ಶುಕ್ರವಾರ, ಜೂನ್ 18, 2021
28 °C

ವಿನಿಮಯ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ದೇಶದ ವಿದೇಶಿ ವಿನಿಮಯ ಸಂಗ್ರಹವು  ಮಾರ್ಚ್‌ 7ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ  109 ಕೋಟಿ ಡಾಲರ್‌ಗಳಷ್ಟು ಹೆಚ್ಚಿದ್ದು (₨6758 ಕೋಟಿ) 29545 ಕೋಟಿ ಡಾಲರ್‌ಗಳಿಗೆ (₨18.31 ಲಕ್ಷ ಕೋಟಿಗೆ) ಏರಿಕೆ ಕಂಡಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಹೇಳಿದೆ.



ಹಿಂದಿನ ವಾರಾಂತ್ಯದಲ್ಲಿ ವಿದೇಶಿ ವಿನಿಮಯ ಸಂಗ್ರಹ 29436 ಕೋಟಿ ಡಾಲರ್‌ (₨18.25 ಲಕ್ಷ ಕೋಟಿ) ಗಳಷ್ಟಿತ್ತು. ‘ಆರ್‌ಬಿಐ’ ಬಳಿ 2097 ಕೋಟಿ ಡಾಲರ್‌ ಮೌಲ್ಯದ (₨1.30 ಲಕ್ಷ ಕೋಟಿ) ಚಿನ್ನದ ಮೀಸಲು ಇದ್ದು, ಕಳೆದ ವಾರಾಂತ್ಯಕ್ಕೆ ಹೋಲಿ­ಸಿದರೆ ಮೌಲ್ಯದಲ್ಲಿ ವ್ಯತ್ಯಾಸವಾಗಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.