ರಾಮೀಣ ಭಾಗದ ತಂಡವೊಂದು ಜಿಲ್ಲಾಮಟ್ಟಕ್ಕೆ 30 ವರ್ಷಗಳ ನಂತರ ಆಯ್ಕೆಯಾಗಿದ್ದಲ್ಲೇ ಜಿಲ್ಲಾ ಮಟ್ಟದಲ್ಲೂ ವಿಜೇತರಾಗಿದ್ದು ಹೊಸ ದಾಖಲೆ ನಿರ್ಮಿಸಿದೆ. ಇಮ್ರಾನ್, ಸಂತೋಷ್, ಪುನೀತ್, ಮೂರ್ತಿ, ವಾಜಿದ್, ಮುಬಾರಕ್, ಹರೀಶ್, ಮನೋಜ್, ಶೇಖರ್, ಅರುಣ, ಮುನಿರಾಜು ವಿಜೇತ ತಂಡದಲ್ಲಿದ್ದ ಆಟಗಾರರು. ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯಶಿಕ್ಷಕ ಗೋವಿಂದ ಚವಾಣ್, ದೈಹಿಕ ಶಿಕ್ಷಣ ಶಿಕ್ಷಕ ಎಂ.ಎನ್.ಮಂಜುನಾಥ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ವಿಜಯಕುಮಾರ್, ತಂಡದ ವ್ಯವಸ್ಥಾಪಕ ಬೈರಾರೆಡ್ಡಿ ಅಭಿನಂದಿಸಿದ್ದಾರೆ. ಪಟ್ಟಣದ ಪ್ಯಾರೇಗಾನ್ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry