ಶನಿವಾರ, ಜನವರಿ 18, 2020
25 °C

ವಿಛಿದ್ರಕಾರಿ ಶಕ್ತಿ ನಿಗ್ರಹಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಒದಗಿಸುವ ಆಶೋತ್ತರಗಳ ಸಂವಿಧಾನ ಹೊಂದಿರುವ ನೆಲದಲ್ಲಿ ವಿಛಿದ್ರಕಾರಕ ಶಕ್ತಿಗಳ ಅಟ್ಟಹಾಸಕ್ಕೆ ಕಡಿವಾಣ ಹಾಕಬೇಕಿದೆ ಎಂದು ಪ್ರಭಾರಿ ಉಪ ವಿಭಾಗಾಧಿಕಾರಿ ಟಿ. ಮಲ್ಲಪ್ಪ ಅಭಿಪ್ರಾಯಪಟ್ಟರು.

 

ಗುರುವಾರ ಸ್ಥಳೀಯ ತಾಲ್ಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ 63ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ತಹಶೀಲ್ದಾರ್ ಡಾ.ಸಿ. ವೆಂಕಟೇಶ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಅಧ್ಯಕ್ಷೆ ಗೀತಾಬಾಯಿ, ಡಿವೈಎಸ್‌ಪಿ ಎಚ್.ಎಸ್. ರಾಧಾಮಣಿ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಟಿ. ಪಾಂಡ್ಯಪ್ಪ, ಸಿಪಿಐ ಬಿ.ಎಸ್. ಬಸವರಾಜ್, ಪುರಸಭೆ ಮುಖ್ಯಾಧಿಕಾರಿ ಎಚ್.ಬಿ. ಜಟ್ಟಪ್ಪ ಉಪಸ್ಥಿತರಿದ್ದರು.ಹರಿಹರ ವರದಿ

`ಸಂವಿಧಾನವನ್ನು ಅನುಸರಿಸುವ ಪ್ರಜೆಗಳಿಂದ ಸಂವಿಧಾನದ ಗುಣಾವಗುಣಗಳು ವ್ಯಕ್ತವಾಗುತ್ತವೆ~ ಎಂದು ತಹಶೀಲ್ದಾರ್ ಜಿ. ನಜ್ಮಾ ಅಭಿಪ್ರಾಯಪಟ್ಟರು.

ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ 63ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅವರು ಗಣರಾಜ್ಯೋತ್ಸವದ ಸಂದೇಶ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಬಿ.ಪಿ. ಹರೀಶ್ ಮಾತನಾಡಿ,  ಯುವ ಪೀಳಿಗೆ ದೇಶ ಭಕ್ತಿ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಭದ್ರವಾಗುತ್ತಿದೆ. ಎಲ್ಲರೂ ಜಾತಿ ಹಾಗೂ ಪಕ್ಷ ಭೇದ-ಭಾವ ಮರೆತು ತಾಲ್ಲೂಕಿನ ಅಭಿವೃದ್ಧಿ ಕಡೆಗೆ ಹೆಜ್ಜೆ ಹಾಕೋಣ ಎಂದರು.

 

