ಬುಧವಾರ, ಜನವರಿ 22, 2020
21 °C

ವಿಮಾನಗಳ ಹಾರಾಟ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್‌ (ಎಎಫ್‌ಪಿ): ಟಿಬೆಟ್‌ ರಾಜ­ಧಾನಿ ಲಾಸಾದಲ್ಲಿ ಶುಕ್ರವಾರ ಮಾಲಿನ್ಯ   ತುಂಬಿದ ಮೋಡ ಕವಿದಿದ್ದ ಕಾರಣ ವಿಮಾನಗಳ ಹಾರಾಟ ಸ್ಥಗಿತ­ವಾಗಿತ್ತು.

ವಿಶ್ವದ ಅತಿಎತ್ತರದ ಈ ನಗರವನ್ನು ಈಚೆಗಷ್ಟೇ ಚೀನಾ ಪರಿಸರ ಸಂರ­ಕ್ಷಣಾ ಸಚಿವಾಲಯವು ಅತ್ಯಂತ ಉತ್ತಮ ಗುಣ­ಮಟ್ಟದ ವಾಯು ಹೊಂದಿರುವ ನಗರ ಎಂದು ಗುರುತಿಸಿತ್ತು.

  ಆದರೆ ಟಿಬೆ­ಟ್‌ನ ಉತ್ತರ ಪ್ರಸ್ಥಭೂಮಿಯಲ್ಲಿ ದೂಳು ಎದ್ದ ಪರಿಣಾಮ ದಪ್ಪನೆಯ ಮೋಡದ ವಾತಾವರಣ ಉಂಟಾಗಿರುವು­ದಾಗಿ ಹಾಂಕಾಂಗ್‌ ಮೂಲದ ಇಫೆಂಗ್.ಕಾಮ್‌ ವೆಬ್‌­ಸೈಟ್‌ ವರದಿ ಮಾಡಿದೆ.

ಪ್ರತಿಕ್ರಿಯಿಸಿ (+)