ಗುರುವಾರ , ಏಪ್ರಿಲ್ 22, 2021
28 °C

ವಿಂಡೀಸ್ ಮಂಡಳಿಗೆ ಗೇಲ್ ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇಂಟ್ ಲೂಸಿಯ (ಪಿಟಿಐ):  ಪಾಕಿಸ್ತಾನ ವಿರುದ್ಧ ತವರು ನೆಲದಲ್ಲಿ ನಡೆಯುವ ಕ್ರಿಕೆಟ್ ಸರಣಿಗೆ ತಂಡದಲ್ಲಿ ಸ್ಥಾನ ಲಭಿಸದ ಕಾರಣ ಐಪಿಎಲ್‌ನಲ್ಲಿ ಆಡಲು ಮುಂದಾಗಿದ್ದೇನೆ ಎಂದು ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಹೇಳಿದ್ದಾರೆ.ಅದೇ ರೀತಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ (ಡಬ್ಲ್ಯುಐಸಿಬಿ) ತೋರುತ್ತಿರುವ ಮಲತಾಯಿ ಧೋರಣೆಯಿಂದ ನನಗೆ ಈ ನಿರ್ಧಾರ ಕೈಗೊಳ್ಳದೆ ಬೇರೆ ಮಾರ್ಗವಿರಲಿಲ್ಲ ಎಂದಿದ್ದಾರೆ. ಈ ಮೂಲಕ ಅವರು ಡಬ್ಲ್ಯುಐಸಿಬಿಗೆ ತಿರುಗೇಟು ನೀಡಿದ್ದಾರೆ.ಗೇಲ್ ಅವರು ಪಾಕ್ ವಿರುದ್ಧದ ಸರಣಿಯಿಂದ ಹಿಂದೆ ಸರಿದು ಐಪಿಎಲ್ ಸೇರಿದ್ದಕ್ಕೆ ವಿಂಡೀಸ್ ಮಂಡಳಿ ಅತೃಪ್ತಿ ವ್ಯಕ್ತಪಡಿಸಿತ್ತು. ಈ ಆಕ್ರಮಣಕಾರಿ ಬ್ಯಾಟ್ಸ್‌ಮನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಲಿದ್ದಾರೆ.‘ಅನಿವಾರ್ಯವಾಗಿ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ಡಬ್ಲ್ಯುಐಸಿಬಿ ನನ್ನನ್ನು ಒಳಗೊಂಡಂತೆ ಕೆಲವು ಆಟಗಾರರನ್ನು ಕಡೆಗಣಿಸುತ್ತಿದೆ’ ಎಂದು ಗೇಲ್ ಮಂಡಳಿ ವಿರುದ್ಧ ತಮ್ಮ ಅತೃಪ್ತಿ ತೋಡಿಕೊಂಡರು.

‘ವಿಶ್ವಕಪ್ ಟೂರ್ನಿಯ ವೇಳೆ ಗಾಯಗೊಂಡಿದ್ದ ನಾನು ಚಿಕಿತ್ಸೆಗಾಗಿ ಇಂಗ್ಲೆಂಡ್‌ಗೆ ತೆರಳಿದ್ದೆ. ಆದರೆ  ಆ ವೆಚ್ಚವನ್ನು ನಾನೇ ಭರಿಸಿದ್ದೆ. ಮಂಡಳಿ ಯಾವುದೆ ನೆರವು ನೀಡಿಲ್ಲ’ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.