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಆನಂದ್, ದೇವೇಂದ್ರಪ್ಪ, ಎಚ್.ಎ. ಭಿಕ್ಷಾವರ್ತಿಮಠ, ಶೇಖರಗೌಡ ಪಾಟೀಲ್, ಸುರೇಶ ರಾಜೇನವರ, ಪರಮೇಶ್ವರಪ್ಪ, ಜಯಣ್ಣ ಅವರಿಗೆ ಗೌರವಿಸಲಾಯಿತು. ಗೃಹರಕ್ಷಕ ದಳದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ  ನಡೆಯಿತು.ನಗರಸಭೆ ಅಧ್ಯಕ್ಷೆ ರಾಧಾ ಸಿ.ಎನ್. ಹುಲಿಗೇಶ್, ತಾ.ಪಂ. ಅಧ್ಯಕ್ಷ ಬಿ.ಎಸ್. ಸೋಮಸುಂದರಪ್ಪ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಸವಿತಾ ರಾಜಪ್ಪ, ತಾಲ್ಲೂಕು ಎಪಿಎಂಸಿ ಅಧ್ಯಕ್ಷ ಜಿ. ಮಂಜುನಾಥ, ಸ್ವಾತಂತ್ರ್ಯ ಹೋರಾಟಗಾರ ಎನ್.ಎಂ. ಚಂದ್ರಶೇಖರಯ್ಯ, ತಾ.ಪಂ. ಇಒ  ಎಚ್.ಎನ್. ರಾಜ್, ಪೌರಾಯುಕ್ತ ಎಂ.ಕೆ. ನಲವಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಆರ್. ಬಸವರಾಜಪ್ಪ, ಸಿಪಿಐ ನಾಗೇಶ ಐತಾಳ್ ಹಾಗೂ ಇತರರು ಉಪಸ್ಥಿತರಿದ್ದರು.

ನಗರಸಭೆ: 63ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ನಗರಸಭೆ ಅಧ್ಯಕ್ಷೆ ರಾಧಾ ಸಿ.ಎನ್. ಹುಲಿಗೇಶ್, ನಗರಸಭೆ ಸದಸ್ಯರು, ಪೌರಾಯುಕ್ತ ಎಂ.ಕೆ. ನಲವಡಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.ತಾಲ್ಲೂಕು ಪೇಂಟರ್ ಕಾರ್ಮಿಕರ ಸಂಘ:  ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣಾ ಕಾರ್ಯಕ್ರಮ ನಡೆಯಿತು. ಎಸ್. ಬೀರಪ್ಪ, ಬಿ.ಎನ್. ಪೆದ್ದಣ್ಣ, ಆರ್. ಪರಶುರಾಮ, ಕೆ. ಸುದರ್ಶನ್, ಮಾರುತಿ ಆಚಾರ್ ಹಾಗೂ ಇತರರು ಭಾಗವಹಿಸಿದ್ದರು.

 

ನ್ಯಾಮತಿ ವರದಿ

ಗ್ರಾಮದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಗಣರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು. ಪ್ರಾಂಶುಪಾಲ ಕೆ. ದೇವೇಂದ್ರಪ್ಪ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಗ್ರಾ.ಪಂ. ಅಧ್ಯಕ್ಷೆ ಎಸ್.ಎಸ್. ರಾಜೇಶ್ವರಿ ಅಧ್ಯಕ್ಷತೆ ವಹಿಸಿದ್ದರು. ಪದವಿ ಕಾಲೇಜಿನ ಪ್ರಾಂಶುಪಾಲ ಎನ್.ಬಿ. ಸಿದ್ದಪ್ಪ, ಸಿಡಿಸಿ ಅಧ್ಯಕ್ಷ ಎಂ. ಕೃಷ್ಣಾಚಾರ್ ಉಪಸ್ಥಿತರಿದ್ದರು.

 

ಪದವಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಕೆ. ಭೋಗೇಶ್ವರಪ್ಪ ಅವರು ಗ್ರಾಮದ ಹಿರಿಯರಾದ ಮಾಜಿ ಪುರಸಭಾಧ್ಯಕ್ಷ ರೆಡ್ಡಿ ಮೇಲಗಿರಿಯಪ್ಪ ಮತ್ತು ನಿವೃತ್ತ ಶಿಕ್ಷಕ ಡಿ.ಎಂ. ನಂಜುಂಡಾರಾಧ್ಯ ಅವರನ್ನು ಗ್ರಾಮಸ್ಥರ ಪರವಾಗಿ ಸನ್ಮಾನಿಸಿದರು.

 

 

ಪ್ರತಿಕ್ರಿಯಿಸಿ (+)