ಶನಿವಾರ, ಜೂಲೈ 11, 2020
27 °C

ವಿಕಿರಣ ಅಮೆರಿಕ ತಲುಪುವ ಸಾಧ್ಯತೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಕಿರಣ ಅಮೆರಿಕ ತಲುಪುವ ಸಾಧ್ಯತೆ ಇಲ್ಲವಾಷಿಂಗ್ಟನ್ (ಪಿಟಿಐ): ಜಪಾನ್‌ನಲ್ಲಿ ಹಾನಿಗೊಳಗಾಗಿರುವ ಅಣುಸ್ಥಾವರ ಘಟಕಗಳಿಂದ ಹೊರ ಸೂಸುವ ವಿಕಿರಣಯುಕ್ತ ಅಂಶಗಳು ಅಮೆರಿಕವನ್ನು ತಲುಪಬಹುದು ಎಂಬ ವರದಿಗಳನ್ನು ಅಮೆರಿಕದ ಅಣ್ವಸ್ತ್ರ ಅಧಿಕಾರಿ ತಳ್ಳಿ ಹಾಕಿದ್ದಾರೆ.ಹವಾಯ್ ಸೇರಿದಂತೆ ಅಮೆರಿಕದ  ಯಾವುದೇ ಪ್ರದೇಶಕ್ಕೂ ವಿಕಿರಣ ತಲುಪುವ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ.

ಅಮೆರಿಕ ಅಥವಾ ಹವಾಯ್ ಅಥವಾ ಇತರ ಯಾವುದೇ ಭಾಗಕ್ಕೆ ಅಪಾಯ ಇಲ್ಲ ಎಂದು ಅಣ್ವಸ್ತ್ರ ನಿಯಂತ್ರಣ ಆಯೋಗದ ಅಧ್ಯಕ್ಷ ಗ್ರೆಗೊರಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ವಿಕಿರಣ ಐಸೋಟೋಪ್‌ಗಳು ಉತ್ತರ ಅಮೆರಿಕ ಕಡೆಗೆ ಪಸರಿಸುತ್ತಿದ್ದು ಶೀಘ್ರವೇ ಕ್ಯಾಲಿಫೋರ್ನಿಯಾ ತಲುಪಲಿವೆ ಎಂದು ‘ಲಾಸ್ ಏಂಜಲೀಸ್ ಟೈಮ್ಸ್’ ವರದಿ ಮಾಡಿತ್ತು. ರಾಷ್ಟ್ರಕ್ಕೆ ವಿಕಿರಣದ ಯಾವುದೇ ಅಪಾಯ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಆಶ್ವಾಸನೆ ನೀಡಿದ್ದರು.‘ವಿಕಿರಣದ ಅಪಾಯಕಾರಿ ಅಂಶಗಳು ಅಮೆರಿಕ ಅಥವಾ ಅದರ ಪಶ್ಚಿಮ ಕರಾವಳಿ, ಹವಾಯ್, ಅಲಾಸ್ಕಾ ಅಥವಾ ಪೆಸಿಫಿಕ್‌ನಲ್ಲಿನ ಅಮೆರಿಕದ ಪ್ರಾಂತ್ಯಗಳಿಗೆ ತಲುಪುವುದಿಲ್ಲ ಎಂಬ ನಿರೀಕ್ಷೆ ನಮ್ಮದು. ಇದು ನಮ್ಮ ಅಣ್ವಸ್ತ್ರ ನಿಯಂತ್ರಣ ಆಯೋಗ (ಎನ್‌ಆರ್‌ಸಿ) ಮತ್ತು ಇತರ ತಜ್ಞರ ತೀರ್ಮಾನ’ ಎಂದು ಒಬಾಮ ಅವರು ವಾಷಿಂಗ್ಟನ್‌ನಲ್ಲಿ ಶುಕ್ರವಾರ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.