ಗಾಂಧಿನಗರ (ಪಿಟಿಐ): ವಿಧಾನಸಭೆಯಲ್ಲಿ ಕಲಾಪ ನಡೆಯುತ್ತಿರುವಾಗ ಅಶ್ಲೀಲ ಚಿತ್ರ ವೀಕ್ಷಿಸಿ ಸಿಕ್ಕಿ ಬೀಳುವ ಸರದಿ ಇದೀಗ ಗುಜರಾತ್ ಶಾಸಕರದು. ಮಹಾತ್ಮ ಗಾಂಧಿ ಅವರ ತಾಯ್ನೆಲವಾದ ಗುಜರಾತ್ ಇದೀಗ ರಾಷ್ಟ್ರಮಟ್ಟದಲ್ಲಿ ಶಾಸಕರ ಅಶ್ಲೀಲ ಚಿತ್ರ ವೀಕ್ಷಣೆಯಂತಹ ಅಸಹ್ಯ ಘಟನೆಗೆ ಸಾಕ್ಷಿಯಾಗಿದೆ.

ಬುಧವಾರ ಸದನದಲ್ಲಿ ಕಲಾಪ ನಡೆಯುತ್ತಿರುವಾಗ ಬಿಜೆಪಿಯ ಶಂಕರ ಚೌಧರಿ ಹಾಗೂ ಜಿತಾ ಬಾರ್ವಾದ್ ಅವರು ತಮ್ಮ ಟ್ಯಾಬ್ಲೆಟ್ಗಳಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಮಾಡುತ್ತಿದ್ದರು. ಇದನ್ನು ಗಮನಿಸಿದ ಹಿರಿಯ ಪತ್ರಕರ್ತ ಜನಕ್ ದೇವ್ ತಕ್ಷಣವೇ ಸಭಾಪತಿ ಅವರಿಗೆ ದೂರು ನೀಡಿದರು.

ದೂರನ್ನು ಸ್ವೀಕರಿಸಿದ ಸಭಾಪತಿ ಘಟನೆ ಕುರಿತು ತನಿಖೆಗೆ ಆದೇಶಿಸಿದ್ದಾರೆ.

ನಂತರ ಸದನದಲ್ಲಿ ಘಟನೆ ಕುರಿತು ಕೋಲಾಹಲವೇ ನಡೆಯಿತು. ಕಾಂಗ್ರೆಸ್ ಸದಸ್ಯರು ಇಬ್ಬರು ಶಾಸಕರನ್ನೂ ಸದನದಿಂದ ಉಚ್ಚಾಟಿಸಬೇಕೆಂದು ಗದ್ದಲ ಎಬ್ಬಿಸಿದರು. ಕಲಾಪವನ್ನು ಮುಂದೂಡಿದರೂ ಪಟ್ಟು ಬಿಡದ ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಕಚೇರಿ ಬಳಿ ಘೋಷಣೆಗಳನ್ನು ಕೂಗುತ್ತಾ ಆರೋಪಿಗಳ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.