ಬಳ್ಳಾರಿ: ಜಿಲ್ಲೆಯಾದ್ಯಂತ ವಿದ್ಯುತ್ ಅಭಾವ ಹೆಚ್ಚಾಗಿರುವುದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ವಿದ್ಯುತ್ ಕಡಿತದಿಂದಾಗಿ ವರ್ತಕರಿಗೆ, ವ್ಯಾಪಾರಿ ಗಳಿಗೆ, ಜೀನ್ಸ್ ಉತ್ಪಾದನಾ ಘಟಕ ಗಳಿಗೂ ತೀವ್ರ ಸಮಸ್ಯೆ ಎದುರಾಗಿದೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎನ್. ಸೂರ್ಯನಾರಾಯಣ ರೆಡ್ಡಿ ಆಗ್ರಹಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಕುರಿತು ಪಕ್ಷದ ವತಿಯಿಂದ ಮನವಿ ಸಲ್ಲಿಸಿರುವ ಅವರು, ಬಳ್ಳಾರಿ ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಇರುವ ಬೀದಿ ದೀಪಗಳಲ್ಲಿ ಕೆಲವು ಕಂಬಗಳಲ್ಲಿನ ದೀಪಗಳನ್ನು ಮಾತ್ರ ಬೆಳಗಿಸಬೇಕು. ನಗರದ ಕೆಲವು ವೃತ್ತಗಳಲ್ಲಿ ಅನವಶ್ಯಕವಾಗಿ ಪ್ರಖರವಾದ ದೀಪಗಳನ್ನು ತೆಗೆದು, ಅಂತಹ ವೃತ್ತಗಳಲ್ಲಿ ಟ್ಯೂಬ್ ಲೈಟ್ ಅಳವಡಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ವಾಣಿಜ್ಯ ಮಳಿಗೆಗಳಲ್ಲಿ ಗ್ರಾಹಕ ರನ್ನು ಆಕರ್ಷಿಸಲು ಬಳಸುತ್ತಿರುವ ವಿದ್ಯುತ್ ಅಲಂಕಾರಕ್ಕೂ ಕಡಿವಾಣ ಹಾಕಬೇಕು. ಕೆಲವು ಪ್ರದೇಶಗಳಲ್ಲಿ ಬೀದಿ ದೀಪಗಳು ಹಗಲಲ್ಲೂ ಉರಿಯುತ್ತಿದ್ದು, ಅವುಗಳಿಗೂ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದ್ದಾರೆ.

ಬಳ್ಳಾರಿ ಜಿಲ್ಲೆಯ ಬಿಸಿಲಿನ ನಾಡು ಆಗಿರುವುದರಿಂದ ಸೋಲಾರ್ ಬಳಕೆಗೆ ಕ್ರಮ ಕೈಗೊಳ್ಳಬೇಕು. ಈ ಕುರಿತು ಸಾರ್ವಜನಿಕರ ಸಭೆ ಕರೆದು ವಿದ್ಯುತ್ನ ಮಿತಬಳಕೆ ಕುರಿತು ಅರಿವು ಮೂಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.