ಮಂಗಳವಾರ, ಮೇ 18, 2021
31 °C

ವಿಟ್ಲ: ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಟ್ಲ: ನುಸ್ರತುಲ್ ಇಸ್ಲಾಂ ಯಂಗ್‌ಮೆನ್ಸ್ ಅಸೋಸಿಯೇಶನ್ ವತಿಯಿಂದ ಮರಕ್ಕಿಣಿ, ಅಡ್ಯನಡ್ಕ, ಅಡ್ಕಸ್ಥಳ ಮದರಸ ವ್ಯಾಪ್ತಿಯ 1ರಿಂದ ಪಿಯುಸಿವರೆಗಿನ 153 ಬಡ ವಿದ್ಯಾರ್ಥಿಗಳಿಗೆ ರೂ 50 ಸಾವಿರ ಮೌಲ್ಯದ ಪುಸ್ತಕಗಳನ್ನು ಇತ್ತೀಚೆಗೆ ವಿತರಿಸಲಾಯಿತು.ಅಬುಧಾಬಿಯಯಲ್ಲಿರುವ ಮಾದುಮೂಲೆ ಅಬ್ದುಲ್ಲಾ ಅವರು ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸುಮಾರು 40 ಸಾವಿರ ರೂಪಾಯಿ ಹಣವನ್ನು ನೀಡಿದರು. ಅಡ್ಯನಡ್ಕ ಜನತಾ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ 92 ಶೇಕಡಾ ಅಂಕ ಗಳಿಸಿದ ಮಹಮ್ಮದ್ ಶಾಖಿರ್ ಅವರನ್ನು ಸನ್ಮಾನಿಸಲಾಯಿತು.ಅಡ್ಯನಡ್ಕ ಮುದರಿಸ್ ತಾಜುದ್ಧೀನ್ ರೆಹಮಾನಿ ಕಾರ್ಯಕ್ರಮ ಉದ್ಘಾಟಿಸಿದರು. ಶೈಕ್ಷಣಿಕ ಮಾರ್ಗದರ್ಶಿ ಕಾರ್ಯಾಗಾರವನ್ನು ಮಂಗಳೂರು ಟ್ಯಾಲೆಂಟ್ ರಿಸರ್ಚ್ ಪೌಂಡೇಶನ್‌ನ ಸಲಹೆಗಾರ ಮಹಮ್ಮದ್ ರಫೀಕ್ ಮಾಸ್ಟರ್ ನಡೆಸಿಕೊಟ್ಟರು. ಈ ಸಂದರ್ಭ ಎಡ್ವೆನ್ಸ್ ಟ್ಯಾಲೆಂಟ್ ರಿಸರ್ಚ್ ಪೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕಣ್ಣೂರು, ಪುತ್ತೂರು ಸೇಂಟ್ ಫಿಲೋಮಿನಾ ಕಾಲೇಜಿನ ಪ್ರೊಫೆಸರ್ ಜುಬೈರ್ ಮಾಸ್ಟರ್, ನುಸ್ರತುಲ್ ಇಸ್ಲಾಂ ಯಂಗ್‌ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಶರೀಫ್ ಮೂಸಾ ಕುದ್ದುಪದವು ಇದ್ದರು.ಶಾಖಿರ್ ಕಿರಾಹತ್ ಪಠಿಸಿದರು. ಹನೀಫ್ ಹನೀಫಿ ಮರಕ್ಕಿಣಿ ದುಹಾ ಮಾಡಿದರು. ಅಬ್ದುಲ್ ಕರೀಂ ಕುದ್ದುಪದವು ಸ್ವಾಗತಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.