ಹಿರಿಯೂರು: ತನ್ನ ಆಲೋಚನೆಗಳ ಮೂಲಕ ಬೇರೆ ಜೀವಿಗಳಿಗಿಂತ ಭಿನ್ನವಾಗಿರುವ ಮನುಷ್ಯ ಜಗತ್ತನ್ನು ಶಾಶ್ವತವಾಗಿ ಆಳುತ್ತಾನೆ ಎನ್ನುವುದಕ್ಕಿಂತ, ಅವನಲ್ಲಿರುವ ಮಾನವ ಪರ ಆಲೋಚನೆಗಳು ಜಗತ್ತನ್ನು ಆಳುತ್ತವೆ ಎಂದು ತಹಶೀಲ್ದಾರ್ ಎನ್. ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಪೇಟೆ ಬಸವೇಶ್ವರಸ್ವಾಮಿ ದೇಗುಲದಲ್ಲಿ ಮಂಗಳವಾರ ವೀರಶೈವ ಸಮಾಜ ಟ್ರಸ್ಟ್, ವೀರಶೈವ ಯುವಕ ಸಂಘ, ವೀರಶೈವ ಮಹಿಳಾ ಸಂಘ, ರಾಷ್ಟ್ರೀಯ ಬಸವದಳ ಮತ್ತು ತಾಲ್ಲೂಕು ವೀರಶೈವ ನೌಕರರ ಸಂಘದ ಆಶ್ರಯದಲ್ಲಿ ನಡೆದ ಬಸವ ಜಯಂತಿ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.

ಅಂಬೇಡ್ಕರ್, ವಿವೇಕಾನಂದ, ಪರಮಹಂಸ ಮೊದಲಾದವರ ಮೇಲೆ ಬಸವಣ್ಣನ ಚಿಂತನೆಗಳ ಪರಿಣಾಮ ಆಗಿದೆ. ಬಸವಣ್ಣನ ಚಿಂತನೆಗಳಿಗೆ ನಮ್ಮ ಸಂವಿಧಾನದಲ್ಲಿ ಮೂರ್ತರೂಪ ಸಿಕ್ಕಿದೆ. ಜಾತಿಯ ಅಸಮಾನತೆ, ಸ್ತ್ರೀ-ಪುರುಷ ಸಮಾನತೆ, ಮೇಲು-ಕೀಳು ವ್ಯತ್ಯಾಸಗಳ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ, ಅವನ್ನು ತೊಲಗಿಸಲು ದೊಡ್ಡ ಕ್ರಾಂತಿ ಮಾಡಿದ ವ್ಯಕ್ತಿ ಬಸವಣ್ಣ. ಬಸವಣ್ಣನಲ್ಲಿದ್ದ ಸಾಮಾಜಿಕ ಕಳಕಳಿ ಬುದ್ಧನಲ್ಲಿರಲಿಲ್ಲ.

ಬಸವಣ್ಣನಿಗಿಂತ ಮುಂಚೆ ಅಂತರ್ಜಾತಿ ವಿವಾಹಕ್ಕೆ ಮುಂದಾಗಿದ್ದ ಉದಾಹರಣೆ ಕಂಡುಬಂದಿಲ್ಲ. ಬಸವಣ್ಣನ ಅವರನ್ನು ಒಂದು ಜಾತಿಗೆ, ಪ್ರಾಂತ್ಯಕ್ಕೆ ಸೀಮಿತಗೊಳಿಸುವುದು ಸಲ್ಲದು ಎಂದರು.ಉದ್ಯಮಿ ಸುರೇಶ್ಬಾಬು ಮಾತನಾಡಿ, ಬಸವ ಜಯಂತಿ ಆಚರಣೆ ನೂರು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಹಿರಿಯೂರಿನಲ್ಲಿ ಎಲ್ಲಾ ಪ್ರಮುಖರನ್ನು ಸೇರಿಸಿ ಅದ್ದೂರಿ ಸಮಾರಂಭ ನಡೆಸಲಾಗುವುದು ಎಂದರು.

ಮಲ್ಲೂರಹಳ್ಳಿ ಮಠದ ತಿಪ್ಪೇರುದ್ರ ಸ್ವಾಮೀಜಿ ಮಾತನಾಡಿ, ಶರಣರ ವಿಚಾರಗಳನ್ನು ಯಥಾವತ್ ಅಳವಡಿಸಿಕೊಳ್ಳುವುದು ಇಂದಿನ ಪೀಳಿಗೆಯವರಿಗೆ ಕಷ್ಟ. ಕಳವು, ಕೊಲೆ, ಹುಸಿ ಇವುಗಳನ್ನು ಬಿಡುವುದು ಕಷ್ಟವಲ್ಲ. ಜಡ್ಡುಗಟ್ಟಿದ ವ್ಯವಸ್ಥೆಗೆ ಹೊಸಚೇತನ ತುಂಬಿದ ಬಸವಣ್ಣ ಇಂದಿಗೂ, ಎಂದಿಗೂ ಪ್ರಸ್ತುತ. ಒಳಪಂಗಡದ ಹೆಸರಿನಲ್ಲಿ ವೀರಶೈವ ಸಮಾಜ ಒಡೆಯುವುದು ಬೇಡ. ಬಸವಣ್ಣನ ಚಿಂತನೆಗಳ ಅಡಿಯಲ್ಲಿ ಎಲ್ಲರೂ ಬೆಳೆಯೋಣ ಎಂದು ಕರೆ ನೀಡಿದರು.

ಕುಪ್ಪೂರು ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಎಂ.ಎನ್. ಸೌಭಾಗ್ಯವತಿ ದೇವರು ಅಧ್ಯಕ್ಷತೆ ವಹಿಸಿದ್ದರು. ಎನ್.ಬಿ. ವಾಗೀಶ್, ಎಚ್.ಟಿ. ಚಂದ್ರಶೇಖರ್, ಕೆ. ಗಿರಿಜಮ್ಮ, ಡಾ.ಸುಜಾತಾ, ಜ್ಯೋತಿಲಕ್ಷ್ಮೀ, ಭಾರತಿ, ಲಕ್ಷ್ಮೀದೇವಿ, ಸುರೇಂದ್ರಪ್ಪ, ಜಿ.ಆರ್. ರಮೇಶ್ ಹಾಜರಿದ್ದರು. ಕೆ.ಆರ್. ವೀರಭದ್ರಯ್ಯ ಸ್ವಾಗತಿಸಿದರು. ವೀರೇಶ್ ವಂದಿಸಿದರು. ಟಿ. ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.