ಶನಿವಾರ, ಫೆಬ್ರವರಿ 27, 2021
31 °C
ಲಕ್ಷ ಸಸಿ ನಾಟಿ, ಬಡ ಸಾಧಕ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಸಂಕಲ್ಪ

ವಿದ್ಯಾನಿಕೇತನ:ಸದ್ದಿಲ್ಲದ ಹಸಿರು ಕ್ರಾಂತಿ

ಪ್ರಜಾವಾಣಿ ವಾರ್ತೆ/ ಎಂ.ಜೆ. ಶ್ರೀನಿವಾಸ Updated:

ಅಕ್ಷರ ಗಾತ್ರ : | |

ವಿದ್ಯಾನಿಕೇತನ:ಸದ್ದಿಲ್ಲದ ಹಸಿರು ಕ್ರಾಂತಿ

ಗಂಗಾವತಿ: ಖಾಸಗಿ ಶಿಕ್ಷಣ ಸಂಸ್ಥೆಗಳು ಎಂದರೆ ಸಾಕು, ಮಕ್ಕಳ ಶಿಕ್ಷಣದ ಹೆಸರಲ್ಲಿ ಹಣಮಾಡುವ ದಂಧೆಯ ಸಂಸ್ಥೆಗಳು ಎಂಬ ತಾತ್ಸಾರದ ಮಾತು ಪಾಲಕರ ವಲಯದಲ್ಲಿ ಸಾಮಾನ್ಯವಾಗಿದೆ. ಆದರೆ ತಾಲ್ಲೂಕಿನ ಶ್ರೀರಾಮನಗರದ ಖಾಸಗಿ ವಿದ್ಯಾಸಂಸ್ಥೆಯೊಂದು ಸದ್ದಿಲ್ಲದೆ ಸಾಮಾಜಿಕ ಸೇವಾ ಚಟುವಟಿಕೆಯಲ್ಲಿ ತೊಡಗಿದೆ.ತಾಲ್ಲೂಕಿನಲ್ಲಿ ಕೇಂದ್ರೀಯ ಪಠ್ಯ ಆಧಾರಿತ ಶಿಕ್ಷಣ ಸಂಸ್ಥೆಗಳಲ್ಲಿ ಶ್ರೀರಾಮನಗರದ ಸಾಯಿಪವನ್ ಎಜ್ಯುಕೇಶನ್ ಸಂಸ್ಥೆಯ ವಿದ್ಯಾನಿಕೇತನ ಪಬ್ಲಿಕ್ ಶಾಲೆಯೂ ಒಂದು. ಇತ್ತೀಚಿನ ದಿನಗಳಲ್ಲಿ ಈ ಸಂಸ್ಥೆ ಹಮ್ಮಿಕೊಳ್ಳುತ್ತಿರುವ ಸಾಮಾಜಿಕ ಸೇವೆ, ಇತರ ಸಂಸ್ಥೆಗಳಿಗೆ ಮಾದರಿಯಾಗುತ್ತಿವೆ.ಲಕ್ಷ ಸಸಿ ನಾಟಿಯ ಗುರಿ: ಏರುತ್ತಿರುವ ಜಾಗತಿಕ ತಾಪಮಾನ ತಗ್ಗಿಸುವ ನಿಟ್ಟಿನಲ್ಲಿ ತಮ್ಮದೊಂದು ಅಳಿಲು ಸೇವೆ ಎಂದು ಭಾವಿಸಿದ ಶಿಕ್ಷಣ ಸಂಸ್ಥೆಯು, ಎರಡು ವರ್ಷದಲ್ಲಿ ಒಂದು ಲಕ್ಷ ಸಸಿಗಳನ್ನು ನೆಟ್ಟು, ಬೆಳಸುವ ಸಂಕಲ್ಪ ಕೈಗೊಂಡಿದೆ. ಸಾಲುಮರದ ತಿಮ್ಮಕ್ಕ ‘ಲಕ್ಷ ಸಸಿ ನೆಡುವ’ ಸಂಕಲ್ಪಕ್ಕೆ ಚಾಲನೆ ನೀಡಿದ್ದಾರೆ.‘ಮನೆಗೊಂದು ಮಗು, ಮಗುವಿಗೊಂದು ಮರ’ ಯೋಜನೆಯಡಿ ಸಸಿ ನಾಟಿಗೆ ಚಾಲನೆ ನೀಡಲಾಗಿದ್ದು, ಅತ್ಯುತ್ತಮ ಮರ ಬೆಳೆಸುವ ಮಕ್ಕಳಿಗೆ ಪ್ರಶಸ್ತಿ ನೀಡುವ ಉದ್ದೇಶ ಸಂಸ್ಥೆಯದ್ದು. ಎರಡು ವರ್ಷದಲ್ಲಿ ಒಂದು ಲಕ್ಷ ಸಸಿ ನೆಡಲು ₨30 ಲಕ್ಷ ಮೊತ್ತದ ಬಜೆಟ್‌ ಸಂಸ್ಥೆ ಮೀಸಲಿರಿಸಿದೆ. ಪರಿಸರ, ಮರಗಿಡಗಳ ಬಗ್ಗೆ ಜನರಲ್ಲಿ ಆಸಕ್ತಿ ಮೂಡಲಿ ಎಂಬ ಕಾರಣಕ್ಕೆ ಪ್ರತಿ ವರ್ಷ ಫಲ ನೀಡುವ ಮಾವು, ತೆಂಗು, ಚಿಕ್ಕುವಿನಂತ ಸಸಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಪ್ರತಿ ಸಸಿಗೆ ₨30 ವೆಚ್ಚ ತಗುಲುತ್ತಿದೆ. ಜನವರಿಯಲ್ಲಿ ಈಗಾಗಲೇ 15 ಸಾವಿರ ಸಸಿಗಳನ್ನು ವಿತರಿಸಲಾಗಿದೆ.