ಭಾನುವಾರ, ಏಪ್ರಿಲ್ 11, 2021
20 °C

ವಿಧಾನಸಭಾ ಕ್ಷೇತ್ರ ಇನ್ನು ತಾಲ್ಲೂಕು?:ಸರ್ಕಾರದ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ರಾಜ್ಯದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರವನ್ನು ತಾಲ್ಲೂಕು ಕೇಂದ್ರವಾಗಿ ಘೋಷಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭಾನುವಾರ ಇಲ್ಲಿ ತಿಳಿಸಿದರು.ಇಳಕಲ್ ತಾಲ್ಲೂಕು ರಚನೆಗೆ ಒತ್ತಾಯಿಸಿ ಅಲ್ಲಿನ ಶಾಸಕ ದೊಡ್ಡನಗೌಡ ಪಾಟೀಲರ ನೇತೃತ್ವದಲ್ಲಿ ಆಗಮಿಸಿದ್ದ ನಿಯೋಗದೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ರಾಜ್ಯದಲ್ಲಿ ವಿಧಾನಸಭೆ ಕ್ಷೇತ್ರ ಪುನರ್ವಿಂಗಡಣೆ ನಂತರ ಭೌಗೋಳಿಕ ವ್ಯಾಪ್ತಿ ಹಾಗೂ ಅಧಿಕಾರ ಹಂಚಿಕೆ ವಿಚಾರದಲ್ಲಿ ಕೆಲವು ತಾಂತ್ರಿಕ ತೊಂದರೆಗಳು ಎದುರಾಗಿವೆ. ಒಂದೇ ತಾಲ್ಲೂಕಿನಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳು ಬರುವುದರಿಂದ ಅಭಿವೃದ್ಧಿ ಕಾರ್ಯಗಳ ಸಮಾನ ಹಂಚಿಕೆಯಲ್ಲಿಯೂ ತಾರತಮ್ಯ ಕಾಣುತ್ತಿದೆ. ಆದ್ದರಿಂದ ವಿಧಾನಸಭಾ ಕ್ಷೇತ್ರಗಳನ್ನೇ ತಾಲ್ಲೂಕು ಕೇಂದ್ರಗಳಾಗಿ ರಚಿಸುವಂತೆ ಬಹುತೇಕ ಶಾಸಕರು ಒತ್ತಾಯಿಸುತ್ತಿದ್ದಾರೆ ಎಂದರು.ಈ ಹಿಂದೆ ನೂತನ ತಾಲ್ಲೂಕುಗಳ ರಚನೆ ಕುರಿತು ಅಧ್ಯಯನ ನಡೆಸಲು ನೇಮಕಗೊಂಡಿದ್ದ ಸಮಿತಿಗಳು ಏನೇ ವರದಿ ನೀಡಿದ್ದರೂ, ಬದಲಾದ ಪರಿಸ್ಥಿತಿಯಲ್ಲಿ ವಿಧಾನಸಭಾ ಕ್ಷೇತ್ರವನ್ನು ತಾಲ್ಲೂಕು ಕೇಂದ್ರವಾಗಿಸುವ ಅನಿವಾರ್ಯತೆ ಎದುರಾಗಿದೆ ಎಂದರು.ಇಳಕಲ್‌ನಿಂದ 100ಕ್ಕೂ ಹೆಚ್ಚು ಮಂದಿಯ ನಿಯೋಗ ವಿಶೇಷ ಬಸ್‌ನಲ್ಲಿ ಶೆಟ್ಟರ್ ಅವರನ್ನು ಭೇಟಿ ಮಾಡಲು ಹುಬ್ಬಳ್ಳಿಗೆ ಆಗಮಿಸಿತ್ತು. ಇಳಕಲ್ ತಾಲ್ಲೂಕು ರಚನೆ ಹೋರಾಟ ಸಮಿತಿ ಮುಖಂಡರಾದ ಕೆ.ಎಸ್.ಕಂಡಿಕೊಂಡ, ಸಿ.ಸಿ.ಚಂದ್ರಪಟ್ಟಣ, ಬಸವರಾಜ ಮಠ, ನಗರಸಭೆ ಅಧ್ಯಕ್ಷೆ ವಿಜಯಾ ಬಂಡಿ, ಧಾರವಾಡ ಸಂಸದ ಪ್ರಹ್ಲಾದ ಜೋಶಿ ಸಭೆಯಲ್ಲಿ ಪಾಲ್ಗೊಂಡಿದ್ದರು.ಮುಖ್ಯಾಂಶಗಳು


ವಿಧಾನಸಭಾ ಕ್ಷೇತ್ರ ತಾಲ್ಲೂಕು ಕೇಂದ್ರಮಾಡುವ ಅನಿವಾರ್ಯತೆ.

ವಿಧಾನಸಭೆ ಕ್ಷೇತ್ರ ಪುನರ್‌ವಿಂಗಡಣೆ ನಂತರ ಕೆಲ ತಾಂತ್ರಿಕ ತೊಂದರೆ ಉದ್ಭವ.

ಬಹುತೇಕ ಶಾಸಕರ ಒತ್ತಾಯ.`ಸೌಜನ್ಯದ ಎಲ್ಲೆಯೊಳಗೆ ಟೀಕೆ~

ಹುಬ್ಬಳ್ಳಿ: `ನಮ್ಮಂಥವರಿಗಂತೂ ಆ ಭಾಷೆ ಮಾತನಾಡಲು ಸಾಧ್ಯವೇ ಇಲ್ಲ. ಅಂತಹ ವ್ಯಕ್ತಿತ್ವ ಬರಲೂ ಸಾಧ್ಯವಿಲ್ಲ. ತೀರ ಕೆಳಮಟ್ಟದ ರಾಜಕೀಯ ವ್ಯವಸ್ಥೆಯಲ್ಲಿ ನಾವಿದ್ದೇವೆ. ಅದರಿಂದ ಹೊರಬಂದು ಸಾಂಸ್ಕೃತಿಕವಾಗಿ ಮಾತನಾಡುವುದನ್ನು ಮತ್ತು ಸೌಜನ್ಯದ ಎಲ್ಲೆಯೊಳಗೆ ಟೀಕೆ ಮಾಡುವುದನ್ನು ಬೆಳೆಸಿಕೊಳ್ಳಬೇಕಾಗಿದೆ~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ಹರಿಹಾಯ್ದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.