ಮಡಿಕೇರಿ: ರಾಜ್ಯದ ಅತಿ ಪುಟ್ಟ ಜಿಲ್ಲೆಯಾದ ಕೊಡಗು ಜಿಲ್ಲೆಯಲ್ಲಿ ವಾಹನಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು, ಇದರೊಂದಿಗೆ ಸರಕಾರದ ಬೊಕ್ಕಸಕ್ಕೆ ಬರುವ ಆದಾಯವೂ ಗಣನೀಯವಾಗಿ ಹೆಚ್ಚಳಗೊಂಡಿದೆ. ಕಳೆದ 2010-11ನೇ ಸಾಲಿನಲ್ಲಿ ಜಿಲ್ಲೆಯ ಪ್ರಾದೇ ಶಿಕ ಸಾರಿಗೆ ಕಚೇರಿಗೆ ನೀಡಲಾಗಿದ್ದ ರಾಜಸ್ವ ಸಂಗ್ರಹ ಗುರಿ 17.50 ಕೋಟಿ ರೂಪಾಯಿಯನ್ನು ಮೀರಿ 20.50 ಕೋಟಿ ರೂಪಾಯಿ ರಾಜಸ್ವ ಸಂಗ್ರಹಿಸಿ ಸಾಧನೆ ಮಾಡಿದೆ.

ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿಗೆ ಪ್ರಸಕ್ತ 2011-12ನೇ ಸಾಲಿನಲ್ಲಿ 21 ಕೋಟಿ ರೂಪಾಯಿ ರಾಜಸ್ವ ಸಂಗ್ರಹ ಗುರಿ ನೀಡಲಾಗಿದೆ.

ಗುರಿಮೀರಿ ಸಾಧನೆ: ಇಲಾಖೆಗೆ 2009-10ನೇ ಸಾಲಿನಲ್ಲಿ 15.83 ಕೋಟಿ ರೂ.ರಾಜಸ್ವ ಸಂಗ್ರಹದ ಗುರಿ ನೀಡಲಾಗಿದ್ದು, ಈ ಪೈಕಿ 15.72ಕೋಟಿ ರೂಪಾಯಿ ಸಂಗ್ರಹಿಸುವ ುೂಲಕ ಶೇ.99ರಷ್ಟು ಸಾಧನೆ ಮಾಡಲಾಗಿದ್ದರೆ, ಕಳೆದ ಆರ್ಥಿಕ ವರ್ಷಕ್ಕೆ ನೀಡಲಾಗಿದ್ದ 17.50 ಕೋಟಿ ರೂಪಾಯಿ ಗುರಿಗೆ ಬದಲಾಗಿ 20.50 ಕೋಟಿ ರೂಪಾಯಿ ಸಂಗ್ರಹಿ ಸುವ ಮೂಲಕ ಶೇ 118ರಷ್ಟು ಗುರಿ ಮೀರಿದ ಸಾಧನೆ ಮಾಡಲಾಗಿದೆ.

ಕೇವಲ 5.50 ಲಕ್ಷ ಜನಸಂಖ್ಯೆ ಇರುವ ಕೊಡಗು ಜಿಲ್ಲೆಯಲ್ಲಿ ಕಳೆದ ಮಾರ್ಚ್ ಅಂತ್ಯಕ್ಕೆ ಒಟ್ಟು 89,130 ವಾಹನಗಳು ನೋಂದಣಿಯಾಗಿದ್ದು, ಕಳೆದ ವರ್ಷವೊಂದರಲ್ಲೇ 6243 ವಾಹನಗಳು ನೋಂದಣಿಗೊಂಡಿವೆ. ಇವುಗಳ ಪೈಕಿ ಕಾರು ಹಾಗೂ ಮೋಟಾರ್ ಸೈಕಲ್ಗಳ ಪ್ರಮಾಣವೇ ಅಧಿಕವಿದೆ.

ಜಿಲ್ಲೆಯಲ್ಲಿ 2009-10ನೇ ಸಾಲಿನಲ್ಲಿ ಸುಮಾರು 5436 ವಾಹನಗಳು ನೋಂದಣಿಯಾಗಿದ್ದು, ಈ ಪೈಕಿ 2486 ಮೋಟಾರ್ ಸೈಕಲ್, 1538 ಕಾರುಗಳು, 32 ಆಟೋರಿಕ್ಷಾ, 56 ಮೊಬೈಲ್ ಕ್ಯಾಬ್, 205 ಓಮ್ನಿ ಬಸ್, 36 ಮ್ಯಾಕ್ಸಿ ಕ್ಯಾಬ್, 7 ಬಸ್ಗಳು, 395 ಸರಕು ಸಾಗಾಣೆ ವಾಹನ ಹಾಗೂ 381 ಇತರ ವಾಹನಗಳು ಸೇರಿವೆ.

ಅದೇ ರೀತಿ 2010-11ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 2507 ಮೋಟಾರ್ ಸೈಕಲ್,1959 ಕಾರುಗಳು, 449 ಆಟೋ ರಿಕ್ಷಾ, 113 ಮೊಬೈಲ್ ಕ್ಯಾಬ್, 219 ಓಮ್ನಿ ಬಸ್, 34 ಮ್ಯಾಕ್ಸಿ ಕ್ಯಾಬ್, 4 ಬಸ್, 531 ಸರಕು ಸಾಗಾಣೆ ವಾಹನ ಹಾಗೂ 427 ಇತರ ವಾಹನಗಳು ಸೇರಿದಂತೆ ಒಟ್ಟು 6243 ವಾಹನಗಳು ನೋಂದಣಿಯಾಗಿವೆ.

