ಬುಧವಾರ, ಜೂನ್ 16, 2021
22 °C

ವಿಜಯ್ ಹಜಾರೆ ಟೂರ್ನಿ: ಶುಕ್ಲಾ ಆಲ್‌ರೌಂಡ್ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯ್ ಹಜಾರೆ ಟೂರ್ನಿ: ಶುಕ್ಲಾ ಆಲ್‌ರೌಂಡ್ ಪ್ರದರ್ಶನ

ನವದೆಹಲಿ (ಪಿಟಿಐ): ಲಕ್ಷಿ ರತನ್ ಶುಕ್ಲಾ ಅವರ ಆಲ್‌ರೌಂಡ್ ಪ್ರದರ್ಶನದ ನೆರವಿನಿಂದ ಬಂಗಾಳ ತಂಡದವರು ಇಲ್ಲಿ ಕೊನೆಗೊಂಡ ವಿಜಯ್ ಹಜಾರೆ ಟ್ರೋಫಿ  ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆದರು.ಫಿರೋಜ್ ಷಾ ಕೊಟ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಸೌರವ್ ಗಂಗೂಲಿ ನೇತೃತ್ವದ ಬಂಗಾಳ ಆರು ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಮುಂಬೈ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು.ಮುಂಬೈ ನೀಡಿದ್ದ 249 ರನ್‌ಗಳ ಗುರಿ ಮುಟ್ಟಲು ಗಂಗೂಲಿ ಪಡೆ 46.1 ಓವರ್‌ಗಳನ್ನು ತಗೆದುಕೊಂಡು ನಾಲ್ಕು ವಿಕೆಟ್ ಕಳೆದುಕೊಂಡಿತು. ಇದಕ್ಕೆ ಶುಕ್ಲಾ ಅವರ ಅಜೇಯ ಶತಕ ಕಾರಣವಾಯಿತು. ಎದುರಾಳಿ ಬೌಲರ್‌ಗಳ ಬೆವರಿಳಿಸಿದ ಶುಕ್ಲಾ 12 ಬೌಂಡರಿ, 2 ಸಿಕ್ಸರ್ ಸೇರಿದಂತೆ 106 ರನ್ ಗಳಿಸಿ ಪ್ರಶಸ್ತಿ ಜಯಿಸಬೇಕೆನ್ನುವ ಬಂಗಾಳದ ಆಸೆಗೆ ಬಲ ತುಂಬಿದರು. ಇದಕ್ಕೆ ಗಂಗೂಲಿ (38, 53ಎಸೆತ, 4ಬೌಂಡರಿ) ಹಾಗೂ ಶ್ರೀವತ್ಸ ಗೋಸ್ವಾಮಿ (42, 73ಎಸೆತ, 4ಬೌಂ) ನೆರವಾದರು.ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಮುಂಬೈ 49.2 ಓವರ್‌ಗಳಲ್ಲಿ 248 ರನ್ ಗಳಿಸಿತ್ತು.10 ಓವರ್‌ಗೆ ವಿಕೆಟ್ ನಷ್ಟವಿಲ್ಲದೇ 76 ರನ್ ಗಳಿಸಿದ್ದ ಮುಂಬೈ ನಂತರ ಕುಸಿತ ಅನುಭವಿಸಿತು. ಈ ತಂಡದ ವಾಸೀಮ್ ಜಾಫರ್ (61) ಹಾಗೂ ಸೂರ್ಯಕುಮಾರ್ ಯಾದವ್ (50, 68ಎಸೆತ, 7ಬೌಂ) ಸಂಕಷ್ಟದಲ್ಲಿದ್ದ ತಂಡಕ್ಕೆ ನೆರವಾದರು. 

ಬೌಲಿಂಗ್‌ನಲ್ಲಿಯೂ ಮಿಂಚಿದ ಶುಕ್ಲಾ (38ಕ್ಕೆ4) ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು.ಸಂಕ್ಷಿಪ್ತ ಸ್ಕೋರು: ಮುಂಬೈ 49.2 ಓವರ್‌ಗಳಲ್ಲಿ 248 (ವಾಸೀಮ್ ಜಾಫರ್ 61, ಸೂರ್ಯ ಕುಮಾರ್ ಯಾದವ್ 50, ಲಕ್ಷಿ ರತನ್ ಶುಕ್ಲಾ 38ಕ್ಕೆ4). ಬಂಗಾಳ 46.1 ಓವರ್‌ಗಳಲ್ಲಿ 4 ವಿಕೆಟ್‌ಗೆ 252. (ಶುಕ್ಲಾ ಔಟಾಗದೇ 106, ಎ. ಮುಜಮದಾರ್ ಔಟಾಗದೇ 50). ಫಲಿತಾಂಶ: ಬಂಗಾಳಕ್ಕೆ ಆರು ವಿಕೆಟ್‌ಗಳ ಜಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.