ಯುಎಇ ಅಧ್ಯಕ್ಷರ ವಿಹಾರದೋಣಿ ದುಬಾರಿ ಆಸ್ತಿ
ನ್ಯೂಯಾರ್ಕ್ (ಪಿಟಿಐ): ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜೈಯದ್ ಅಲ್–ನಹ್ಯಾನ್ ಅವರು ಈ ವರ್ಷ ಖರೀದಿಸಿರುವ, ಸುಮಾರು 62.7 ಕೋಟಿ ಡಾಲರ್ (ಅಂದಾಜು ₨3,887ಕೋಟಿ) ಮೌಲ್ಯದ ‘ಅಜ್ಜಾಮ್’ ಹೆಸರಿನ ವಿಹಾರ ದೋಣಿ ಯು ಇದುವರೆಗೆ ಜಗತ್ತಿನಲ್ಲಿ ಖರೀದಿಸಲಾಗಿರುವ ಐಷಾರಾಮಿ ಆಸ್ತಿಗಳಲ್ಲೇ ಅತಿ ದುಬಾರಿಯಾದುದು ಎಂದು ‘ವೆಲ್ತ್–ಎಕ್ಸ್’ ವರದಿ ಮಾಡಿದೆ.

ಸಂಘಟಿತ ಪ್ರತಿಕ್ರಿಯೆಗೆ ಅಮೆರಿಕ ಮನವಿ
ಸೋಲ್ (ಎಎಫ್ಪಿ): ಉತ್ತರ ಕೊರಿಯಾದ ಯುವ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಮಾವ ಜಾಂಗ್ ಸೊಂಗ್ಥೇಕ್ ಅವರನ್ನು ನೇಣಿಗೆ ಹಾಕಿರುವ ‘ಭೀತಿಕಾರಕ ಬೆಳವಣಿಗೆ’ ಬಗ್ಗೆ ಸಂಘಟಿತವಾಗಿ ಪ್ರತಿಕ್ರಿಯಿಸಲು ಅಮೆರಿಕ ವಿನಂತಿಸಿಕೊಂಡಿದೆ.

ಅಮೆರಿಕದಲ್ಲೂ ‘ಏಕತಾ ಓಟ’
ವಾಷಿಂಗ್ಟನ್ (ಪಿಟಿಐ): ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 63ನೇ ಪುಣ್ಯ ತಿಥಿ ಅಂಗವಾಗಿ ಇಲ್ಲಿ ಆಯೋಜಿಸಿದ್ದ ‘ಏಕತಾ ಓಟ’ದಲ್ಲಿ ಭಾರತ ಮೂಲದ ಅಮೆರಿಕ ಪ್ರಜೆಗಳು ಭಾಗವಹಿಸಿ ಗೌರವ ಸಲ್ಲಿಸಿದರು.

ಮಂಡೇಲಾ ಕಂಚಿನ ಪ್ರತಿಮೆ ಅನಾವರಣ
ಪ್ರಿಟೋರಿಯಾ (ಪಿಟಿಐ): ತವರೂರಿನಲ್ಲಿ ನೆಲ್ಸನ್ ಮಂಡೇಲಾ ಅವರ ಅಂತ್ಯಸಂಸ್ಕಾರ ನಡೆದ ಮರುದಿನವೇ 9 ಮೀಟರ್ ಎತ್ತರದ ಅವರ ಕಂಚಿನ ಪ್ರತಿಮೆಯನ್ನು ಇಲ್ಲಿ ಅನಾವರಣಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.