ಮಂಗಳವಾರ, ಏಪ್ರಿಲ್ 13, 2021
30 °C

ವಿದ್ಯಾರ್ಥಿ ನಿಲಯಗಳ ಬಾಡಿಗೆಯೇ ರೂ 50 ಲಕ್ಷ!

ಪ್ರಜಾವಾಣಿ ವಾರ್ತೆ/ ಸುಭಾಸ.ಎಸ್.ಮಂಗಳೂರ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರು ಜಿಲ್ಲೆಯನ್ನು `ಸ್ವಂತ ಊರಿನ ಸೂರು~ ಮಾಡಲು ಭರದ ಸಿದ್ಧತೆಗಳು ನಡೆದಿವೆ! ಆದರೆ, ಜಿಲ್ಲೆಯ 19 ವಿದ್ಯಾರ್ಥಿ ನಿಲಯಗಳಿಗೆ ಮಾತ್ರ ನಿವೇಶನ ಲಭ್ಯವಾಗಿಲ್ಲ. ಪರಿಣಾಮ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರತಿ ತಿಂಗಳು ಬರೋಬ್ಬರಿ 50 ಲಕ್ಷ ರೂಪಾಯಿ ಬಾಡಿಗೆ ಪಾವತಿಸುತ್ತಿದೆ.ಹೌದು. ಮೈಸೂರು ಜಿಲ್ಲೆಯಲ್ಲಿ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರ, ಆಶ್ರಮ ಶಾಲೆ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ಒಟ್ಟು 78 ವಿದ್ಯಾರ್ಥಿ ನಿಲಯ ಗಳಿವೆ. ಈ ಪೈಕಿ 59 ಹಾಸ್ಟೆಲ್‌ಗಳು ಸ್ವಂತ ಕಟ್ಟಡ ಹೊಂದಿದ್ದು, 19 ಹಾಸ್ಟೆಲ್‌ಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಈ ಕಟ್ಟಡಗಳ ತಿಂಗಳ ಒಟ್ಟು ಬಾಡಿಗೆ ರೂ. 50,20,85 ಮಾತ್ರ!47 ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ 41ರಲ್ಲಿ 1830 ಬಾಲಕರು ಹಾಗೂ 6 ರಲ್ಲಿ 275 ಬಾಲಕಿಯರು ಸೇರಿದಂತೆ ಒಟ್ಟು 2105 ವಿದ್ಯಾರ್ಥಿಗಳು ಇದ್ದಾರೆ. 26 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ 14ರಲ್ಲಿ 2148 ಬಾಲಕರು ಹಾಗೂ 12ರಲ್ಲಿ 1430 ಬಾಲಕಿಯರು ಸೇರಿದಂತೆ ಒಟ್ಟು 3578 ವಿದ್ಯಾರ್ಥಿಗಳು, 2 ಆಶ್ರಮ ಶಾಲೆಯಲ್ಲಿ 100 ವಿದ್ಯಾರ್ಥಿಗಳು ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 750 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.ಹಾಸ್ಟೆಲ್‌ನ ಸಮಸ್ಯೆಗಳು: ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲಾಗಿದೆ. ಅದಕ್ಕೆ ಅನುಗುಣವಾಗಿ ಸಿಬ್ಬಂದಿ ನೇಮಕಾತಿ ನಡೆದಿಲ್ಲ. 2012-13 ನೇ ಸಾಲಿಗೆ ಆಹಾರ ಸರಬರಾಜು ಮಾಡಲು ಇದುವರೆಗೂ ಟೆಂಡರ್ ಪ್ರಕ್ರಿಯೆ ಮುಗಿದಿಲ್ಲ. ಸಿಲಿಂಡರ್ ದರ ಹೆಚ್ಚಳದಿಂದ `ಬೇಳೆ~ ಬೇಯುತ್ತಿಲ್ಲ. ಹೆಚ್ಚುವರಿ ಅನುದಾನ ಲಭ್ಯವಿಲ್ಲ. ನಿಲಯ ಪಾಲಕರು, ನಿಲಯ ಮೇಲ್ವಿಚಾರಕರು, ಅಡುಗೆ ಸಿಬ್ಬಂದಿ, ಅಡುಗೆ ಸಹಾಯಕರು, ರಾತ್ರಿ ಕಾವಲುಗಾರರ ಹುದ್ದೆಗಳು ಖಾಲಿ ಇವೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.