ಶುಕ್ರವಾರ, ಮೇ 7, 2021
27 °C

ವಿಜೃಂಭಣೆಯಿಂದ ನಡೆದ ಕರಿಯಮ್ಮ ದೇವಿ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾವಗಲ್: ಪಟ್ಟಣದ ಗ್ರಾಮ ದೇವತೆ ಕರಿಯಮ್ಮದೇವಿ ರಥೋತ್ಸವವು ಸಹ ಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭ ಣೆಯಿಂದ ಶುಕ್ರವಾರ ನಡೆಯಿತು.ರಥೋತ್ಸವಕ್ಕೆ ಬಂದ ಭಕ್ತಾಧಿಗಳು ದೇವಿಯ ದರ್ಶನ ಪಡೆದರು. ಬೆಳಿಗ್ಗೆಯಿಂದಲೇ ದೇವಿಗೆ ಪೂಜೆ ಸಲ್ಲಿಸಲು ಜನಜಂಗುಳಿ ದೇವಾಲಯದ ಬಳಿ ಸೇರಿತ್ತು. ಭಕ್ತರು ದೇವಾಲಯದ ಸುತ್ತಲೂ ಸಣ್ಣ ಮಕ್ಕಳ ತಲೆಯ ಮೇಲೆ ಕಳಸ ಹೊರಿಸಿ ಪ್ರದಕ್ಷಿಣೆ ಮಾಡಿದರು. ನಂತರ ಸಿಡಿ ಆಡಿಸಲಾಯಿತು.ಸಂಪ್ರದಾಯದಂತೆ ರಥಕ್ಕೆ ಪೂಜೆ ಸಲ್ಲಿಸಿದ ನಂತರ ರಥದಲ್ಲಿ ಎಳೆಯಲಾ ಯಿತು. ಭಕ್ತರು ರಥದ ಚಕ್ರಗಳಿಗೆ ತೆಂಗಿನ ಕಾಯಿ ಒಡೆದರೆ ಇನ್ನೂ ಕೆಲವರು ರಥದ ಕಳಸಕ್ಕೆ ಬಾಳೆ ಹಣ್ಣು ದವನ ಎಸೆದು ತಮ್ಮ ತಮ್ಮ ಭಕ್ತಿ ಪ್ರದರ್ಶಿಸಿದರು.ಜಾತ್ರೆಯಲ್ಲಿ ಭಕ್ತರ ಮಹಾಪೂರವೇ ಹರಿದಿತ್ತು ಬಿಸಿಲಿನಲ್ಲಿ ಬಳಲಿದವರಿಗೆ ಮಜ್ಜಿಗೆ, ನೀರು, ಪಾನಕ, ಅನ್ನ ದಾಸೋಹ ವಿನಿಯೋಗ ನಡೆಯುತ್ತಿತ್ತು ವಿಶೇಷವಾಗಿತ್ತು. ದೇವರನ್ನು ಹೊತ್ತವರು ಮೊಳೆಗಳಿದ್ದ ಹಲಗೆಯ ಮೇಲೆ ನಡೆದರು.    

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.