ಸೋಮವಾರ, ಮಾರ್ಚ್ 8, 2021
19 °C

ವಾಹನ ನಿಲುಗಡೆಗೆ ಚಾಲಕರ ಪರದಾಟ!

ಪ್ರಜಾವಾಣಿ ವಾರ್ತೆ / ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ವಾಹನ ನಿಲುಗಡೆಗೆ ಚಾಲಕರ ಪರದಾಟ!

ಮಡಿಕೇರಿ: ಮಂಜಿನ ನಗರಿ ಮಡಿಕೇರಿಗೆ ಆಗಮಿಸುವ ಪ್ರವಾಸಿಗರ ವಾಹನಗಳ ಸಂಖ್ಯೆ ಪ್ರತಿವರ್ಷ ಹೆಚ್ಚುತ್ತಿದೆ. ಇದರ ಜೊತೆ ಸ್ಥಳೀಯವಾಗಿಯೂ ವಾಹನಗಳನ್ನು ಹೊಂದಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ನಗರದಲ್ಲಿ ವಾಹನಗಳ ನಿಲುಗಡೆ ಸ್ಥಳಾವಕಾಶ ಕೊರತೆ ತೀವ್ರವಾಗಿ ಕಾಡುತ್ತಿದೆ.ಸಮುದ್ರಮಟ್ಟದಿಂದ ಸುಮಾರು 5,000 ಮೀಟರ್ ಮೇಲೆ ಗುಡ್ಡದ ಮೇಲಿರುವ ಮಡಿಕೇರಿ ಅತ್ಯಂತ ಪುಟ್ಟನಗರವಾಗಿದೆ. ಇಲ್ಲಿ ಸ್ಥಳಾವಕಾಶದ ಕೊರತೆಯೂ ಮುಖ್ಯವಾಗಿ ಕಾರಣವಾಗಿರುವುದರಿಂದ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳವಿಲ್ಲ. ಈ ಕಾರಣಕ್ಕಾಗಿ ವಾಹನಗಳನ್ನು ನಿಲುಗಡೆ ಮಾಡಲು ಚಾಲಕರು ಪರದಾಡುವ ಪರಿಸ್ಥಿತಿ ತಲೆದೋರಿದೆ.ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪ್ರಚಾರ ದೊರೆಯುತ್ತಿದೆ. ಈ ಕಾರಣಕ್ಕಾಗಿ ಹೊರಜಿಲ್ಲೆಯಿಂದ ಹಾಗೂ ಹೊರರಾಜ್ಯದಿಂದಲೂ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಜಿಲ್ಲೆಯ ಜನರಿಗೆ ಆದಾಯ ಬರುತ್ತಿರುವುದು ಒಂದೆಡೆಯಾದರೆ, ವಾಹನಗಳ ವಿಪರೀತ ಸಂಚಾರವು ವಾಹನಗಳ ದಟ್ಟಣೆಯನ್ನು ಹುಟ್ಟುಹಾಕಿದೆ.ವಾಹನಗಳ ಸರಾಗ ಸಂಚಾರಕ್ಕೆ ಹಾಗೂ ನಿಲುಗಡೆಗೆ ನಗರಸಭೆಯು ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಪ್ರವಾಸಿಗರ ಆಗಮನ ಇನ್ನಷ್ಟು ಹೆಚ್ಚಾಗಬಹುದು. ಇದು ಇಲ್ಲಿನ ಆದಾಯವನ್ನು ಹೆಚ್ಚಿಸಲು ಮತ್ತೊಂದು ಮೂಲವಾಗುತ್ತದೆ.ನಗರದ ಪ್ರಮುಖ ಸ್ಥಳಗಳಾದ ಜನರಲ್ ತಿಮ್ಮಯ್ಯ ವೃತ್ತ, ಖಾಸಗಿ ಬಸ್‌ನಿಲ್ದಾಣದ ವೃತ್ತ, ಮಹದೇವ ಪೇಟೆ, ಕಾಲೇಜು ರಸ್ತೆ, ಮುಂತಾದ ಸ್ಥಳಗಳಲ್ಲಿ ವಾಹನಗಳ ನಿಲುಗಡೆ ಸಮಸ್ಯೆ ತೀವ್ರವಾಗಿದೆ. ಇದರತ್ತ ನಗರಸಭೆ ಗಮನಹರಿಸಬೇಕು ಎಂದು ಚಾಲಕರು ಮನವಿ ಮಾಡುತ್ತಿದ್ದಾರೆ.ನಗರದೆಲ್ಲೆಡೆ ಚಿಕ್ಕರಸ್ತೆಗಳಿರುವ ಕಾರಣ, ವಾಹನವೊಂದು ರಸ್ತೆ ಬದಿ ನಿಂತುಕೊಂಡರೆ ಪಕ್ಕದಲ್ಲಿ ಮತ್ತೊಂದು ವಾಹನ ಚಲಿಸಲು ಹರಸಾಹಸ ಪಡಬೇಕು. ಈಗ ಎಲ್ಲೆಡೆ ರಸ್ತೆಗಳ ಅಭಿವೃದ್ಧಿ ಮಾಡಲಾಗುತ್ತಿದೆ, ಆದರೆ, ವಾಹನಗಳ ನಿಲುಗಡೆಯತ್ತ ಗಮನಹರಿಸಲಾಗುತ್ತಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.ಇತ್ತೀಚೆಗೆ ಕಾಲೇಜು ರಸ್ತೆಯನ್ನು ಕಾಂಕ್ರಿಟ್ ರಸ್ತೆಯನ್ನಾಗಿ ಮಾಡಲಾಗಿದೆ. ರಸ್ತೆಯ ಅರ್ಧದಷ್ಟು ಭಾಗದಲ್ಲಿ ಕಾರು, ಜೀಪುಗಳು ನಿಲುಗಡೆಯಾಗಿರುವುದರಿಂದ ವಾಹನಗಳ ಸಂಚಾರಕ್ಕೆ ಸಾಕಷ್ಟು ಅಡೆತಡೆಯುಂಟಾಗುತ್ತಿದೆ.ನಗರದಲ್ಲಿರುವ ಖಾಲಿ ಜಾಗದಲ್ಲಿ ಪ್ರತ್ಯೇಕವಾಗಿ ವಾಹನಗಳ ನಿಲುಗಡೆ ವ್ಯವಸ್ಥೆಯನ್ನು ನಿರ್ಮಿಸಲು ನಗರಸಭೆಯು ಗಮನಹರಿಸಬೇಕು ಎಂದು ಚಾಲಕರು ಮನವಿ ಮಾಡಿಕೊಳ್ಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.