ಬುಧವಾರ, ಏಪ್ರಿಲ್ 14, 2021
24 °C

ವಿದೇಶ : ಸಂಕ್ಷಿಪ್ತ ಸುದ್ದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಕ್ಸಿಕೊ: ಚಂಡಮಾರುತಕ್ಕೆ 9 ಬಲಿ

ಗ್ಸಲಾಪ್ (ಎಎಫ್‌ಪಿ): `ಆರ್ನೆಸ್ಟೊ~ ಚಂಡಮಾರುತ  ಸಹಿತ ಭಾರಿ ಮಳೆ ಸುರಿಯುತ್ತಿರುವ ಮೆಕ್ಸಿಕೊದಲ್ಲಿ ಒರ್ವ ಮಹಿಳೆ ಮತ್ತು ಬಾಲಕ ಸೇರಿದಂತೆ  ಒಟ್ಟು ಒಂಬತ್ತು ಮಂದಿ  ಶುಕ್ರವಾರ ಅಸುನೀಗಿದ್ದಾರೆ.ಕಳೆದ ಒಂದು ವಾರದಿಂದ ರಭಸದಿಂದ ಬೀಸುತ್ತಿರುವ ಚಂಡಮಾರುತ ಮತ್ತು ಮಳೆಯಿಂದಾಗ, ಮೆಕ್ಸಿಕೊ ಸುತ್ತಮುತ್ತಲಿನ ಕರಾವಳಿ ಪ್ರದೇಶಗಳ ಆಸ್ತಿ-ಪಾಸ್ತಿಗೆ ಭಾರಿ ಪ್ರಮಾಣದ ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪಾಕ್ ಸೇನಾಧಿಕಾರಿಗಳ ಸಭೆ

ಇಸ್ಲಾಮಬಾದ್: (ಐಎಎನ್‌ಎಸ್):  ಪಾಕಿಸ್ತಾನ ಸೇನೆಯ ಹಿರಿಯ ಆಧಿಕಾರಿಗಳ ತಂಡ ಶುಕ್ರವಾರ ರಾತ್ರಿ ಮಹತ್ವದ ಸಭೆ ನಡೆಸಿದರು. ಈ ಬೆಳವಣಿಗೆಯನ್ನು ಅಲ್ಲಿನ ಡಾನ್ ಪತ್ರಿಕೆ ಬಹಳ ಮಹತ್ವದ್ದು ಎಂದು ಬಣ್ಣಿಸಿದೆ.ಸಭೆಯ ನಂತರ ಪತ್ರಕರ್ತರನ್ನು ಭೇಟಿಯಾದ ಸೇನಾ ಅಧಿಕಾರಿಗಳು ಭಯೋತ್ಪಾದನೆಯ ವಿರುದ್ಧ ಪಾಕಿಸ್ತಾನ ಮತ್ತು ಅಮೆರಿಕದ ಸಹಕಾರ ಸಂಬಂಧವನ್ನು ವೃದ್ಧಿಗೊಳಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ತಿಳಿಸಿದ್ದಾಗಿ ವರದಿಯಾಗಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.