ಗುರುವಾರ , ಜೂನ್ 17, 2021
29 °C
ಸರ್ಕಾರಿ ಜಾಹೀರಾತು ವಿರುದ್ಧ ಅರ್ಜಿ

ವಿಚಾರಣೆಗೆ ಸುಪ್ರೀಂ ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ತಮ್ಮ ಸಾಧನೆಗಳನ್ನು ‘ಬಿಂಬಿಸಿ’ಕೊಳ್ಳಲು ಸರ್ಕಾರ ನೀಡುವ ಜಾಹೀರಾತುಗಳ ನಿಯಂತ್ರಣಕ್ಕೆ ಸಲಹಾಸೂತ್ರಗಳನ್ನು ರಚಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌  ಸೋಮವಾರ ನಿರಾಕರಿಸಿದೆ.

‘ಶೀಘ್ರದಲ್ಲೇ ಚುನಾವಣೆ ಇದೆ. ಇಂತಹ ಅರ್ಜಿ ವಿಚಾರಣೆಗೆ ಇದು ಸೂಕ್ತ ಸಮಯವಲ್ಲ’ ಎಂದು ಅಭಿಪ್ರಾಯ ಪಟ್ಟ ಸುಪ್ರೀಂ ಕೋರ್ಟ್‌ ನ ಮುಖ್ಯನ್ಯಾಯಮೂರ್ತಿ ಪಿ. ಸದಾಶಿವಂ ಅವರಿದ್ದ ಪೀಠ, ‘ಸಾರ್ವತ್ರಿಕ ಚುನಾವಣೆಯ ನಂತರ ಮತ್ತೆ ನ್ಯಾಯಲಯದ ಮೊರೆ ಹೋಗಬಹುದು’ ಎಂದು ಅರ್ಜಿದಾರನಿಗೆ ಹೇಳಿತು.

ಆಡಳಿತಾರೂಢ ಪಕ್ಷ ಹಾಗೂ ಅದರ ನಾಯಕರ ಸಾಧನೆಗಳನ್ನು ‘ಬಿಂಬಿಸಲು’ ಸರ್ಕಾರಗಳು ಜಾಹೀರಾತಿಗಾಗಿ ಸಾರ್ವಜನಿಕ ಬೊಕ್ಕಸದ ಕೋಟಿ–ಕೋಟಿ ಹಣ ವ್ಯಯಿಸುತ್ತಿವೆ  ಎಂದು ಆರೋಪಿಸಿ ಕೊಚೌಸ್ಪೆಹ್ ಚಿಟ್ಟಿಲಪಿಲ್ಲಿ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

‘ಅಂತಿಮ ಗಳಿಗೆ’ಯಲ್ಲಿ ನ್ಯಾಯಾಲಯದ ಮೊರೆ ಹೋಗಲು ಕಾರಣವೇನು ಎಂದು ಅರ್ಜಿದಾರನಿಗೆ ಪ್ರಶ್ನಿಸಿದ ಪೀಠ, ‘ನೀವು ಹೇಳುವುದು ಸರಿ. ಆದರೆ ವಿಚಾರಣೆಗೆ ಇದು ಸೂಕ್ತ ಸಮಯವಲ್ಲ. ಈ ಹಂತದಲ್ಲಿ ನಿಮ್ಮ ಅರ್ಜಿಯನ್ನು ವಿಚಾರಣೆ ನಡೆಸಲಾಗದು’ ಎಂದೂ ಪೀಠ ಸ್ಪಷ್ಟಪಡಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.