ಜುಲೈ ಮೊದಲ ವಾರದಲ್ಲಿ 15 ಸಾವಿರ, ಡಿಸೆಂಬರ್ ಅಂತ್ಯಕ್ಕೆ 15 ಸಾವಿರ ಸಸಿಗಳನ್ನು ವಿತರಿಸುವ ಉದ್ದೇಶವಿದ್ದು, ಮುಂದಿನ ಶೈಕ್ಷಣಿಕ ವರ್ಷದ ಅಂತ್ಯದೊಳಗೆ ಇನ್ನುಳಿದ 55 ಸಾವಿರ ಸಸಿಗಳನ್ನು ವಿತರಿಸಲಾಗುವುದು ಎಂದು ಸಂಸ್ಥೆ ನಿರ್ದೇಶಕ ಸತ್ಯನಾರಾಯಣ ತಿಳಿಸಿದರು.ಪಟುಗಳಿಗೆ ಪ್ರೋತ್ಸಾಹ: ಜಿಲ್ಲೆಯಲ್ಲಿ ಅಥ್ಲೆಟಿಕ್‌ಗಳ ಸಂಖ್ಯೆ ವೃದ್ಧಿಸುವ ಉದ್ದೇಶದಿಂದ ಮುಂದಿನ ಶೈಕ್ಷಣಿಕ ಸಾಲಿನಿಂದ ಪ್ರಾಥಮಿಕ, ಪ್ರೌಢಶಾಲೆಯ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ನಾನಾ ಸ್ಪರ್ಧೆ ಆಯೋಜಿಸಿ ಪ್ರಥಮ ಸ್ಥಾನಗಳಿಸುವ ಮಕ್ಕಳಿಗೆ ಮುಂದಿನ ಎರಡು ವರ್ಷದ ಶಿಕ್ಷಣಕ್ಕೆ ಸಾಲುವಷ್ಟು ಸ್ಕಾಲರ್‌ಶಿಪ್‌ ರೂಪದಲ್ಲಿ ನಗದು ಹಣ ನೀಡುವ ಯೋಜನೆಯನ್ನು ಸಂಸ್ಥೆ ರೂಪಿಸಿದೆ.ಕ್ರೀಡಾಭಿಮಾನಗಳು, ಉದ್ಯಮಿಗಳು ಕೈಜೋಡಿಸಿದರೆ, ಓಟ, ಎತ್ತರ ಜಿಗಿತ, ಉದ್ದ ಜಿಗಿತ ಹೀಗೆ ನಾನಾ ಅಥ್ಲೆಟಿಕ್‌ ಸ್ಫರ್ಧೆ  ಆಯೋಜಿಸಿ ಬಹುಮಾನ ಪಡೆಯುವ ಮಕ್ಕಳಿಗೆ ಜಿಲ್ಲಾಮಟ್ಟದ ಪ್ರಶಸ್ತಿ ನೀಡಿ ಭಾವಚಿತ್ರವುಳ್ಳ ಬೋರ್ಡ್‌ಗಳನ್ನು ವಿವಿಧ ಇಲಾಖೆ ಕಚೇರಿಗಳ ಮುಂದೆ ಹಾಕುವ ಯೋಜನೆಯನ್ನು ಸಂಸ್ಥೆ ರೂಪಿಸಿದೆ.ಕೇವಲ ಈ ಒಂದೆರಡಷ್ಟೇ ಸಾಮಾಜಿಕ ಕಾರ್ಯಗಳಲ್ಲ, ಸಾರ್ವಜನಿಕರಿಗೆ, ಮಕ್ಕಳಿಗೆ ಉಪಯೋಗವಾಗುವ ಯಾವುದೇ ಕಾರ್ಯಮಕ್ಕೆ, ಜನಜಾಗೃತಿಗೆ ಕೈಜೋಡಿಸಲು ತಮ್ಮ ಸಂಸ್ಥೆ ಸದಾ ಸಿದ್ಧವಾಗಿರುತ್ತದೆ ಎಂದು ಪ್ರಾಚಾರ್ಯ ಅರಿವರಸು ತಿಳಿಸುತ್ತಾರೆ.ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ, ಎಸ್ಸೆಸ್ಸೆಲ್ಸಿಗೆಪ್ರಥಮ ಪಡೆದ ಬಡ ವಿದ್ಯಾರ್ಥಿಗೆ 2016-–17ನೇ ಶೈಕ್ಷಣಿಕ ವರ್ಷದಿಂದ ನಮ್ಮ ಲ್ಲಿ ಪಿಯುಸಿಗೆ ಉಚಿತ ಶಿಕ್ಷಣ ನೀಡಲಾಗುವುದು. ಎನ್. ಸೂರಿಬಾಬು, ಅಧ್ಯಕ್ಷ, ಸಾಯಿಪವನ್ ವಿದ್ಯಾಸಂಸ್ಥೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.