ಅದರಂತೆ ಕಳೆದ ಮಾರ್ಚ್ ಅಂತ್ಯಕ್ಕೆ ಜಿಲ್ಲೆಯಲ್ಲಿ 38,955 ಮೋಟಾರ್ ಸೈಕಲ್, 20,164 ಕಾರುಗಳು, 5,387 ಆಟೋರಿಕ್ಷಾಗಳು, 627 ಮೊಬೈಲ್ ಕ್ಯಾಬ್ಗಳು, 3429 ಓಮ್ನಿ ಬಸ್ಗಳು, 362 ಮ್ಯಾಕ್ಸಿ ಕ್ಯಾಬ್ಗಳು, 213 ಬಸ್ಗಳು, 3658 ಸರಕು ಸಾಗಣೆ ವಾಹನಗಳು ಹಾಗೂ 16290 ಇತರ ವಾಹನಗಳು ನೋಂದಣಿಯಾದಂತಾಗಿದೆ.

ಸಿಬ್ಬಂದಿ ಕೊರತೆ: ಮಡಿಕೇರಿಯಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿಗೆ ಒಟ್ಟು 36 ವಿವಿಧ ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ 6 ಹುದ್ದೆಗಳು ಖಾಲಿ ಇವೆ. ಆದರೆ ಇಲಾಖೆಗೆ ಆದಾಯ ತರುವ ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳೇ ಖಾಲಿ ಇರುವುದು ವಿಪರ್ಯಾಸ.

ಇಲಾಖೆಗೆ ಒಟ್ಟು 4 ವಾಹನ ನಿರೀಕ್ಷಕರ ಹುದ್ದೆಗಳು ಮಂಜೂರಾಗಿದ್ದು, ಇದೀಗ ಕೇವಲ ಒಬ್ಬರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಲೈಸೆನ್ಸ್ ನೀಡಿಕೆ, ವಾಹನಗಳ ತಪಾಸಣೆ, ಅಪಘಾತ ಪ್ರಕರಣಗಳ ವೀಕ್ಷಣೆಗೆ ತೊಡಕುಂಟಾಗಿರುವುದು ಮಾತ್ರವಲ್ಲದೆ, ಇಲಾಖೆಗೆ ಬರುವ ಆದಾಯಕ್ಕೂ ಕತ್ತರಿ ಬೀಳುತ್ತಿದೆ.

ಸ್ಮಾರ್ಟ್ ಕಾರ್ಡ್: ಸಾರಿಗೆ ಇಲಾಖೆಯಲ್ಲಿ 2009ರ ನವೆಂಬರ್ ತಿಂಗಳಿನಿಂದ ಡ್ರೈವಿಂಗ್ ಲೈಸೆನ್ಸ್ ಮತ್ತು ಹೊಸ ವಾಹನಗಳ ನೋಂದಣಿ ಯನ್ನು ಸ್ಮಾರ್ಟ್ ಕಾರ್ಡ್ ಮೂಲಕ ನೀಡ ಲಾಗುತ್ತಿದ್ದು, ಕಳೆದ ಮಾರ್ಚ್ ಅಂತ್ಯಕ್ಕೆ 23,375 ಡ್ರೈವಿಂಗ್ ಲೈಸೆನ್ಸ್ ಮತ್ತು 5828 ಆರ್ಸಿಗಳಿಗೆ ಸಂಬಂಧಿಸಿದಂತೆ ಸ್ಮಾರ್ಟ್ಕಾರ್ಡ್ಗಳನ್ನು ವಿತರಿಸ ಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎಂ. ಹಬೀಬುಲ್ಲಾ ಖಾನ್ ಅವರು ತಿಳಿಸಿದ್ದಾರೆ.

ಕಳೆದ ಸಾಲಿನಲ್ಲಿ ಮೋಟಾರು ಕಾಯ್ದೆ ಉಲ್ಲಂಘ ನೆಯ 658 ಪ್ರಕರಣಗಳನ್ನು ದಾಖಲಿಸಿಕೊಳ್ಳ ಲಾಗಿದ್ದು, 199 ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದರೊಂದಿಗೆ 48.20 ಲಕ್ಷ ರೂಪಾಯಿಗಳ ದಂಡ ವಸೂಲು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಹೆಲ್ಪ್ ಡೆಸ್ಕ್: ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಹೆಲ್ಪ್ಡೆಸ್ಕ್ ಪ್ರಾರಂಭಿಸಲಾಗಿದ್ದು, ಇದರೊಂದಿಗೆ ಸಾರ್ವಜನಿಕ ಸಂಪರ್ಕಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಸಾರ್ವಜನಿಕರು ಕಚೇರಿಯಲ್ಲಿನ ಯಾವುದೇ ಕೆಲಸಗಳಿಗೆ ಈ ಹೆಲ್ಪ್ಡೆಸ್ಕ್ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿಯ ನೆರವನ್ನು ಪಡೆಯಬಹುದು. ಇದರೊಂದಿಗೆ ಇಲಾಖೆಗೆ ಸಂಬಂಧಿಸಿದ ಫಾರಂ ಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಕೆಲಸದ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಉಂಟಾ ದಲ್ಲಿ ಕಚೇರಿ ಮುಖ್ಯಸ್ಥರನ್ನು(ಆರ್ಟಿಓ) ನೇರವಾಗಿ ಸಂಪರ್ಕಿಸಿ ಅಹವಾಲು ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.